ಕಾಂಗ್ರೆಸ್‌ಗೆ ಮತ: ರೈತರ ಹಾಲು ಪಡೆಯದ ಡೈರಿ

| Published : Jun 06 2024, 12:30 AM IST

ಸಾರಾಂಶ

ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮದ ಜನರು ಡೇರಿಗೆ ತಂದ ಹಾಲನ್ನು ಸ್ವೀಕರಿಸದೇ ಡೇರಿ ಅವರು ವಾಪಸ್‌ ಕಳುಹಿಸಿದ್ದಾರೆ. ಕೂಡಲೇ ಈ ಡೇರಿ ವಿರುದ್ಧ ಕ್ರಮ ಕೈಗೊಂಡು ಹಾಲನ್ನು ಹಾಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ತುಂಬಿದ ಹಾಲಿನ ಕ್ಯಾನನ್ನು ತಂದು ಪ್ರದರ್ಶಿಸಿ ರೈತರು ಪ್ರತಿಭಟನೆ ನಡೆಸಿದರು.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗಿಂತ ಕೈಗೆ ಹಕ್ಕು ಚಲಾವಣೆ । ಹಾಲು ಮಳಿಗೆ ವಿರುದ್ಧ ರೈತರ ಧರಣಿ । ಜಿಲ್ಲಾಡಳಿತಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗ್ರಾಮದ ಜನರು ಹೆಚ್ಚು ಮತವನ್ನು ಹಾಕಿ ಜೆಡಿಎಸ್ ಪಕ್ಷಕ್ಕೆ ಕಡಿಮೆ ಮತ ಹಾಕಲಾಗಿದೆ ಎಂದು ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮದ ಜನರು ಡೇರಿಗೆ ತಂದ ಹಾಲನ್ನು ಸ್ವೀಕರಿಸದೇ ಡೇರಿ ಅವರು ವಾಪಸ್‌ ಕಳುಹಿಸಿದ್ದಾರೆ. ಕೂಡಲೇ ಈ ಡೇರಿ ವಿರುದ್ಧ ಕ್ರಮ ಕೈಗೊಂಡು ಹಾಲನ್ನು ಹಾಕುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ತುಂಬಿದ ಹಾಲಿನ ಕ್ಯಾನನ್ನು ತಂದು ಪ್ರದರ್ಶಿಸಿ ರೈತರು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ವಕೀಲರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಮಾಧ್ಯಮದೊಂದಿಗೆ ಮಾತನಾಡಿ, ‘ಲೋಕಸಭಾ ಚುನಾವಣೆಯಲ್ಲಿ ಹಾಸನ ತಾಲೂಕು ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತವನ್ನು ಕೊಡಲಾಗಿದೆ ಎಂದು ಇದೇ ಗ್ರಾಮದಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೆಡಿಎಸ್ ಬೆಂಬಲಿತ ನಾಗರಾಜು ದೌರ್ಜನ್ಯ ಎಸಗಿದ್ದಾರೆ. ಕಾಂಗ್ರೆಸ್ ಬೆಂಬಲಿಗರು ಗ್ರಾಮದ ಡೈರಿಗೆ ಹಾಲನ್ನು ಹಾಕಲು ಹೋದಾಗ ಡೈರಿಯಲ್ಲಿ ನಾಗರಾಜು ಕುಳಿತುಕೊಂಡು ಹಾಲನ್ನು ಕೊಡಬೇಡಿ ಎಂದು ಬೈದು, ಹೊಡೆದು ಕಳುಹಿಸಿದ್ದಾರೆ’ ಎಂದು ದೂರಿದರು.

‘ಜೆಡಿಎಸ್ ದೌರ್ಜನ್ಯಕ್ಕೆ ಈಗಾಗಲೇ ಜಿಲ್ಲೆಯ ಜನತೆ ಉತ್ತರ ಕೊಡಲಾಗಿದ್ದು, ಅಳಿವಿನ ಅಂಚಿಗೆ ಬಂದರೂ ಕೂಡ ಇನ್ನು ದೌರ್ಜನ್ಯ ನಿಲ್ಲಿಸಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅವರು ಉಳಿಯುವುದಿಲ್ಲ. ಪಕ್ಷವು ಉಳಿಯುವುದಿಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ನಮಗೆ ಹೊಸ ಡೈರಿ ಮಾಡಿಕೊಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷ ಮತ್ತು ಜೆಡಿಎಸ್ ಪಕ್ಷಕ್ಕೆ ಪ್ರತ್ಯೇಕ ಡೈರಿ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

