ಬೆಳೆ ಸಾಲ ವಿಳಂಬ ಧೋರಣೆ ಖಂಡಿಸಿ ನೂರಾರು ರೈತ ಮುಖಂಡರು ರೈತ ಸಂಘದ ಕಾರ್ಯಾಧ್ಯಕ್ಷ ಹಾಳೂರು ನಾಗರಾಜ್ ನೇತೃತ್ವದಲ್ಲಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶಾಖೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳ ವರ್ತನೆ ಖಂಡಿಸಿದರು.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಬೆಳೆ ಸಾಲ ವಿಳಂಬ ಧೋರಣೆ ಖಂಡಿಸಿ ನೂರಾರು ರೈತ ಮುಖಂಡರು ರೈತ ಸಂಘದ ಕಾರ್ಯಾಧ್ಯಕ್ಷ ಹಾಳೂರು ನಾಗರಾಜ್ ನೇತೃತ್ವದಲ್ಲಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಶಾಖೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿ ಅಧಿಕಾರಿಗಳ ವರ್ತನೆ ಖಂಡಿಸಿದರು.

ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ಹಾಲಿವಾಣ ಗ್ರಾಮದ ರೈತ ವಿಜಯ್‌ಕಮಾರ್ ರವರಿಂದ ಬೆಳೆಸಾಲ,ಧೀರ್ಘಾವದಿ ಸಾಲ ನೀಡುತ್ತೇವೆ ಎಂದು ಬೆಳೆ ಸಾಲ ಕಟ್ಟಿಸಿಕೊಂಡು ೨೦೨೧ರಿಂದ ಅಲೆದಾಡಿಸುತ್ತಿದ್ದಾರೆ. ಬೆಳೆಸಾಲ ನೀಡಿಲ್ಲ ಹಾಗಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಭಾನುವಳ್ಳಿ ಪರಮೇಶ್ವರಪ್ಪ ಮಾತನಾಡಿ ಆಸ್ತಿ ಮಾರಾಟ ಮಾಡಲು ಬ್ಯಾಂಕ್ ನಲ್ಲಿ ಸಾಲ ಮಾಡಬೇಕೆಂಬ ಹಿರಿಯರ ಮಾತು ಸತ್ಯವಾಗಿದೆ. ದೇಶಕ್ಕೆ ಅನ್ನ ನೀಡುವ ರೈತರನ್ನು ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಮೂರೂವರೆ ಎಕರೆ ಜಮೀನು ಇದ್ದರೂ ಎರಡು ಲಕ್ಷ ರು. ಸಾಲ ನೀಡಲು ಯಾವ ಕಾನೂನು ತೊಂದರೆ ಇದೆ ಜನರಿಗೆ ತಿಳಿಸಿ ಎಂದು ಒತ್ತಾಯಿಸಿದರು.

ಅಧಿಕಾರಿಗಳಧ ಸುರೇಶ್ ಮಾತನಾಡಿ, ಸಾಲ ಪಡೆದ ರೈತ ಬೇರೆ ಬ್ಯಾಂಕ್‌ನಲ್ಲಿ ಸಾಲ ಇದೆ. ಹಾಗಾಗಿ ಸಾಲ ಸಿಗಲು ಕಷ್ಠವಾಗಿದೆ. ಮೇಲಾಧಿಕಾರಿಗಳಿಗೆ ವರದಿ ಮಾಡಿ ವಾರದ ನಂತರ ತಿಳಿಸಲಾಗುವುದು ಎಂದು ಉತ್ತರ ನೀಡಿದ್ದಕ್ಕೆ ತೃಪ್ತರಾಗದ ರೈತರು ಈ ಕೂಡಲೇ ಸ್ಪಷ್ಠ ಉತ್ತರ ಸಿಗಬೆಕು ಪ್ರಾದೆಶಿಕ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರಿಂದ ನ್ಯಾಯ ಕೇಳುತ್ತೇವೆ ಎಂದು ಪಟ್ಟು ಹಿಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಭಾರತೀಯ ಬ್ಯಾಂಕ್‌ಗೆ ೨೦೦ ಕೋಟಿ ರು. ಸಾಲ ಮರು ಪಾವತಿ ಮಾಡಲು ಶ್ರಮ ಹಾಕಿದ್ದೇವೆ ವಿದ್ಯಾಭ್ಯಾಸ ಸಾಲ ನೀಡುವುದಾಗಿ ಹೇಳಿ ಸಾಲ ನೀಡಿಲ್ಲ ಎಂಬ ದೂರನ್ನು ಕೆಲ ರೈತರು ದೂರಿದರು. ೨೦ ವರ್ಷದಿಂದ ಬ್ಯಾಂಕ್‌ನಲ್ಲಿ ಖಾತೆ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ ೧.೯೦ ಲಕ್ಷ ರು. ಖಾತೆಯಿಂದ ಕಟ್ ಆಗಿದೆ. ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ರೂಪ ಪತಿ ಪರವಾಗಿ ದೂರಿದರು.

ಕೊನೆಗೆ ವಾರದಲ್ಲಿ ಸಾಲ ನೀಡಲಾಗುವುದು ಎಂದು ವ್ಯವಸ್ಥಾಪಕ ದುಶ್ಯಂತ್‌ಕುಮಾರ್ ಹೇಳಿದ ಕಾರಣಕ್ಕೆ ಪ್ರತಿಭಟನೆ ವಾಪಸ್ ಪಡೆದರು. ವಿವಿಧ ಗ್ರಾಮಗಳ ರೈತ ಮುಖಂಡರಾದ ಡಿಬಿ ನಂದೀಶ್, ನಂದಿತಾವರೆ ಶಂಭಣ್ಣ, ಗದಿಗೆಪ್ಪ, ನಾಗಪ್ಪ, ಪರಮೇಶ್ವರಪ್ಪ, ಬಸವರಾಜಪ್ಪ, ಕೆ ವೈ ತಿಪ್ಪೇಸ್ವಾಮಿ, ವಿಜಯ್‌ಕುಮಾರ್, ರಾಘವೇಮದ್ರ, ರಂಗನಗೌಡ, ಮಹೇಶಯ್ಯ, ಮಾಲತೇಶ, ಅಂಜಿನಪ್ಪ, ದೊಡ್ಡಪ್ಪ ಅನೇಕರು ಇದ್ದರು.