Farmers' organization protests: Farmer dies due to GESCOM negligence

-ಕಾಳಗಿ ಜೆಸ್ಕಾಂ ಕಚೇರಿ ಎದುರು ಮೃತ ರೈತನ ಶವವಿಟ್ಟು ರೈತರ ಆಕ್ರೋಶ

----

ಕನ್ನಡಪ್ರಭ ವಾರ್ತೆ ಕಲಬುರಗಿಜೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ವಿದ್ಯುತ್ ತಂತಿ ತಗುಲಿ ರೈತ ಮೃತಪಟ ಘಟನೆ ಗುರುವಾರ ಮಧ್ಯಾಹ್ನ3ಕ್ಕೆ ಕಾಳಗಿಯಲ್ಲಿ ನಡೆದಿದ. ಭೀಮಾಶಂಕರ ದೇವಿಂದ್ರಪ್ಪ ಅರನತ್ತಿ ಗೊಟುರ (30) ಮೃತ ದುರ್ದೈವಿ ರೈತ ಎಂದು ತಿಳಿದು ಬಂದಿದೆ.

ಸ್ವಂತ ಒಂದೂವರೆ ಎಕರೆ ಜಮೀನು ಹೊಂದಿರುವ ಮೃತ ರೈತ ಭೀಮಾಶಂಕರ, ತಾನು ಕಡತಿ ಹಾಕಿಕೊಂಡ ಜಮೀನಿನಲ್ಲಿ ಎಡಿ ಹೊಡೆಯುವ ಕಾರ್ಯದಲ್ಲಿ ದ್ದಾಗ ಗೊಟೂರ ಐಪಿ 3ಫೇಸ್ ವೈರ್ ಕಟ್ಟಾಗಿ ಬಿದ್ದಿರುವಲ್ಲಿಯೇ ಎಡಿ ದಿಂಡು ಹೋದ ಪ್ರಯುಕ್ತ ವಿದ್ಯುತ್ ಹಾದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಆಗಮಿಸಿರುವ ರೈತ ಸಂಘಟನೆ ಅವರು ಹಾಗೂ ಗ್ರಾಮಸ್ಥರು, ಸಂಬಂಧಿಕಕರು ಸೇರಿಕೊಂಡು ಕಾಳಗಿ ಜೆಸ್ಕಾಂ ಕಚೇರಿ ಎದುರು ಮೃತ ರೈತನ ಶವವಿಟ್ಟು ತೀವ್ರ ಪ್ರತಿಭಟನೆಗಿಳಿದರು.

ಮೃತ ರೈತನ ಕುಟುಂಬಕ್ಕೆ ₹25ಲಕ್ಷ ಪರಿಹಾರ ನೀಡಬೇಕು, ಘಟನೆಯ ಹೊಣೆ ಹೊತ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಜಿಲ್ಲೆಯಾದ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿಗಳನ್ನು ತಕ್ಷಣ ದುರಸ್ತಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡುವವರೆಗೂ ಪ್ರತಿಭಟನೆ ಅಂತ್ಯಗೊಳಿಸುವುದಿಲ್ಲವೆಂದು ಪಟ್ಟು ಹಿಡಿದರು.

ಮುಗಿಲು ಮುಟ್ಟಿದ ಅಕ್ರಂದನ: ಮೃತ ರೈತನ ಹೆಂಡತಿ ರತ್ನಮ್ಮಗೆ ಮಲ್ಲಿಕಾರ್ಜುನ, ನಿಖಿಲ್ ಇಬ್ಬರು ಗಂಡು ಮಕ್ಕಳಿದ್ದಾರೆ. ಮನೆ ಯಜಮಾನನ ಸಾವು ಅವರನ್ನು ಕಂಗೆಡಿಸಿದೆ. ಸಂಬಂಧಿಕರ ದುಃಖ ಮುಗಿಲ ಮುಟ್ಟಿತ್ತು. ಏಕಾಏಕಿ ಸಾವಿನ ಸುದ್ದಿ ಕಿವಿಗೆ ಅಪ್ಪಳಿಸಿದ್ದರಿಂದ ಬಂಧುಗಳು ಕಣ್ಣೀರು ಹಾಕಿದರು.

ಆಕ್ರೋಶಗೊಂಡ ರೈತರು ಎಇಇ ಇಲಿಯಾಸ್ ಅಹ್ಮದ್ ತಂಡದ ಜೇಸ್ಕಾಂ ಅಧಿಕಾರಿಗಳ ಮೇಲೆ ಹರಿಹಾಯುತ್ತಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಾಳುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಸಿಪಿಐ ಜಗದೇವಪ್ಪ ಪಾಳಾ ಅವರ ನೇತೃತ್ವದಲ್ಲಿನ ಪೊಲೀಸ್‌ ತಂಡ ಪರಿಸ್ಥಿತಿ ತಿಳಿಗೊಳಿಸಿತು.

ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಸುಂದರ ಡಿ.ಸಾಗರ, ಕಾಶಿನಾಥ ಕಾಮರೆಡ್ಡಿ, ಶಿವಕುಮಾರ ಕಮಕನೂರ, ಜಗನ್ನಾಥ ತೇಲಿ, ಮಲ್ಲೀಕಾರ್ಜುನ ಸಿಂಗೆ, ಶಿವಶರಣರೆಡ್ಡಿ ಇದ್ದರು.

ಜೆಸ್ಕಾಂ ಎಇಇ ಇಲಿಯಾಸ್ ಅಹ್ಮದ್ ಕಾಳಗಿ ಪ್ರಕರಣ ದಾಖಲಿಸಲಿ ಜೆಸ್ಕಾಂನಿಂದ 5ಲಕ್ಷ ರು. ಮಾನವಿಯತೆ ದೃಷ್ಟಿಯಿಂದ ವೈಯಕ್ತಿಕವಾಗಿ 1ಲಕ್ಷ ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆಂದು ಗೊತ್ತಾಗಿದೆ.

ಫೋಟೋ- ಕಾಳಗಿ ಪ್ರೊಟೆಸ್ಟ್‌