ಸಾರಾಂಶ
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಡೇರಿಗಳು ರೈತರಿಗೆ ರಾಸು ವಿಮೆಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು, ಜತೆಗೆ ವಿಮೆ ಮಾಡಿಸಲು ಆರ್ಥಿಕ ಸಂಕಷ್ಟದಲ್ಲಿ ಇರುವಂತಹ ರೈತರಿಗೆ ಡೇರಿಗಳಿಂದ ವಿಮೆ ಮಾಡಿಸುವ ಕೆಲಸ ಮಾಡಿದರೆ ಅನುಕೂಲವಾಗಲಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಕುಪ್ಪಳ್ಳಿ-ಜಿ.ಶೆಟ್ಟಹಳ್ಳಿ ಸರ್ಕಲ್‌ನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹೈನುಗಾರಿಕೆ ರೈತರ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎಂದರು.
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಬೇಕು. ಡೇರಿಗಳು ರೈತರಿಗೆ ರಾಸು ವಿಮೆಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು, ಜತೆಗೆ ವಿಮೆ ಮಾಡಿಸಲು ಆರ್ಥಿಕ ಸಂಕಷ್ಟದಲ್ಲಿ ಇರುವಂತಹ ರೈತರಿಗೆ ಡೇರಿಗಳಿಂದ ವಿಮೆ ಮಾಡಿಸುವ ಕೆಲಸ ಮಾಡಿದರೆ ಅನುಕೂಲವಾಗಲಿದೆ ಎಂದರು.ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಂಡು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಗ್ರಾಮಸ್ಥರು ಅಧಿಕ ಹಾಲು ಪೂರೈಕೆ ಮಾಡಿದರೆ ಮುಂದಿನ ದಿನಗಳಲ್ಲಿ ಡೇರಿಗೆ ಬಿಎಂಸಿ ಕೇಂದ್ರ ತರಲು ಅನುಕೂಲವಾಗಲಿದೆ ಎಂದರು.
ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಭಾರತ ದೇಶದಲ್ಲಿ ರೈತರ ಮೂಲಕಸುಬು ಕೃಷಿಯಾಗಿದೆ, ಜತೆಗೆ ಬಹುತೇಕ ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ರೈತರು ಬೆಳೆದ ತರಕಾರಿಗಳಿಗೆ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅಂತಹ ಕುಟುಂಬಗಳಿಗೆ ಹೈನುಗಾರಿಕೆ ಆರ್ಥಿಕವಾಗಿ ನೆರವಾಗುತ್ತಿದೆ ಎಂದರು.ತಾಲೂಕಿನಲ್ಲಿರುವ 147 ಡೇರಿಗಳು ಸಹ ಉತ್ತಮವಾಗಿ ಕೆಲಸ ಮಾಡುತ್ತಿವೆ. ಡಿಂಕಾ ಡೇರಿ ಅಧಿಕ ಹಾಲು ಉತ್ಪಾದನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿ ಲಾಭದಾಯಕವಾಗಿ ಕೆಲಸ ಮಾಡುತ್ತಿದೆ ಎಂದರು.
ಇದಕ್ಕೂ ಮುನ್ನ ಆಗಮಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಅವರು ಪಶುಆಹಾರ ಮಳಿಗೆ ಉದ್ಘಾಟಿಸಿದರು. ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ ಭೇಟಿಕೊಟ್ಟು ಶುಭಹಾರೈಸಿದರು. ಸಮಾರಂಭದಲ್ಲಿ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರ್ಣಾಧಿಕಾರಿ ನಾಗೇಂದ್ರ, ಗ್ರಾಪಂ ಸದಸ್ಯರಾದ ಇಂದ್ರಮ್ಮ, ಮಹೇಶ್ ಡೇರಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ರಮ್ಯ, ನಿರ್ದೇಶಕರಾದ ಪವಿತ್ರ, ಜ್ಯೋತಿ, ಭಾಗ್ಯಮ್ಮ, ಲಕ್ಷ್ಮಮ್ಮ, ಧನಲಕ್ಷ್ಮಿ, ಕಾರ್‍ಯದರ್ಶಿ ಸಿ.ದೇವರಾಜು, ಪರೀಕ್ಷಕಿ ಸಿ.ಕೆ.ವನಜಾಕ್ಷಿ, ರೈತಸಂಘದ ಅಧ್ಯಕ್ಷ ನಾಗರಾಜು, ಪಲೇಟ್ ಬೆಟ್ಟೇಗೌಡ, ಶಿವಣ್ಣ, ಪಾಪಣ್ಣ, ಗ್ರಾಪಂ ಮಾಜಿ ಸದಸ್ಯ ಕೆ.ಗೋವಿಂದೇಗೌಡ, ಬಿ.ಕೆ.ಯೋಗೇಶ್, ಸಿ.ಆರ್.ರಮೇಶ್, ದೊಡ್ಡಹೈದೇಗೌಡ, ತಮ್ಮೇಗೌಡ, ತಿಮ್ಮೇಗೌಡ, ದೇವರಾಜು, ಕೆಂಪೇಗೌಡ, ವೆಂಕಟೇಶ್, ಸೋಮೇಗೌಡ, ಕೃಷ್ಣೇಗೌಡ, ನೀಲಕಂಠೇಗೌಡ, ಗೋವಿಂದೇಗೌಡ, ತಿಮ್ಮೇಗೌಡ, ಮರೀಗೌಡ, ಕೆ.ತಿಮ್ಮೇಗೌಡ, ಮಂಜುನಾಥ್, ಪುಟ್ಟಸ್ವಾಮೀಗೌಡ, ಕಾಳೇಗೌಡ ಸೇರಿದಂತೆ ಹಲವರು ಇದ್ಧರು.