ಸಾರಾಂಶ
ರಾಗಿ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಂಡು 2 ತಿಂಗಳಾದರೂ ರೈತರ ರಾಗಿ ಖರೀದಿಸಿಲ್ಲಾ. ರೈತರ ಪಂಪ್ ಸೆಟ್‌ಗೆ ಕನಿಷ್ಟ ಏಳು ಗಂಟೆ ಮೂರು ಫೇಸ್ ವಿದ್ಯುತ್ ನಿರಂತರವಾಗಿ ನೀಡುತ್ತಿಲ್ಲ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬರ ಪರಿಹಾರ ಮತ್ತು ಬೆಳೆವಿಮೆ ಹಾಗೂ ಬೆಂಬಲ ಬೆಲೆ ರಾಗಿ ಖರೀದಿ ಆರಂಭಿಸಲು ಒತ್ತಾಯಿಸಿ ರಸ್ತೆ ತಡೆ ನಡೆಸಿದರು.ಗೌರಿಬಿದನೂರು ನಗರದ ಹೊರವಲಯದ ಎಪಿಎಂಸಿ ಯಾರ್ಡ್ ಮುಂದೆ ರೈತರು ರಾಜ್ಯ ಹೆದ್ದಾರಿಯಲ್ಲಿ ರಸ್ತೆಗೆ ರಾಗಿ ಸುರಿದು ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ರೈತರಿಗೆ ಬರಪರಿಹಾರ ನೀಡಿಲ್ಲ
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಗುಂಡಾಪುರ ಲೋಕೇಶ್ ಗೌಡ ಮಾತನಾಡಿ, ಸರ್ಕಾರದಿಂದ ಬರ ಎಂದು ಘೋಷಿಸಿದರು ಸಹ ಒಂದು ಪೈಸೆ ಬರ ಪರಿಹಾರ ನೀಡಿಲ್ಲ. ಪಸಲ್ ಭೀಮಾ ವಿಮೆ ಹಣ ಬಿಡುಗಡೆ ಮಾಡಿಲ್ಲ, ರಾಗಿ ಖರೀದಿ ಕೇಂದ್ರದಲ್ಲಿ ನೊಂದಾಯಿಸಿಕೊಂಡು 2 ತಿಂಗಳಾದರೂ ರೈತರ ರಾಗಿ ಖರೀದಿಸಿಲ್ಲಾ. ರೈತರ ಪಂಪ್ ಸೆಟ್‌ಗೆ ಕನಿಷ್ಟ ಏಳು ಗಂಟೆ ಮೂರು ಫೇಸ್ ವಿದ್ಯುತ್ ನಿರಂತರವಾಗಿ ನೀಡಬೇಕು ಎಂದು ಒತ್ತಾಯಿಸಿದರು.ಕೃಷಿ ವಿದ್ಯುತ್ ಪಂಪು ಸೆಟ್ಟುಗಳಿಗೆ ಅಕ್ರಮ ಸಕ್ರಮಕ್ಕೆ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕೆಂದು ಮತ್ತು ಎಂ ಎಸ್ ಪಿ ದರವನ್ನು ಕೂಡಲೇ ರೈತರ ಒತ್ತಾಯದ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ನೀಡಬೇಕು ಮತ್ತು ಡಾ.ಎಂ ಎಸ್ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಬೇಕು ಎಂದು ಈ ದಿನ ರಸ್ತೆಗೆ ರಾಗಿ ಸುರಿದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.ರೈತರ ಒತ್ತಾಯಗಳನ್ನು ಈಡೇರಿಸುವಂತೆ ಕೇಂದ್ರದ ಒಕ್ಕೂಟ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ ರಸ್ತೆ ತಡೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.ವಾರದೊಳಗೆ ರಾಗಿ ಖರೀಧಿ ಕೇಂದ್ರ
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಮಹೇಶ್ ಎಸ್ ಪತ್ರಿ, ರೈತ ಸಂಘಟನೆಗಳು ಮತ್ತು ರೈತರು ನೀಡಿರುವಂತಹ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ,ರೈತರು ನೀಡಿರುವಂತಹ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರದ ಗಮನಕ್ಕೆ ತಂದು ಒಂದು ವಾರದ ಒಳಗೆ ರಾಗಿ ಖರೀದಿ ಕೇಂದ್ರವನ್ನು ತೆರೆಯಲಾಗುತ್ತದೆ ಮತ್ತು ತಾಲೂಕಿನ ಮಟ್ಟದಲ್ಲಿ ರೈತರಿಗೆ ಸಮಸ್ಯೆ ಇದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.ಪ್ರತಿಭಟನೆಯಲ್ಲಿ ರಾಮಚಂದ್ರ ರೆಡ್ಡಿ, ಸನತ್ ಕುಮಾರ್, ವೆಂಕಟೇಶ್, ಹಿರೇಬಿದನೂರು ರಾಜಣ್ಣ, ನರೇಂದ್ರ,ಶಶಿ ಕುಮಾರ್, ಶ್ರೀನಿವಾಸ್ ,ನರಸರೆಡ್ಡಿ, ಬಾಬು, ಆದಿನಾರಾಯಣಪ್ಪ,ನರಸಿಂಹ ರೆಡ್ಡಿ ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))