ಕಲಬುರಗಿ: ಕಬ್ಬು ಸಾಗಾಣಿಕೆ ಸರಹದ್ದು ನಿಗದಿಗೆ ರೈತರ ಆಗ್ರಹ

| Published : Jan 14 2024, 01:30 AM IST

ಸಾರಾಂಶ

ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಪೂರೈಸಲು ರೈತ ಪಡಬಾರದ ಕಷ್ಟ ಅನುಭವಿಸುತ್ತಿದ್ದಾನೆ. ಹತ್ತಿರದ ಕಾರ್ಖಾನೆಗೆ ಕಬ್ಬು ಸಾಕಾಣಿಕೆ ಮಾಡಬೇಕೆಂದರೆ ಸಹಾಯಕ ಆಯುಕ್ತರಿಂದ ಫರ್ಮಿಟ್ ಪಡೆಯಬೇ ಕಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬರಗಾಲದ ನಡುವೆ ಕಷ್ಟದಿಂದ ಬೆಳೆಯಲಾದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಪೂರೈಸಲು ರೈತ ಪಡಬಾರದ ಕಷ್ಟ ಅನುಭವಿಸುತ್ತಿದ್ದಾನೆ. ಹತ್ತಿರದ ಕಾರ್ಖಾನೆಗೆ ಕಬ್ಬು ಸಾಕಾಣಿಕೆ ಮಾಡಬೇಕೆಂದರೆ ಸಹಾಯಕ ಆಯುಕ್ತರಿಂದ ಫರ್ಮಿಟ್ ಪಡೆಯಬೇಕಾಗಿದೆ. ಇದಕ್ಕೆ ಸಕ್ಕರೆ ಕಾರ್ಖಾನೆಗಳು ಈ ಮುಂಚೆ ಯಾಗಿದ್ದ ಹಳ್ಳಿಗಳ ರೈತರೆಲ್ಲರ ಕಬ್ಬು ತಮ್ಮ ಕಾರ್ಖಾ ನೆಗೆ ಪೂರೈಕೆಯಾಬೇಕೆಂದು ನ್ಯಾಯಾಲಯ ಮೊರೆ ಹೋಗಿರುವುದು ರೈತರ ಹೈರಾಣಕ್ಕೆ ಕಾರಣವಾಗಿದೆ.

ಈ ಮೊದಲು ಜಿಲ್ಲೆಯ ಅಫಜಲ್ಪುರ ತಾಲೂಕಿನ ಹಾವಳಗಾ ಬಳಿಯ ರೇಣುಕಾ ಹಾಗೂ ಆಳಂದ ತಾಲೂಕಿನ ಭೂಸನೂರಿನ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಇದ್ದರೆ, ಈಚೆಗೆ ಎರಡು ವರ್ಷದ ಹಿಂದೆ ಅಫಜಲ್ಪುರ ತಾಲೂಕಿನ ಚಿಣಮಗೇರಿ ಬಳಿ ಕೆಪಿಆರ್‌ಸಕ್ಕರೆ ಕಾರ್ಖಾನೆ ಶುರುವಾಗಿದೆ. ಕೆಪಿಆರ್ ಸಕ್ಕರೆ ಕಾರ್ಖಾನೆ ರೈತರ ಕಬ್ಬು ಬೇಗ ಪಡೆಯುವುದರ ಜತೆಗೆ ಹಣ ಸಹ ಬೇಗ ಪಾವತಿಸಲು ಮುಂದಾಗಿರು ವುದರಿಂದ ರೈತರು ಈ ಕಾರ್ಖಾನೆಯತ್ತ ಒಲವು ಹೊಂದಿ ಕಬ್ಬು ಸಾಗಾಣಿಕೆಗೆ ಮುಂದಾಗುತ್ತಿದ್ದಾರೆ. ಆದರೆ ತಮಗೆ ನಿಗಧಿಯಾಗಿದ್ದ ಹಳ್ಳಿಗಳ ಕಬ್ಬನ್ನು ಕೆಪಿಆರ್ ಕಾರ್ಖಾನೆಯವರು ಪಡೆಯುತ್ತಿದ್ದು, ಇದನ್ನು ತಡೆಗಟ್ಟಿ ಎಂದು ರೇಣುಕಾ ಹಾಗೂ ಎನ್‌ಎಸ್‌ಎಲ್‌ದವರು ನ್ಯಾಯಾಲಯ ಮೊರೆ ಹೋಗಿ ರುವ ಕಾನೂನು ಸಂಘರ್ಷಕ್ಕೆ ರೈತ ಬಲಿಪಶುವಾ ಗುವಂತಾಗಿದೆ.

