ಸಾರಾಂಶ
ಹೊಸಪೇಟೆ: ರೈತರು ಸಾಗುವಳಿ ಮಾಡುತ್ತಿರುವ ಪಟ್ಟಾ ಜಮೀನು, ಸರ್ಕಾರಿ ಜಮೀನು, ಅರಣ್ಯ ಜಮೀನುಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ, ನಂದಿಬಂಡಿ, ಕಂದಾಯ ಗ್ರಾಮದ ಸರ್ಕಾರಿ ಜಮೀನು, ಗರಗ ನಾಗಲಾಪುರ ಗ್ರಾಮದ ಅರಣ್ಯ ಜಮೀನು ಹಾಗೂ ಇತ್ತೀಚಿನ ದಿನಗಳಲ್ಲಿ ಡಣಾಯಕನ ಕೆರೆ ಕಂದಾಯ ಗ್ರಾಮದ ಸುಮಾರು 50ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ನೋಟಿಸ್ ಅನ್ನು ಜಾರಿ ಮಾಡಲಾಗಿದೆ. ಆದರೆ ,70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅವರನ್ನು ಒಕ್ಕಲೆಬ್ಬಿಸುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ರೈತರ ಕೈಯಿಂದ ಭೂಮಿ ಕಸಿದುಕೊಂಡು ಸರ್ಕಾರ ಏನು ಅಭಿವೃದ್ಧಿ ಮಾಡಿದೆ ಅನ್ನೋದನ್ನ ಶ್ವೇತ ಪತ್ರ ಹೊರಡಿಸಬೇಕು. ರೈತರು ಸಾಗುವಳಿ ಮಾಡುತ್ತಿರುವ ಪಟ್ಟಾ ಜಮೀನು, ಸರ್ಕಾರಿ ಜಮೀನು, ಅರಣ್ಯ ಜಮೀನುಗಳಿಗೆ ಹಕ್ಕು ಪತ್ರ ನೀಡಬೇಕು. ರೈತರ ಸಮಸ್ಯೆಗಳಿಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ಮುಖಂಡರಾದ ಬಿ. ಗೋಣಿ ಬಸಪ್ಪ, ಜಿ. ಮೆಹಬೂಬ್‌ಸಾಬ್, ರವಿಕುಮಾರ್, ಗಂಟೆ ಸೋಮಶೇಖರ, ರಾಜಭಕ್ಷಿ, ಅಮಿಕ್‌ಸಾಬ್ ಸರ್ದಾರ್, ಎಚ್.ಲಕ್ಷ್ಮಿ, ಎನ್. ಸೋಮಕ್ಕ, ಎನ್.ಬಸಮ್ಮ, ಏ.ಕೆ.ಮಂಜುಳಾ, ಫಕ್ಕುರ್‌ಸಾಬ್, ಅಂಗಡಿ ಹುಲಗಪ್ಪ, ತಳವಾರ ಹನುಮಂತಪ್ಪ, ಮಂಜುನಾಥ, ಡಿ. ಹುಲುಗಪ್ಪ, ಬಿ ದುರ್ಗಪ್ಪ, ದೊಡ್ಡ ಮಾರೆಪ್ಪ ಮತ್ತಿತರರಿದ್ದರು.
ಹೊಸಪೇಟೆಯಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಪಟ್ಟಾ ಜಮೀನು, ಸರ್ಕಾರಿ ಜಮೀನು, ಅರಣ್ಯ ಜಮೀನುಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.