‘ಹಾಲು ಉತ್ಪಾದಕರ ಸಂಘವು ಯಾರ ಅಪ್ಪನ ಮನೆಯ ಆಸ್ತಿಯಲ್ಲ. ಅದು ರೈತರ ಆಸ್ತಿ, ಅಧ್ಯಕ್ಷನಿಗೆ ಎಷ್ಟು ಅಧಿಕಾರವಿದೆಯೋ ಹಾಲು ಹಾಕುವವರಿಗೂ ಅಷ್ಟೇ ಅಧಿಕಾರವಿದೆ. ಇದನ್ನು ಮನಗೊಂಡ ಜಿಲ್ಲಾಧಿಕಾರಿ ಹಾಲು ಹಾಕಲು ತಿರಸ್ಕಾರ ಮಾಡಿರುವ ಕಾರ್ಯದರ್ಶಿ ಹಾಗೂ ಅಧ್ಯಕ್ಷನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ರೈತರು ಡೈರಿಗೆ ಹಾಲು ಹಾಕಲು ಅವಕಾಶ ಮಾಡಿಕೊಡಬೇಕು’ ಎಂದು ರೈತರ ಪರವಾಗಿ ಮನವಿ ಮಾಡಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೋಮನಹಳ್ಳಿ ಗ್ರಾಮದ ಮುಖಂಡರಾದ ಶಿವಣ್ಣ, ರಾಮಚಂದ್ರ ಕಬ್ಬಳ್ಳಿ, ಗೋಪಾಲ್, ಕರೀಗೌಡ, ರಾಜಣ್ಣ ಇತರರು ಇದ್ದರು. ಚನ್ನರಾಯಪಟ್ಟಣ ನನ್ನ ರಾಕೀಯ ಭವಿಷ್ಯ ರೂಪಿಸಿದೆ: ಹಾಸನ ನೂತನ ಸಂಸದ ಶ್ರೇಯಸ್ ಪಟೇಲ್

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ನನಗೆ ರಾಜಕೀಯದ ಭವಿಷ್ಯ ನೀಡಿದ್ದು ಚನ್ನರಾಯಪಟ್ಟಣ ತಾಲೂಕಿನ ಜನತೆ, ಇಲ್ಲಿಂದಲೇ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದೇನೆ ಎಂದು ನೂತನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ತಿಳಿಸಿದರು.ಪಟ್ಟಣದ ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ‘ಹೊಳೇನರಸೀಪುರ ನನ್ನ ಹುಟ್ಟೂರಾದರೆ ಚನ್ನರಾಯಪಟ್ಟಣ ನನ್ನ ರಾಜಕೀಯದ ಭವಿಷ್ಯ ರೂಪಿಸಿದ ತಾಲೂಕು, ನನ್ನ ಉಸಿರಿರುವವರೆಗೆ ಮರೆಯುವುದಿಲ್ಲ. ತಾಲೂಕಿನಿಂದ ಅತೀ ಹೆಚ್ಚು ಮತ ನೀಡಿ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಹೇಳಿದರು.‘ಜಿಲ್ಲೆಯಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು ಅದನ್ನು ತಡೆಯಿಡಿಯುವ ಕೆಲಸವಾಗಬೇಕು, ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟಲು ಜಿಲ್ಲೆಯಲ್ಲಿ ಪ್ರಮಾಣಿಕ ಕೆಲಸ ಮಾಡುತ್ತೆನೆ. ಮುಂದಿನ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಬರಲಿದ್ದು ಜಿಲ್ಲೆಯಿಂದ ಹೆಚ್ಚು ಸ್ಥಾನಗಳಿಸಲು ಶ್ರಮಿಸುತ್ತೇವೆ. ನಮ್ಮ ತಾತ, ತಾಯಿಗೆ ಜನರು ಹೇಗೆ ಹರಸಿದರೋ ಅದೇ ರೀತಿ ನನಗೂ ರಾಜಕೀಯದಲ್ಲಿ ಆಶೀರ್ವಾದ ಮಾಡಿದ್ದೀರಿ’ ಎಂದು ಸಂತಸ ವ್ಯಕ್ತಪಡಿಸಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆಯಿಂದ ಕಾರ್ಯಕರ್ತರ ಜೊತೆ ನಡೆದುಕೊಂಡು ದೇವಸ್ಥಾನಕ್ಕೆ ಆಗಮಿಸಿದ ಶ್ರೇಯಸ್‌ ಪಟೇಲ್ ಅವರಿಗೆ ಅದ್ಧೂರಿ ಸ್ವಾಗತ ಕೋರಿ ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಕಾರ್ಯಕರ್ತರು ಪಟಾಕಿ ಹೊಡೆದು, ಸಿಹಿ ಹಂಚಿ ಕುಣಿದು ಕುಪ್ಪಳಿಸಿದರು.ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಎ.ಮಂಜಣ್ಣ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಯುವರಾಜ್, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್.ಪಿ.ಪ್ರಕಾಶ್‌ಗೌಡ, ಗುಲಸಿಂದ ಜನಾರ್ಧನ್‌, ಜಗದೀಶ್, ಕಬ್ಬಾಳ್‌ ಸುರೇಶ್ ಇದ್ದರು.