ಯಾವುದೇ ಕಾರ್ಖಾನೆ ಇಲ್ಲದ ಸಮಯದಲ್ಲಿ ರೇಣುಕಾ ಹಾಗೂ ಎನ್‌ಎಸ್‌ಎಲ್‌ಗೆ ಹೆಚ್ಚಿನ ಹಳ್ಳಿಗಳು ನಿಗದಿಯಾಗಿದ್ದವು. ಸಕಾಲಕ್ಕೆಕ ಕಬ್ಬು ನುರಿ ಸದ ಹಿನ್ನೆಲೆ ಕಾರಣಕ್ಕೆ ರೈತ ಕಾರ್ಖಾನೆಗೆ ಹಗಲಿರಳು ಅಲೆದಿದ್ದರೂ ಕಬ್ಬು ಕಾರ್ಖಾನೆಗೆ ಸಾಗಾಣಿಕೆಯಾಗ ದಿದ್ದಕ್ಕೆ ಸುಟ್ಟ ಉದಾಹರಣೆಗಳಿವೆ. ಆದರೆ ತಮಗ್ಯಾವ ಸರಹದ್ದು ಅಂದರೆ ಕಾರ್ಖಾನೆಗಳ ವ್ಯಾಪ್ತಿಗೆ ಹಳ್ಳಿಗಳ ನಿಗದಿ ಬೇಡ. ನಮಗೆ ಮನಸ್ಸು ಏಲ್ಲಿ ಬರುತ್ತದೆ ಅಲ್ಲಿ ಹಾಕುತ್ತೇವೆ ಎನ್ನುವುದಕ್ಕೆ ನಿರ್ಬಂಧ ಬೇಡ. ಹೀಗಾಗಿ ನಿರ್ಬಂಧ ತೆಗೆದು ಹಾಕಿ ಎಂದು ರೈತರು ಜಿಲ್ಲಾಡಳಿತಕ್ಕೆ ಆಗ್ರಹಿಸುತ್ತಿದ್ದಾರೆ.

ಎನ್‌ಎಸ್‌ಎಲ್ ಕಬ್ಬು ನುರಿಸುವ ಸಾಮರ್ಥ್ಯಕ್ಕಿಂತ ಕೆಪಿಆರ್ ಸಾಮರ್ಥ್ಯವಿದೆ. ಆದರೆ ಹಳ್ಳಿಗಳ ನಿಗದಿ ಅವೈಜ್ಞಾನಿಕವಿದೆ. ಎನ್‌ಎಸ್‌ಎಲ್‌ಗೆ ೩೩೬ ಹಳ್ಳಿಗಳಿದ್ದರೆ ಕೆಪಿಆರ್‌ಗೆ ೮೭ ಹಳ್ಳಿಗಳ ನಿಗದಿಯಿದೆ. ಇದೇ ಕಾರಣಕ್ಕೆ ರೈತ ಕಬ್ಬು ಹಾಕಲು ಇನ್ನಿಲ್ಲದ ಕಸರತ್ತು ಮಾಡಬೇಕಿದೆ. ರೈತರು ಕೆಪಿಆರ್‌ಗೆ ಹಾಕಬೇಕೆಂದರೆ ಸಹಾಯಕ ಆಯುಕ್ತರ ಕಚೇರಿಗೆ ಹೋಗಿ ಫರ್ಮಿಟ್ ಪಡೆಯಬೇಕು. ಫರ್ಮಿಟ್ ಪಡೆಯಲು ಹೆಸರು ಸಹಿತ ೧೦೦ ರು. ಚೆಕ್ ಕೊಡಬೇಕು. ಗ್ರಾಮೀಣ ಭಾಗದಲ್ಲಿ ಚೆಕ್ ಖಾತೆದಾರರ ಹೆಸರಿನೊಂದಿಗೆ ಇರೋದು ಇಲ್ಲ. ೫ ರು. ಕೆಟಿಓ ಚಲನ್ ಕೊಡಬೇಕು. ಆದರೆ ಈ ೫ ರು. ಚಲನ್ ಪಡೆಯಲು ಆನ್‌ಲೈನ್ ಸೆಂಟರ್‌ಗೆ ಹೋಗಬೇಕು. ೫ ರು. ಚಲನ್‌ಗೆ ೫೦ ರು. ಕೊಡಬೇಕು. ಇದೆಲ್ಲ ಮಾಡಲು ರೈತ ಎರಡ್ಮೂರು ದಿನ ಅಲೆಯಬೇಕು. ಒಂದು ವೇಳೆ ಸರ್ವರ್ ಡೌನ್‌ಆಗಿದ್ದರೆ ವಾರಗಟ್ಟಲೇ ಕಾಯಬೇಕಾಗುತ್ತದೆ.

