ಸಮರ್ಪಕ ವಿದ್ಯುತ್‌ಗೆ ರೈತರ ಆಗ್ರಹ

| Published : Apr 17 2024, 01:27 AM IST

ಸಾರಾಂಶ

ಪಟ್ಟಣ ಸೇರಿದಂತೆ ಸ್ಥಳೀಯ ಜಮೀನುಗಳಿಗೆ ನೀಡಲಾಗುವ ವಿದ್ಯುತ್ ವ್ಯವಸ್ಥೆಯಲ್ಲಿ ನಿರಂತರ ನಿಲುಗಡೆಯಾಗುತ್ತಿದ್ದು, ಕೂಡಲೇ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು, ಸಾರ್ವಜನಿಕರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣ ಸೇರಿದಂತೆ ಸ್ಥಳೀಯ ಜಮೀನುಗಳಿಗೆ ನೀಡಲಾಗುವ ವಿದ್ಯುತ್ ವ್ಯವಸ್ಥೆಯಲ್ಲಿ ನಿರಂತರ ನಿಲುಗಡೆಯಾಗುತ್ತಿದ್ದು, ಕೂಡಲೇ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ರೈತರು, ಸಾರ್ವಜನಿಕರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮಂಗಳವಾರ ಹೆಸ್ಕಾಂ ಕಚೇರಿ ಆವರಣಕ್ಕೆ ಬಂದ ರೈತರು ಹಾಗೂ ಸಾರ್ವಜನಿಕರು ವಿದ್ಯುತ್ ಪೂರೈಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿ ಶಾಖಾಧಿಕಾರಿ ಯು.ಎಲ್.ಪಟ್ಟಣ, ಗ್ರಾಮೀಣ ಶಾಖಾಧಿಕಾರಿ ಅಶೋಕ ಕಂದಗಲ್ ಹಾಗೂ ಸಿಬ್ಬಂದಿ ಶಿವಾನಂದ ಕೊಡಗೆ ಅವರ ಜೊತೆ ವಾಗ್ವಾದಕ್ಕಿಳಿದರು.ಈ ಸಂದರ್ಭದಲ್ಲಿ ಸಿಬ್ಬಂದಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಒಂದು ವಾರದಲ್ಲಿ ಯಥಾ ಪ್ರಕಾರ ವಿದ್ಯುತ್ ಪೂರೈಸಲಾಗುವುದು ಎಂದು ಸಮಜಾಯಿಷಿ ನೀಡಿದರೂ ಕೇಳದ ಸಾರ್ವನಿಕರು ಎಇಇ ಅವರು ಬಂದು ಉತ್ತರಿಸಿವಂತೆ ಪಟ್ಟು ಹಿಡಿದರು. ಕೊನೆಗೆ ಸಭೆಯಲ್ಲಿ ನಿರತವಾಗಿದ್ದ ಎಇಇ ಗಂಗಾಧರ ಲೋಣಿ ಮೊಬೈಲ್ ಮೂಲಕ ಮಾತನಾಡಿ ವಿದ್ಯುತ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದಾಗ, ಪ್ರತಿಭಟನಾಕಾರರು ಬರುವ ಮಂಗಳವಾರದ ಒಳಗಾಗಿ ವಿದ್ಯುತ್ ಸಮರ್ಪಕವಾಗಿ ಪೂರೈಸಬೇಕು ಇಲ್ಲವಾದಲ್ಲಿ ಮತ್ತೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಪ್ರತಿಭಟನೆ ಕೊನೆಗೊಳಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲದ ಖಜಾಂಚಿ ಸೋಮಶೇಖರ ಹಿರೇಮಠ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನಕಾರ್ಯದರ್ಶಿ ರಮೇಶ ಈಳಗೇರ, ಮುಖಂಡರುಗಳಾದ ಕಾಶಿನಾಥ ಕೋರಿ, ರಾವುತ ಅಗಸರ, ಮಲ್ಲಿಕಾರ್ಜುನ ಕೋರಿ, ರೈತರಾದ ರಾಮು ದೇಸಾಯಿ, ಸಂಪತ್ ಜಮಾದಾರ, ಗುರು ಜಡಗೊಂಡ, ಕೆ.ಕೆ.ಭಾವಿಮನಿ, ಕಾಸುಗೌಡ ಬಿರಾದಾರ(ಜಿರ್ಲಿ), ಸುನೀಲ ದೇಸಾಯಿ, ಮಹೇಶ ಯಾಳಗಿ, ಕಾಸು ಹಡಪದ, ಈರಣ್ಣ ದಿಂಡವಾರ, ಸಿದ್ದು ವಾಡೇದಮನಿ, ಮಡು ದಿಂಡವಾರ, ಬಸು ಕುಂಬಾರ, ಅಶೋಕ ರಾಮಗೊಂಡ, ಕಾಶೀನಾಥ ಮಡಗೊಂಡ, ಕಾಸು ದಾನಗೊಂಡ, ಸಿದ್ದು ದಿಂಡವಾರ, ಉಮೇಶ ಕೋಟಿನ್, ಮುತ್ತು ಭಾವಿಕಟ್ಟಿ, ಪಿಂಟೂ ಭಾಸುತ್ಕರ್ ಇದ್ದರು.