ಬಸ್ ನಿಲ್ದಾಣದ ಪಕ್ಕ ಅಳವಡಿಸಿರುವ ನೀರಾವರಿ ಕಾಲುವೆ ರೈಪೈಪ್‌ಗಳು ಚಿಕ್ಕದಾಗಿವೆ. ಈ ಪೈಪ್‌ಗಳಲ್ಲಿ ತ್ಯಾಜ್ಯವಸ್ತು ಸಿಲುಕಿ ಕಾಲುವೆ ನೀರು ಸರಿಯಾಗಿ ಜಮೀನುಗಳಿಗೆ ಹರಿಯುವುದಿಲ್ಲ ಎಂಬುದು ರೈತರ ಆರೋಪ.
ನರಗುಂದ: ಕೊಣ್ಣೂರು ಗ್ರಾಮದ ಬಸ್ ನಿಲ್ದಾಣ ಪಕ್ಕದಲ್ಲಿ ನೀರಾವರಿ ಕಾಲುವೆ ಪೈಪ್‌ಗಳನ್ನು ಬದಲಾವಣೆ ಮಾಡಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.
ಗುರುವಾರ ತಾಲೂಕಿನ ಕೊಣ್ಣೂರು ಗ್ರಾಮದ ನೀರಾವರಿ ನಿಗಮದ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, ಈ ಗ್ರಾಮವು ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಪ್ರತಿದಿನ ಸಾವಿರಾರು ವಾಹನಗಳು ಈ ಗ್ರಾಮದ ರಸ್ತೆಯಲ್ಲಿ ಸಂಚರಿಸುತ್ತವೆ. ಬಸ್ ನಿಲ್ದಾಣದ ಪಕ್ಕ ಅಳವಡಿಸಿರುವ ನೀರಾವರಿ ಕಾಲುವೆ ರೈಪೈಪ್‌ಗಳು ಚಿಕ್ಕದಾಗಿವೆ. ಈ ಪೈಪ್‌ಗಳಲ್ಲಿ ತ್ಯಾಜ್ಯವಸ್ತು ಸಿಲುಕಿ ಕಾಲುವೆ ನೀರು ಸರಿಯಾಗಿ ಜಮೀನುಗಳಿಗೆ ಹರಿಯುವುದಿಲ್ಲ. ಮೇಲಾಗಿ ಇದೇ ಕಾಲುವೆಯಲ್ಲಿ ಚರಂಡಿ ಸೇರಿದ್ದರಿಂದ ಬಸ್ ನಿಲ್ದಾಣದ ಪಕ್ಕ ತ್ಯಾಜ್ಯವಸ್ತುಗಳ ದುರ್ವಾಸನೆಯಿಂದ ಗ್ರಾಮಸ್ಥರು ಮತ್ತು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ.ನೀರಾವರಿ ಇಲಾಖೆಯ ಅಧಿಕಾರಿಗಳು ಬಸ್ ನಿಲ್ದಾಣ ಪಕ್ಕದಲ್ಲಿರುವ ಕಾಲುವೆ ಪೈಪ್‌ಗಳನ್ನು ಬದಲಾಯಿಸಿ ಬೃಹತ್ ಪೈಪ್‌ಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.
ಟಿ.ಬಿ. ಶಿರಿಯಪ್ಪಗೌಡ್ರ, ಎಂ.ಬಿ. ಅರಹುಣಿಸಿ, ಕೆ.ಎಚ್. ವಾಸನ, ಅಶೋಕ ಪಾಟೀಲ, ಈರಣ್ಣ ಹುರಕಡ್ಲಿ, ಪ್ರವೀಣ ಯಲಿಗಾರ, ದೇವರಾಜ ನಾಗನೂರ, ಬಸಯ್ಯ ಹೊರಗಿನಮಠ, ಬಿ.ಎಚ್. ವಾಸನ, ವಿಶ್ವನಾಥ ಕಂಬಳೆ, ನಿಂಗಪ್ಪ ಪತ್ತಾರ, ಮೌನೇಶ ಬಡಿಗೇರ, ಶಂಕರಗೌಡ ಶಿರಿಯಪ್ಪಗೌಡ್ರ ಇದ್ದರು.ಇಂದು ಯುವ ಸಂವಾದ, ಕವಿಗೋಷ್ಠಿಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನ ಯುವ ದಿನಾಚರಣೆ ಅಂಗವಾಗಿ ಯುವ ಸಂವಾದ ಹಾಗೂ ಯುವ ಕವಿಗೋಷ್ಠಿ ಜ. 10ರಂದು ಸಂಜೆ 6.30ಕ್ಕೆ ನಗರದ ತೋಂಟದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ನಡೆಯಲಿದೆ.ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು. ಯುವಜನ ಹಾಗೂ ಸಾಹಿತ್ಯಾಭಿರುಚಿ ಸಂವಾದ ಗೋಷ್ಠಿಯಲ್ಲಿ ಎಂ.ಎಸ್. ಹುಲ್ಲೂರ, ವೀರೇಶ ಹರ್ಲಾಪೂರ, ರಾಜೇಶ್ವರಿ ಬಡ್ನಿ, ಅನುಪ್ರಿಯಾ ಬಾಪುರಿ, ಅನ್ನಪೂರ್ಣ ಕಾಡಣ್ಣವರ, ಮೇಘಾ ಹಾದಿಮನಿ ಭಾಗವಹಿಸುವರು.
ಯುವ ಕವಿಗೋಷ್ಠಿಯಲ್ಲಿ ಡಾ. ಈರಣ್ಣ ಪೂಜಾರ, ಗಣೇಶ ಪಾಟೀಲ, ಅನ್ನಪೂರ್ಣ ಕುರಿ, ಲಕ್ಷ್ಮೀ ಪಾಟೀಲ, ಸಂತೋಷ ಚಿಜ್ಜೇರಿ, ಸಂಗೀತಾ ಜೋಗಿನ ಅವರು ಭಾಗವಹಿಸುವರು ಎಂದು ಕಿಶೋರಬಾಬು ನಾಗರಕಟ್ಟಿ, ದತ್ತಪ್ರಸನ್ನ ಪಾಟೀಲ, ಡಿ.ಎಸ್. ಬಾಪುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.