ಹೊಲದಲ್ಲಿನ ಎಲ್ಲ ಕೆಲಸ ಬಿಟ್ಟು ಹೀಗೆ ಅಲೆಯಲು ರೈತನಿಗೆ ಕಷ್ಟ ಸಾಧ್ಯವೇ ಸರಿ. ಪ್ರಮುಖವಾಗಿ ಈಗ ನಿಗದಿಯಾಗಿರುವ ಹಳ್ಳಿಗಳ ಸಂಪೂರ್ಣ ಕಬ್ಬು ನುರಿಯಲು ಕಾರ್ಖಾನೆಗಳಿಗೆ ಸಾಧ್ಯವೇ ಇಲ್ಲ. ಇಷ್ಟಿದ್ದರೂ ರೈತರ ಹಿತದತ್ತ ನೋಡದೆ ತಮ್ಮ ಹಿತಾಸಕ್ತಿಯತ್ತ ಕಾರ್ಖಾನೆಗಳು ಜೋತು ಬಿದ್ದಿರುವುದು ರೈತರ ಹಣೆಬರಹವೇ ಎನ್ನಬಹುದು.

ಜಿಲ್ಲಾಡಳಿತ ಕಬ್ಬಿನ ರೈತರು ಅನುಭವಿಸುತ್ತಿರುವ ಕಷ್ಟವನ್ನು ನಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ. ನ್ಯಾಯಾಲಯ ಇನ್ನೂ ಅಂತೀಮ ತೀರ್ಪು ಕೊಟ್ಟಿಲ್ಲ. ಸರಹದ್ದಿನ ನಿರ್ಬಂಧ ತೆಗೆದುಹಾಕಿ ರೈತರು ತಮ್ಮ ಕಬ್ಬು ಯಾವುದೇ ಕಾರ್ಖಾನೆಗೆ ಪೂರೈಸಲು ಸ್ವಾತಂತ್ರ್ಯ ಇರಬೇಕೆನ್ನುತ್ತಾರೆ.

ಜಿಲ್ಲಾಡಳಿತಕ್ಕೆ ಸಿದ್ದರಾಮ ಶ್ರೀ ಮನವಿ:

ಅಫಜಲಪುರ ತಾಲೂಕಿನ ಚಿಣಮಗೇರಾ ಮಹಾಂತೇಶ್ವರ ಮಠದ ಹಿರಿಯ ಪೀಠಾಧಿಪತಿಗಳಾದ ಪೂಜ್ಯ ಸಿದ್ದರಾಮ ಶಿವಾಚಾರ್ಯರು ಶುಕ್ರವಾರ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರನ್ನು ಭೇಟಿಯಾಗಿ ಇನ್ನೂ ಅಪಾರ ಪ್ರಮಾಣದಲ್ಲಿ ಕಬ್ಬುವಿದೆ. ನೀರಿನ ಕೊರತೆ ನಡುವೆ ಕಬ್ಬು ನಿರ್ವಹಿಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ. ಹೀಗಾಗಿ ಬೇಗ ಕಬ್ಬು ಕಟಾವು ಆಗಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ಕಿರಿಯ ಪೀಠಾಧಿಪತಿ ವೀರ ಮಹಾಂತ ಶಿವಾಚಾರ್ಯರು, ಕಾರ್ಖಾನೆಗಳ ಈಗಿನ ಕಬ್ಬು ನುರಿಸುವಿಕೆ ವೇಗ ಹಾಗೂ ನಿಧಾನಗತಿ ಕಾರ್ಯವೈಖರಿ ನೋಡಿದರೆ ಸಂಪೂರ್ಣ ಕಬ್ಬು ನುರಿಸುವಿಕೆ ಬಹಳ ತಿಂಗಳವರೆಗೆ ಹೋಗಬಹುದು ಎಂಬ ಆತಂಕ ಕಾಡುತ್ತಿದೆ. ಸಮಯ ಮುಂದಕ್ಕೆ ಕಬ್ಬು ಸಂಪೂರ್ಣ ಒಣಗಿ ಹೋಗುತ್ತದೆ. ಹೀಗಾಗಿ ಜಿಲ್ಲಾಡಳಿತ ರೈತರ ನೆರವಿನ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ರೈತ ಕಷ್ಟದ ನಡುವೆ ಕಬ್ಬು ಬೆಳೆಯಬೇಕು. ಕಾರ್ಖಾನೆಗೆ ಕಬ್ಬು ಪೂರೈಸಬೇಕೆಂದರೂ ಇನ್ನಿಲ್ಲದ ತೊಂದರೆ ಅನುಭವಿಸಬೇಕು. ಹೀಗಾಗಿ ರೈತ ವರ್ಷ, ವರ್ಷ ಹೀಗೆ ಕಷ್ಟ ಅನುಭವಿಸುವುದನ್ನು ಶಾಶ್ವತವಾಗಿ ಕೊನೆಗಾಣಿಸಬೇಕು. ಜನಪ್ರತಿನಿಧಿಗಳು ಇದರತ್ತ ಗಮನಹರಿಸಲಿ. - ದಯಾನಂದ ಪಾಟೀಲ ರೈತ ಮುಖಂಡ