ಬಂಗಾರಪೇಟೆ: ತಲೆ ಮೇಲೆ ಕಲ್ಲು ಹೊತ್ತು ಬೆಸ್ಕಾಂ ವಿರುದ್ಧ ರೈತರ ಧರಣಿ
KannadaprabhaNewsNetwork | Published : Oct 11 2023, 12:46 AM IST
ಬಂಗಾರಪೇಟೆ: ತಲೆ ಮೇಲೆ ಕಲ್ಲು ಹೊತ್ತು ಬೆಸ್ಕಾಂ ವಿರುದ್ಧ ರೈತರ ಧರಣಿ
ಸಾರಾಂಶ
ರಾಜ್ಯಕ್ಕೆ ಕತ್ತಲೇ 6ನೇ ಭಾಗ್ಯ ನೀಡಿ ರೈತರ ಹಾಗೂ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕೃಷಿ ಕ್ಷೇತ್ರಕ್ಕೆ 12 ತಾಸು ಗುಣಮಟ್ಟದ ವಿದ್ಯುತ್ ನೀಡುವಂತೆ ರೈತ ಸಂಘದಿಂದ ತಲೆ ಮೇಲೆ ಕಲ್ಲು ಹೊತ್ತು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡಿದರು
ಅಸಮರ್ಪಕ ಲೋಡ್ ಶೆಡ್ಡಿಂಗ್: ಬೆಸ್ಕಾಂ ಕಚೇರಿ ಎದುರು ರೈತ ಸಂಘ ಆಕ್ರೋಶ ಕನ್ನಡಪ್ರಭ ವಾರ್ತೆ ಬಂಗಾರಪೇಟೆ ರಾಜ್ಯಕ್ಕೆ ಕತ್ತಲೇ 6ನೇ ಭಾಗ್ಯ ನೀಡಿ ರೈತರ ಹಾಗೂ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಕೃಷಿ ಕ್ಷೇತ್ರಕ್ಕೆ 12 ತಾಸು ಗುಣಮಟ್ಟದ ವಿದ್ಯುತ್ ನೀಡುವಂತೆ ರೈತ ಸಂಘದಿಂದ ತಲೆ ಮೇಲೆ ಕಲ್ಲು ಹೊತ್ತು ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಮಾಡಿದರು. ಸಂಜೆ 6 ರಿಂದ 10 ಗಂಟೆ ವರೆಗೆ ನಿತ್ಯವಿದ್ಯುತ್ ಕಡಿತ ಮಾಡಿ ರೈತರ ಹಾಗೂ ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ನೀಡಿ ಸನ್ಮಾನ ಮಾಡುವವರೇ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ರೈತರು ಬೆಳೆದ ಅನ್ನ ತಿಂದು ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಕ್ಷಾಂತರ ರು. ಖಾಸಗಿ ಬಂಡವಾಳ ಹಾಕಿ ಬೆಳೆದಿರುವ ಬೆಳೆಗಳು ಕೈಗೆ ಬರುವ ಸಮಯದಲ್ಲಿ ಸಮರ್ಪಕವಾದ ವಿದ್ಯುತ್ ನೀಡದೆ ಬೆಳೆ ನಷ್ಟ ಒಂದು ಕಡೆಯಾದರೆ ಮತ್ತೊಂದು ಕಡೆ ರೋಗಗಳು ನಿಯಂತ್ರಣಕ್ಕೆ ಬಾರದೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಟೊಮೆಟೊ, ಹೂ, ಮತ್ತಿತರ ವಾಣಿಜ್ಯ ಬೆಳೆಗಳಿಗೆ ಬೆಸ್ಕಾಂ ಅಧಿಕಾರಿಗಳೇ ವಿರೋಧಿಗಳಾಗಿದ್ದಾರೆ. ಕಾರ್ಖಾನೆಗಳಿಗೆ ಶ್ರೀಮಂತರ ಖಾಸಗಿ ಕಾರ್ಯಕ್ರಮಗಳಿಗೆ ವಿದ್ಯುತ್ ನೀಡಲು ಯಾವುದೇ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ರೈತರಿಗೆ, ವಿದ್ಯಾರ್ಥಿಗಳಿಗೆ ವಿದ್ಯುತ್ ನೀಡಬೇಕಾದರೆ ಬೆಸ್ಕಾಂ ಅಧಿಕಾರಿಗಳಿಗೆ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಸಾಧ್ಯವಾಗದೆ ಇದ್ದರೆ, ಬೆಸ್ಕಾಂ ಇಲಾಖೆ ಇದ್ದು ಪ್ರಯೋಜನವೇನು ಎಂದು ಪ್ರಶ್ನೆ ಮಾಡಿದರು. ಒಂದು ಕಡೆ ಬೆಲೆ ಕುಸಿತ ಮತ್ತೊಂದು ಕಡೆ ವಿದ್ಯುತ್ ಸಮಸ್ಯೆಯಿಂದ ರೈತರು ಬೀದಿಗೆ ಬಿದ್ದರೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳು ವಿದ್ಯುತ್ ಶಾಕ್ ಹೊಡೆದು ನಾಪತ್ತೆಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ, ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ, ತಾಲೂಕು ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಮರಗಲ್ ಮುನಿಯಪ್ಪ, ಸುಪ್ರಿಂ ಚಲ, ಯಾರಂಘಟ್ಟ ಗಿರೀಶ್, ಜಿಲ್ಲಾಧ್ಯಕ್ಷ ಈ ಕಂಬಳ್ಳಿ ಮಂಜುನಾಥ, ಮಂಗಸಂದ್ರ ತಿಮ್ಮಣ್ಣ, ರಾಮಸಾಗರ ವೇಣು, ಸುರೇಶ್‌ಬಾಬು, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ ಇದ್ದರು.