ಸಾರಾಂಶ
ಬೆಳೆ ನಷ್ಟದ ಮಾಹಿತಿಯು ಭೂಮಿ ಪರಿಹಾರ ತಂತ್ರಾಂಶದ ಮೂಲಕ ಅನುಮೋದನೆ ನೀಡಲಾಗಿದ್ದ 1ನೇ ಮತ್ತು 2ನೇ ಹಂತದಲ್ಲಿ ಒಟ್ಟು 36,130 ರೈತ ಫಲಾನುಭವಿಗಳಿಗೆ ₹7,11,57,819 ಕೋಟಿ ಸರಕಾರದ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಹಣ ಮಂಜೂರಾತಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಎರಡು ದಿನಗಳೊಳಗಡೆ ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ ಆರೂ ತಾಲೂಕುಗಳನ್ನು ಬರಪೀಡಿತ ಎಂದು ಸರಕಾರ ಘೋಷಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಬೆಳೆ ನಷ್ಟದ ಮಾಹಿತಿಯು ಭೂಮಿ ಪರಿಹಾರ ತಂತ್ರಾಂಶದ ಮೂಲಕ ಅನುಮೋದನೆ ನೀಡಲಾಗಿದ್ದ 1ನೇ ಮತ್ತು 2ನೇ ಹಂತದಲ್ಲಿ ಒಟ್ಟು 36,130 ರೈತ ಫಲಾನುಭವಿಗಳಿಗೆ 7,11,57,819 ಕೋಟಿ ರು.ಗಳು ಸರಕಾರದ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಹಣ ಮಂಜೂರಾತಿ ನೀಡಲಾಗಿದೆ. ಸದರಿ ಇನ್ ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ ಸಂಖ್ಯೆಗೆ ಜೋಡಣೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಅನುಮೋದನೆ ನೀಡಲಾಗಿದೆ. ಸದರಿ ಇನ್ ಪುಟ್ ಸಬ್ಸಿಡಿಯು 2 ದಿನಗಳ ಒಳಗಡೆ ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.