ಬಂಗಾರಪೇಟೆ ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡುವ ನಿರ್ಧಾರವನ್ನು ಕೈಬಿಟ್ಟು ಲಕ್ಷಾಂತರ ನೌಕರರ ಬದುಕು ಕೃಷಿ ಕ್ಷೇತ್ರದ ಭವಿಷ್ಯವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಇಂಧನ ಸಚಿವರನ್ನು ಒತ್ತಾಯಿಸಿದರು.
ಬಂಗಾರಪೇಟೆ: ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡುವ ನಿರ್ಧಾರವನ್ನು ಕೈಬಿಟ್ಟು ಲಕ್ಷಾಂತರ ನೌಕರರ ಬದುಕು ಕೃಷಿ ಕ್ಷೇತ್ರದ ಭವಿಷ್ಯವನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಇಂಧನ ಸಚಿವರನ್ನು ಒತ್ತಾಯಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ಬೆಸ್ಕಾಂ ಕ್ಷೇತ್ರದ ಮೇಲೆ ಬಹುರಾಷ್ಟ್ರೀಯ ಟಾಟಾ ಕಂಪನಿಯ ವಕ್ರದೃಷ್ಟಿ ಬಿದ್ದು ಬೆಸ್ಕಾಂ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ನೌಕರರ ಬದುಕನ್ನು ಬೀದಿಗೆ ತಳ್ಳಿ ಅವರ ಅನ್ನವನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ಹಾಗಾಗಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ರೈತರು ನೌಕರರು ಹೋರಾಟಕ್ಕೆ ಮುಂದಾಗಿದ್ದಾರೆ ಎಂದರು.ವಿದ್ಯುತ್ ಖಾಸಗೀಕರಣ ಮಾಡುವುದರಿಂದ ಕೃಷಿ ಮತ್ತು ರೈತ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಖಾಸಗೀಕರಣದ ಒಡೆತನದಿಂದ ಕೃಷಿ ಉತ್ಪನ್ನಗಳು ಕುಂಟಿತವಾಗುವ ಜೊತೆಗೆ ಖಾಸಗಿ ಕಂಪನಿಗಳು ವಿದ್ಯುತ್ ಪ್ರಸರಣ ನಿಗಮವನ್ನು ವಹಿಸಿಕೊಂಡಲ್ಲಿ ನಿಯಮ ಮತ್ತು ಷರತ್ತುಗಳನ್ನು ಹೇರಿ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ಕೃಷಿ ಚಟುವಟಿಕೆ ವಿಫಲವಾಗುತ್ತದೆ. ಆಗ ರೈತರು ಕೃಷಿ ಬಿಟ್ಟು ಹೊರ ಬರುವ ಹಾಗೂ ಅವಕಾಶವಾದಿಯಾಗಿ ಕಾಯುತ್ತಿರುವ ಬಂಡವಾಳ ಶಾಹಿಗಳು ಮತ್ತು ಶ್ರೀಮಂತರು ಕೃಷಿ ಭೂಮಿಯನ್ನು ಅಕ್ರಮಿಸಿ ಮೂಲ ಕೃಷಿಕರನ್ನು ಕೂಲಿ ಕಾರ್ಮಿಕರಂತೆ ನೆಮಕ ಮಾಡಿಕೊಳ್ಳುವ ಜೊತೆಗೆ ಭೂಗಳ್ಳರು ರಿಯಲ್ ಎಸ್ಟೇಟ್ ಉದ್ದಿಮೆಗಳ ಹಿಡತಕ್ಕೆ ಬಡವರ ಭೂಮಿ ಸಿಲುಕಿ ಅನ್ನದಾತನನ್ನು ಬೀದಿಗೆ ತಳ್ಳಿ ಮುಂದಿನ ದಿನಗಳಲ್ಲಿ ಆಹಾರ ಅಭದ್ರತೆ ಸೃಷ್ಟಿಯಾಗುತ್ತದೆ ಎಂದು ಸರ್ಕಾರಕ್ಕೆ ಖಾಸಗೀಕರಣದ ಲೋಪದೋಷಗಳ ಬಗ್ಗೆ ಮನವರಿಕೆ ಮಾಡಿದರು.ಈ ವೇಳೆ ಜಿಲ್ಲಾಧ್ಯಕ್ಷ ಮಂಜುನಾಥ್, ತಾ.ಅ.ಕದರಿನತ್ತ ಅಪ್ಲೋಜಿರಾವ್, ಮುನಿಕೃಷ್ಣ, ವಿಶ್ವ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಕಿರಣ್, ಚಾಂದ್‌ಪಾಷ, ಪಾರುಕ್ ಪಾಷ ರಾಜೇಶ್, ಸುಪ್ರಿಂ ಚಲ, ಪುತ್ತೇರಿರಾಜು, ನಾಗರಾಜ, ಸುನಿಲ್‌ಕುಮಾರ್, ಜುಬೇರ್ ಪಾಷ, ಯಲ್ಲಣ್ಣ, ರಾಮಸಾಗರ ವೇಣು, ವಕ್ಕಲೇರಿ ಹನುಮಯ್ಯ, ಹೆಬ್ಬಣಿ ಆನಂದರೆಡ್ಡಿ ಇದ್ದರು.