ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ರೈತರು ಬಲಿ: ಶಾಸಕ ಕೆ.ಎಂ.ಉದಯ್ ಕಿಡಿ

| Published : Sep 06 2025, 01:00 AM IST

ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ರೈತರು ಬಲಿ: ಶಾಸಕ ಕೆ.ಎಂ.ಉದಯ್ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ರೈತರ ಕಲ್ಯಾಣಕ್ಕೆ ಕೃಷಿ ಸಹಕಾರ ಸಂಘಗಳ ಪಾತ್ರ ದೊಡ್ಡದಾಗಿದೆ. ಸಂಘಗಳ ಅಭಿವೃದ್ಧಿಗೆ ರೈತರು ತಮ್ಮನ್ನು ತೊಡಗಿಸಿಕೊಳ್ಳಬೇಕು. ರೈತರಿಗೆ ಅನುಕೂಲಕರವಾಗುವಂತೆ ವಿವಿಧ ಯೋಜನೆಗಳು, ಸಾಲ ಸೌಲಭ್ಯಗಳನ್ನು ಒದಗಿಸಲು ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಹಕಾರಿ ಸಂಘಗಳಲ್ಲಿನ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ರೈತರು ಬಲಿಯಾಗಿ ಸಂಘಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಶಾಸಕ ಕೆ.ಎಂ.ಉದಯ್ ಕಿಡಿಕಾರಿದರು.

ಸಮೀಪದ ಕಾಡುಕೊತ್ತನಹಳ್ಳಿಯಲ್ಲಿ ನೈಸರ್ಗಿಕ ಕೃಷಿಕರ ಸಂಘದ ಸಹಯೋಗದೊಂದಿಗೆ ನೂತನವಾಗಿ ಆರಂಭಗೊಂಡಿರುವ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘಗಳಲ್ಲಿ ಆಡಳಿತ ನಡೆಸುವವರು ಹಾಗೂ ಕಾರ್ಯ ನಿರ್ವಹಿಸುವವರು ಸರಿಯಾದ ಮಾರ್ಗದಲ್ಲಿ ಸಾಗದೇ ಸಂಘಗಳಲ್ಲಿ ಹಗರಣಗಳು ನಡೆದು ರೈತರಿಗೆ ಎದುರಾಗಿ ಮುಚ್ಚುವಂಥ ಸ್ಥಿತಿಗೆ ಬಂದಿರುವ ನಿದರ್ಶನಗಳು ಕಣ್ಣು ಮುಂದಿವೆ ಎಂದರು.

ಗ್ರಾಮೀಣ ಪ್ರದೇಶದ ರೈತರ ಕಲ್ಯಾಣಕ್ಕೆ ಕೃಷಿ ಸಹಕಾರ ಸಂಘಗಳ ಪಾತ್ರ ದೊಡ್ಡದಾಗಿದೆ. ಸಂಘಗಳ ಅಭಿವೃದ್ಧಿಗೆ ರೈತರು ತಮ್ಮನ್ನು ತೊಡಗಿಸಿಕೊಳ್ಳಬೇಕು. ರೈತರಿಗೆ ಅನುಕೂಲಕರವಾಗುವಂತೆ ವಿವಿಧ ಯೋಜನೆಗಳು, ಸಾಲ ಸೌಲಭ್ಯಗಳನ್ನು ಒದಗಿಸಲು ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘವು ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಬಸವರಾಜು ಸಹಕಾರ ಸಂಘಗಳ ಕುರಿತು ಮಾತನಾಡಿದರು. ಸಭೆಯ ಸಂಘದ ಅಧ್ಯಕ್ಷ ಕೆ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕೃಷಿ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್ಮುಲ್ ನಿರ್ದೇಶಕ ಹರೀಶ್ ಬಾಬು, ಭಾರತೀ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ತಾಪಂ ಮಾಜಿ ಅಧ್ಯಕ್ಷ ಕಪನಿಗೌಡ, ತೋಟಗಾರಿಕೆ ಇಲಾಖೆ ಸಚಿವರ ಹಿರಿಯ ಆಪ್ತ ಸಹಾಯಕ ಎಸ್.ಮಾದಯ್ಯ, ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಧಾಕರ್, ಮುಖಂಡರಾದ ಚಿದಂಬರ ಮೂರ್ತಿ, ಅಮಿನ್ ಶಿವಲಿಂಗಯ್ಯ,ಸಂಘದ ಉಪಾಧ್ಯಕ್ಷ ಬಿ.ರುದ್ರಸ್ವಾಮಿ, ನಿರ್ದೇಶಕರಾದ ಪುಟ್ಟಸ್ವಾಮಿ, ಮಹೇಂದ್ರ, ಪುಟ್ಟಅಂಕೆಗೌಡ, ನಂಜುಂಡಪ್ಪ, ವೀರಭದ್ರ, ಚೆಲುವರಾಜು, ಮಹೇಶ್ ಕುಮಾರ್, ಸಣ್ಣಮ್ಮ, ಭಾಗ್ಯ , ಪ್ರಭಾರ ಸಿಇಒ ಮಧುಸೂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..