ಕುದೂರು: ಊರ ಹೊರಗಿರುವ ಮತ್ತು ರಸ್ತೆಗೆ ಹತ್ತಿರವಿರುವ ಅಡಿಕೆ ತೋಟಗಳಲ್ಲಿ ಅಡಿಕೆ ಗೊನೆಗಳನ್ನು ಕಳವು ಮಾಡುತ್ತಿದ್ದ ಕಳ್ಳರನ್ನು ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಾಗಡಿ ತಾಲೂಕಿನ ಬಿಸ್ಕೂರು ಗ್ರಾಮದಲ್ಲಿ ನಡೆದಿದೆ.
ಕುದೂರು: ಊರ ಹೊರಗಿರುವ ಮತ್ತು ರಸ್ತೆಗೆ ಹತ್ತಿರವಿರುವ ಅಡಿಕೆ ತೋಟಗಳಲ್ಲಿ ಅಡಿಕೆ ಗೊನೆಗಳನ್ನು ಕಳವು ಮಾಡುತ್ತಿದ್ದ ಕಳ್ಳರನ್ನು ರೈತರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಾಗಡಿ ತಾಲೂಕಿನ ಬಿಸ್ಕೂರು ಗ್ರಾಮದಲ್ಲಿ ನಡೆದಿದೆ.
ಬಿಸ್ಕೂರು ಮತ್ತು ಕೋಡಿಹಳ್ಳಿ ಗ್ರಾಮದ ಸುತ್ತಮುತ್ತಲೂ ಅಡಿಕೆ ಮತ್ತು ತೆಂಗು ಬೆಳೆಯಲಾಗುತ್ತದೆ. ಕೆರೆಯ ಹಿಂದಿರುವ ತೋಟಗಳ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆ ಇರುತ್ತದೆ. ಇವೆಲ್ಲವನ್ನು ಗಮನಿಸಿದ ಕಳ್ಳರು ಬಿಸ್ಕೂರು ಗ್ರಾಮದ ಪದ್ಮನಾಭರ ತೋಟದಲ್ಲಿ ಮೊದಲ ದಿನ ಎಪ್ಪತ್ತು ಗೊನೆ ಕದ್ದು ಪರಾರಿಯಾಗಿದ್ದರು. ಆದರೆ ಪದ್ಮನಾಭ್ ಪೊಲೀಸರಿಗೆ ದೂರು ನೀಡದೆ ಒಂದೆರೆಡು ದಿನ ನಾವೇ ತೋಟದಲ್ಲಿ ಕಾದಿದ್ದು ಕಾರಿನಲ್ಲಿ ಮತ್ತೆ ಕಳ್ಳತನಕ್ಕೆ ಕಳ್ಳರು ಕಾರಿನ ಬಳಿ ಒಬ್ಬನನ್ನು ನಿಲ್ಲಿಸಿ ಉಳಿದ ಮೂವರು ಅಡಿಕೆ ಗೊನೆ ಕದಿಯಲು ಬಂದಿದ್ದಾರೆ. ಆಗ ಕಾವಲಿಗಿದ್ದ ಪದ್ಮನಾಭ್ ಮತ್ತು ಅವರ ಸ್ನೇಹಿತರು ಕಳ್ಳರ ಮೇಲೆರಗಿ ಎಡೆಮುಡಿ ಕಟ್ಟಿದ್ದಾರೆ. ಅದರಲ್ಲಿ ಒಬ್ಬ ಪರಾರಿಯಾಗಿ ಉಳಿದ ಮೂವರನ್ನು ಸೆರೆಹಿಡಿದು ಕುದೂರು ಪೊಲೀಸರಿಗೆ ಒಪ್ಪಿಸಿದ್ದಾರೆ.ಅಡಿಕೆ ಕದಿಯುತ್ತಿದ್ದ 19 ವರ್ಷದ ಪ್ರವೀಣ್ ಬಿಸ್ಕೂರು ಪಕ್ಕದ ತಿಪ್ಪಸಂದ್ರದವನು. 19 ವರ್ಷದ ಕಿರಣ್ ಬೆಂಗಳೂರು ವಾಸಿ. 45 ವರ್ಷದ ನಾಗೇಂದ್ರ ಬೆಂಗಳೂರಿನಲ್ಲಿ ಕಾರು ಚಾಲಕ. 20 ವರ್ಷದ ಪುನೀತ್ ಬೆಂಗಳೂರಿನ ಯಶವಂತಪುರ ನಿವಾಸಿ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
13ಕೆಆರ್ ಎಂಎನ್ 11.ಜೆಪಿಜಿಮಾಗಡಿ ತಾಲೂಕು ಬಿಸ್ಕೂರು ಗ್ರಾಮದಲ್ಲಿ ಅಡಿಕೆ ಕದಿಯುತ್ತಿದ್ದ ಕಳ್ಳರು.