ಚಿಕ್ಕಮಗಳೂರುಚಿಕ್ಕಮಗಳೂರಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಬುಧವಾರ ಕೆಲಕಾಲ ಖರೀದಿ ನಿಲ್ಲಿಸಲಾಯಿತು. ಇದೇ ವೇಳೆಗೆ ಆರಂಭಗೊಂಡ ಮಳೆಯಿಂದ ರಾಗಿ ಹೊತ್ತು ತಂದ ರೈತರು ಫಸಲು ರಕ್ಷಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.
ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಎಂಟು ಕಡೆ ಸರ್ಕಾರ ರಾಗಿ ಖರೀದಿ ಕೇಂದ್ರ
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಚಿಕ್ಕಮಗಳೂರಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ಬುಧವಾರ ಕೆಲಕಾಲ ಖರೀದಿ ನಿಲ್ಲಿಸಲಾಯಿತು. ಇದೇ ವೇಳೆಗೆ ಆರಂಭಗೊಂಡ ಮಳೆಯಿಂದ ರಾಗಿ ಹೊತ್ತು ತಂದ ರೈತರು ಫಸಲು ರಕ್ಷಣೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಎಂಟು ಕಡೆ ಸರ್ಕಾರ ರಾಗಿ ಖರೀದಿ ಕೇಂದ್ರ ಆರಂಭಿಸಿದೆ. ಕಳೆದ ಎರಡು ಮೂರು ದಿನಗಳಿಂದ ಅಕಾಲಿಕ ಸುರಿಯುತ್ತಿರುವ ಮಳೆಯಿಂದ ಖರೀದಿ ಕೇಂದ್ರದ ಮುಂಭಾಗ ಸಾಲುಗಟ್ಟಿ ನಿಂತಿರುವ ರೈತರ ಟ್ಯಾಕ್ಟರ್ ಸೇರಿದಂತೆ ಇತರೆ ವಾಹನದಳಲ್ಲಿನ ರಾಗಿ ಚೀಲಗಳನ್ನು ರಕ್ಷಣೆ ಮಾಡುವ ಸಂಕಷ್ಟ ಎದುರಾಗಿದೆ. ಬುಧವಾರವೂ ಇದೇ ಪರಿಸ್ಥಿತಿ ಚಿಕ್ಕಮಗಳೂರಿನ ರಾಗಿ ಖರೀದಿ ಕೇಂದ್ರದ ಮುಂಭಾಗದಲ್ಲಿ ಉಂಟಾಗಿದೆ.
ನೋಂದಣಿ ಮಾಡಿದ ರೈತರು ಮಾತ್ರ ರಾಗಿ ತೆಗೆದುಕೊಂಡು ಬಂದಿದ್ದರು. ಎಲ್ಲರಿಗೂ ಬೆಳಗ್ಗೆಯೇ ಟೋಕನ್ ನೀಡಲಾಗಿದೆ. ಟೋಕನ್ ಪಡೆದ ರೈತರ ರಾಗಿ ಖರೀದಿ ಮಾಡಲು ಸಾಧ್ಯವಾಗದ ಸ್ಥಿತಿ ಖರೀದಿ ಕೇಂದ್ರದಲ್ಲಿ ನಿರ್ಮಾಣವಾಗಿದೆ.ಖರೀದಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ: ಬುಧವಾರ ಎಂದಿನಂತೆ ಬೆಳಗ್ಗೆಯೇ ರಾಗಿ ಖರೀದಿ ಆರಂಭಿಸಲಾಯಿತು. ಮಧ್ಯಾಹ್ನದ ವರೆಗೆ ಕೆಲವು ರೈತರಿಂದ ರಾಗಿ ಖರೀದಿಸಿ ಚೀಲಕ್ಕೆ ತುಂಬಲಾಯಿತು. ತುಂಬಿದ ಚೀಲಗಳನ್ನು ಲಾರಿಗೆ ಲೋಡ್ ಮಾಡಿ ಗೋದಾಮಿಗೆ ತೆರಳಿದ ಖರೀದಿ ಕೇಂದ್ರದ ಸಿಬ್ಬಂದಿ ವಾಪಾಸ್ ಬರಲಿಲ್ಲ. ಖರೀದಿ ಕೇಂದ್ರದ ಒಳಾಂಗಣ ತುಂಬುವವರೆಗೆ ರೈತರಿಂದ ಖರೀದಿ ಮಾಡಿದ ಚೀಲಗಳು ತುಂಬಲಾಯಿತು.
