ಗುಳೇದಗುಡ್ಡ ತಾಲೂಕಿನ ಕೆಲವಡಿ, ಲಿಂಗಾಪುರ, ತಿಮ್ಮಸಾಗರ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ಹಲವು ದಿನಗಳಿಂದ ಹಂದಿಯ ಉಪಟಳ ಹೆಚ್ಚಾಗಿದ್ದು, ಇದರಿಂದ ರೈತರು ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳುವಲ್ಲಿ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಕೆಲವಡಿ, ಲಿಂಗಾಪುರ, ತಿಮ್ಮಸಾಗರ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ಹಲವು ದಿನಗಳಿಂದ ಹಂದಿಯ ಉಪಟಳ ಹೆಚ್ಚಾಗಿದ್ದು, ಇದರಿಂದ ರೈತರು ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳುವಲ್ಲಿ ಪರದಾಡುವಂತಾಗಿದೆ.

ಕೆಲವಡಿ ಗ್ರಾಮದ ಬಾಗಲಕೋಟೆ ರಸ್ತೆ ಮಾರ್ಗದ ಓಶೋ ಆಶ್ರಮಕ್ಕೆ ಹೋಗುವ ಮಾರ್ಗದಲ್ಲಿ ಬರುವ 100 ಎಕರೆಗಿಂತ ಹೆಚ್ಚು ಜಮೀನುಗಳಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದೆ. ಕೆಲವಡಿ, ಲಿಂಗಾಪುರ, ತಿಮ್ಮಸಾಗರ, ಕೋಟೆಕಲ್ ಗ್ರಾಮದಲ್ಲಿ ಅರಣ್ಯ ಪ್ರದೇಶವಿರುವುದರಿಂದ ಈ ಭಾಗದಲ್ಲಿ ಹಂದಿಗಳು ಕಂಡು ಬರುತ್ತಿದೆ.

ಬೆಳೆಗಳು ಹಾಳು: ಕೆಲವಡಿ, ಲಿಂಗಾಪುರ, ಕೋಟೆಕಲ್, ತಿಮ್ಮಸಾಗರ ಗ್ರಾಮಗಳ ರೈತರು ಬರಗಾಲದ ನಡುವೆಯೂ ಜೋಳ, ಕಬ್ಬು, ಶೆಂಗಾ, ಮೆಕ್ಕೆಜೋಳ, ತೊಗರಿ, ಸಜ್ಜೆ ಸೇರಿ ಅನೇಕ ಬೆಳೆ ಬೆಳೆದಿದ್ದಾರೆ. ಆದರೆ ಬರಗಾಲದ ಕಾರಣ ಆಹಾರ ಸಿಗದೇ ಹಂದಿಗಳು ಸಹ ಜಮೀನುಗಳತ್ತ ಹಿಂಡು ಹಿಂಡಾಗಿ ಬರುತ್ತಿರುವುದರಿಂಧ ರೈತರು ಕಂಗಾಲಾಗಿದ್ದಾರೆ. ಹಂದಿಗಳಿಂದ ಬೆಳೆಗಳನ್ನು ರಕ್ಷಣೆ ಮಾಡುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ.

ಎಚ್ಚೆತ್ತುಕೊಳ್ಳುವುದೇ ಇಲಾಖೆ: ರಾತ್ರಿ ಸಮಯದಲ್ಲಿ ಹಿಂಡು ಹಿಂಡಾಗಿ ಬರುವ ಹಂದಿಗಳು ಸಿಕ್ಕ ಸಿಕ್ಕ ಜಮೀನುಗಳಿಗೆ ದಾಂಗುಂಡಿ ಇಟ್ಟು ಜಮೀನುಗಳಲ್ಲಿ ಬೆಳೆದ ಬೆಳೆ ತಿನ್ನುವುದು. ಬೆಳೆಗಳ ಮೇಲೆಯೆ ಬಿದ್ದು ಉರುಳಾಡುವುದು ಮಾಡಿ, ಬೆಳೆದ ಬೆಳೆ ಕೈಗೆ ಸಿಗದಂತೆ ಮಾಡುತ್ತಿವೆ. ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ನೀರಿಲ್ಲದೆ ಒಣಗುತ್ತಿರುವ ಬೆಳೆಗಳನ್ನು ಉಳಿಸಿಕೊಳ್ಳುವ ಸಂಕಷ್ಟದಲ್ಲಿರುವ ರೈತರಿಗೆ ಹಂದಿಗಳ ಉಪಟಳ ಮತ್ತಷ್ಟು ಚಿಂತಿಗೀಡು ಮಾಡಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ರೈತರಿಗೆ ಆಗುತ್ತಿರುವ ಹಾನಿಯನ್ನು ತಪ್ಪಿಸಬೇಕು ಎಂಬುದು ರೈತರ ಆಗ್ರಹವಾಗಿದೆ.ರಾತ್ರಿ ಸಮಯದಲ್ಲಿ ನಾವು ಹಂದಿಗಳಿಂದ ನಮ್ಮ ಬೆಳೆಗಳನ್ನು ಕಾಯುವುದೇ ದೊಡ್ಡ ಕೆಲಸವಾಗಿಬಿಟ್ಟಿದೆ. ಒಬ್ಬರೆ ಹಂದಿಗಳನ್ನು ಓಡಿಸಲು ಹೋದರೆ ರೈತರ ಮೇಲೆಯೇ ದಾಳಿಗೆ ಮುಂದಾಗಿವೆ. ಹೀಗಾಗಿ ಬೆಳೆಗಳ ರಕ್ಷಣೆ ಜೊತೆಗೆ ಜೀವ ರಕ್ಷಣೆ ಮಾಡಿಕೊಳ್ಳುವಂತಾಗಿದೆ.

ಕೆಲವಡಿ ಗ್ರಾಮದ ಬಾಗಲಕೋಟೆ ರಸ್ತೆ ಮಾರ್ಗದ ಓಶೋ ಆಶ್ರಮಕ್ಕೆ ಹೋಗುವ ಮಾರ್ಗದಲ್ಲಿ, ಲಿಂಗಾಪುರ, ತಿಮ್ಮಸಾಗರ ಗ್ರಾಮಗಳ ವ್ಯಾಪ್ತಿಯಲ್ಲಿನ ಜಮೀನುಗಳಲ್ಲಿ ಹಂದಿಗಳ ಉಪಟಳ ಹೆಚ್ಚಾಗಿದ್ದು, ನಾವು ಕಷ್ಟಪಟ್ಟು ದುಡಿದ ಬೆಳೆಗಳು ಹಾಳಾಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅರಣ್ಯ ಇಲಾಖೆಯವರು ಕೂಡಲೇ ಕ್ರಮಕೈಗೊಳ್ಳಬೇಕು.- ನಿಂಗಣ್ಣ ಕಾಳನ್ನವರ, ತಿಮ್ಮಸಾಗರ ರೈತ

---

ಗುಳೇದಗುಡ್ಡ

ತಾಲೂಕಿನ ಕೆಲವಡಿ, ಲಿಂಗಾಪುರ, ತಿಮ್ಮಸಾಗರ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ಹಲವು ದಿನಗಳಿಂದ ಹಂದಿಯ ಉಪಟಳ ಹೆಚ್ಚಾಗಿದ್ದು, ಇದರಿಂದ ರೈತರು ಬರಗಾಲದ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳುವಲ್ಲಿ ಪರದಾಡುವಂತಾಗಿದೆ.