ನಗರದ ಹೊರವಲಯದಲ್ಲಿ ದರೋಡೆ ನಡೆದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಮ್ಮ ವ್ಯಾಪ್ತಿಯ 228 ಚಿನ್ನಾಭರಣ ಮಾರಾಟ ಮಳಿಗೆಗಳ ಭದ್ರತಾ ವ್ಯವಸ್ಥೆಯನ್ನು ಶನಿವಾರ ಪೂರ್ವ ವಿಭಾಗದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಹೊರವಲಯದಲ್ಲಿ ದರೋಡೆ ನಡೆದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಮ್ಮ ವ್ಯಾಪ್ತಿಯ 228 ಚಿನ್ನಾಭರಣ ಮಾರಾಟ ಮಳಿಗೆಗಳ ಭದ್ರತಾ ವ್ಯವಸ್ಥೆಯನ್ನು ಶನಿವಾರ ಪೂರ್ವ ವಿಭಾಗದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಚಿನ್ನಾಭರಣ ಮಾರಾಟ ಮಳಿಗೆಗಳಲ್ಲಿ ದರೋಡೆ, ಸುಲಿಗೆ ಹಾಗೂ ಕಳ್ಳತನ ಕೃತ್ಯಗಳಿಗೆ ಕಡಿವಾಣ ಹಾಕಲು ಬಂದೋಬಸ್ತ್ ವ್ಯವಸ್ಥೆ ಪರಿಶೀಲಿಸುವಂತೆ ಡಿಸಿಪಿ ಡಾ.ವಿಕ್ರಂ ಅಮಟೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಂಗಡಿಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಭದ್ರತಾ ಕಾವಲುಗಾರರ ನೇಮಿಸಿಕೊಳ್ಳುವಂತೆ ಸಹ ಮಾಲಿಕರಿಗೆ ಪೊಲೀಸರು ತಾಕೀತು ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಮಾರಾಟ ಮಳಿಗೆಗೆ ದುಷ್ಕರ್ಮಿಗಳು ನುಗ್ಗಿ ದರೋಡೆ ಮಾಡಿದ್ದರು.
