ಸಾರಾಂಶ
ಹೆಸ್ಕಾಂ ಅಧಿಕಾರಿಗಳ ಒಳ ಜಗಳದಿಂದ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲವೆಂದು ಆರೋಪಿಸಿ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಹೆಸ್ಕಾಂ ಅಧಿಕಾರಿಗಳ ಒಳ ಜಗಳದಿಂದ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲವೆಂದು ಆರೋಪಿಸಿ ರೈತರು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ.ಕಿತ್ತೂರು ತಾಲೂಕಿನ ಕುಲವಳ್ಳಿ ಭಾಗದ 9 ಹಳ್ಳಿಗಳ ರೈತರು, ಸುಮಾರು ಒಂದು ತಿಂಗಳಿನಿಂದ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಇಲ್ಲಿಯ ಜನರಿಗೆ ಕುಡಿಯಲು ಸಹ ನೀರು ಸಿಗುತ್ತಿಲ್ಲ. ರೈತರ ವ್ಯವಸಾಯ ಮಾಡಲು ವಿದ್ಯುತ್ ಇಲ್ಲದ ಕಾರಣ ಸಾಕಷ್ಟು ತೊಂದರೆ ಆಗುತ್ತದೆ. ಶಾಲಾ ಮಕ್ಕಳು ಕತ್ತಲಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಎದುರಾಗಿದೆ ಇದಕ್ಕೆಲ್ಲ ಹೆಸ್ಕಾಂ ಅಧಿಕಾರಿಗಳೆ ಕಾರಣ ಎಂದು ದೂರಿದರು.ಹೆಸ್ಕಾಂ ಅಧಿಕಾರಿ ಅನ್ನೋಜಿರಾವ್ ಜಾದವ್ ಹಾಗೂ ಪವರ್ ಮ್ಯಾನ್ ದಿಲೀಪ್ ನಡುವೆ ಒಳಜಗಳವಿದೆ. ಇದರಿಂದಾಗಿ ಕುಲವಳ್ಳಿ ವಲಯದಲ್ಲಿ ಕೆಲಸ ಮಾಡುತ್ತಿರುವ ಲೈನ್ ಮ್ಯಾನ್ ದಿಲೀಪಗೆ ಬೇರೆ ವಲಯದ ಜವಾಬ್ದಾರಿ ನೀಡಿದ್ದಾರೆ. ಕುಲವಳ್ಳಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೈನ್ ಮ್ಯಾನ್ ದಿಲೀಪನನ್ನು ಕುಲವಳ್ಳಿ ವಲಯದಲ್ಲಿ ಮುಂದೆವರೆಸಬೇಕೆಂದು ಆಗ್ರಹಿಸಿದರು.
ಅಧಿಕಾರಿಗಳು ದಿಲೀಪ್ ಮೇಲೆ ಸಿಟ್ಟಿನಿಂದ ತೊಂದರೆ ನೀಡಿದಲ್ಲಿ ಮುಂದಾಗುವ ಘಟನೆಗಳಿಗೆ ನೇರವಾಗಿ ಹೆಸ್ಕಾಂ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ರೈತ ಮುಖಂಡ ಬಿಷ್ಟಪ್ಪ ಶಿಂಧೆ ಹೇಳಿದರು. ಗ್ರಾಪಂ ಸದಸ್ಯ ಮಹಾಂತೇಶ ಎಮ್ಮಿ, ಮುಖಂಡರಾದ ವಿಜಯಕುಮಾರ ಶಿಂಧೆ, ಸೇರಿದಂತೆ ರೈತರು, ಯುವಕರು ಇದ್ದರು.