ಸಾರಾಂಶ
ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ತಾಲೂಕಿನಲ್ಲಿರುವ ವಿವಿಧ ಸಕ್ಕರೆ ಕಾರ್ಖಾನೆಗಳು 5 ತಿಂಗಳಿನಿಂದ ಕಬ್ಬಿನ ಬಿಲ್ ಪಾವತಿಸದಿರುವುದರಿಂದ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಕಬ್ಬಿನ ಬಿಲ್ ಪಾವತಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ತಾಲೂಕಿನಲ್ಲಿರುವ ವಿವಿಧ ಸಕ್ಕರೆ ಕಾರ್ಖಾನೆಗಳು 5 ತಿಂಗಳಿನಿಂದ ಕಬ್ಬಿನ ಬಿಲ್ ಪಾವತಿಸದಿರುವುದರಿಂದ ಕಬ್ಬು ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಜಮಖಂಡಿ ಶುಗರ್ಸ್ ಕಾರ್ಖಾನೆ ಎದುರು ಜಮಾಯಿಸಿದ ರೈತರು, ಕಳೆದ 5 ತಿಂಗಳಿಂದ ಕಬ್ಬಿನ ಬಿಲ್ ಪಾವತಿಸಿಲ್ಲ, ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು, ರೈತರು ಸರಬರಾಜು ಮಾಡಿದ ಕಬ್ಬಿಗೆ 15 ರಿಂದ 20 ದಿನಗಳಲ್ಲಿ ಬಿಲ್ ಪಾವತಿಸುವ ನಿಯಮವಿದೆ, ಆದರೆ ಇಲ್ಲಿಯ ಕಾರ್ಖಾನೆಗಳು ನಿಯಮ ಗಾಳಿಗೆ ತೂರಿ ರೈತರಿಗೆ ತೊಂದರೆ ನೀಡುತ್ತಿವೆ ಎಂದು ದೂರಿದರು.ವಿಜಯಪುರ ಜಿಲ್ಲೆಯ ದೇವರ ಗೆಣ್ಣೂರು, ದೇವಾಪುರ, ಕುಮಠೆ, ಮಮದಾಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು. ಸರ್ಕಾರ, ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ರೈತರ ಬಿಲ್ಲ್ ಪಾವತಿಸುವಂತೆ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದರು. ಬಸವರಾಜ ಹರನಟ್ಟಿ, ಪುಟ್ಟು ಗಡದನ್ನವರ, ಮಾಳು ಸಿದ್ದಾಪುರ, ಬಸವರಾಜ ಸುತಗುಂಡಿ, ಪಡೆಪ್ಪ ಕೊಡೆಕಲ್, ಅನೀಲ ಯಡಳ್ಳಿ ಮುಂತಾದವರಿದ್ದರು.