ಬಾಕಿ ಉಳಿದ ರೈತರ ರಾಗಿ ಅಳತೆ ಮಾಡಿ ಚೀಲ ತುಂಬಿಸಿಕೊಂಡು ಚೀಲ ಇಡಲು ಸ್ಥಳಾವಕಾಶವೇ ಇಲ್ಲದೆ ಖರೀದಿಯನ್ನೆ ಸಿಬ್ಬಂದಿ ನಿಲ್ಲಿಸಿದರು.ಗೋದಾಮಿನ ಬಳಿಯೂ ಇಲ್ಲ ಸಿಬ್ಬಂದಿ
ಖರೀದಿ ಕೇಂದ್ರದಿಂದ ಸುಮಾರು 6 ರಿಂದ 7 ಕಿ.ಮೀ ದೂರದ ಕೈಗಾರಿಕಾ ಪ್ರದೇಶದ ಎಸ್‌ಡಬ್ಲ್ಯೂಸಿ ಗೋದಾಮಿಗೆ ಹೋದ ಲಾರಿಗಳಲ್ಲಿನ ರಾಗಿ ಚೀಲಗಳನ್ನು ಇಳಿಸುವುದಕ್ಕೆ ಅಲ್ಲೂ ಸಿಬ್ಬಂದಿಯೇ ಇರಲಿಲ್ಲ. ಹೀಗಾಗಿ, ಖರೀದಿಸಿದ ರಾಗಿ ತುಂಬಿ ಕೊಂಡು ಹೋದ ಲಾರಿಗಳು ಸಂಜೆವರೆಗೂ ವಾಪಾಸ್ ಬರಲಿಲ್ಲ. ರೈತರು ಮಳೆಯಲ್ಲೇ ಕಾಯಬೇಕಾದ ಸ್ಥಿತಿ ಉಂಟಾಯಿತು.ಮಳೆ ಶುರು, ರಾಗಿ ರಕ್ಷಣೆಗೆ ಪರದಾಟ
ಅದೇ ಸಮಯಕ್ಕೆ ಸರಿಯಾಗಿ ಮಳೆ ಆರಂಭವಾಗಿ ಟ್ಯಾಕ್ಟರ್, ಟಾಟಾ ಎಸ್ ಸೇರಿದಂತೆ ವಿವಿಧ ವಾಹನಗಳಲ್ಲಿ ಬಂದಿದ್ದ ರೈತರು ತಮ್ಮ ರಾಗಿ ಚೀಲಗಳ ರಕ್ಷಣೆಗೆ ಪರದಾಡುವಂತಾಯಿತು.--- ಬಾಕ್ಸ್---
ಗುತ್ತಿಗೆದಾರರಿಗೆ ನೋಟಿಸ್‌ರಾಗಿ ಖರೀದಿ ಕೇಂದ್ರದಲ್ಲಿ ಸಿಬ್ಬಂದಿ ನಿಯೋಜನೆಗೆ ಸಂಬಂಧಿಸಿದಂತೆ ನಾಗರಾಜು ಎಂಬ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ. ಸಿಬ್ಬಂದಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಆದರೂ ಗುತ್ತಿಗೆದಾರರು ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.---ಕೋಟ್---
ಚಿಕ್ಕಮಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಕಡಿಮೆ ಸಿಬ್ಬಂದಿ ಇರುವುದರಿಂದ ಸಮಸ್ಯೆ ಆಗಿದೆ. ರೈತರ ರಾಗಿ ಮಳೆಯಿಂದ ಹಾಳಾಗದಂತೆ ರಕ್ಷಣೆಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.- ವಸಂತ ಕುಮಾರಿ, ಜಿಲ್ಲಾ ವ್ಯವಸ್ಥಾಪಕರು ಕೆಎಫ್‌ಸಿಎಸ್‌ಸಿ--- ಬಾಕ್ಸ್--
ಚಿಕ್ಕಮಗಳೂರು ರಾಗಿ ಖರೀದಿ ಕೇಂದ್ರದ ವಿವರರೈತರ ನೋಂದಣಿ ಸಂಖ್ಯೆ: 1101
ಸರಬರಾಜು ರೈತರ ಸಂಖ್ಯೆ: 373ಖರೀದಿ ರಾಗಿ ಪ್ರಮಾಣ: 9159 ಕ್ವಿಂಟಾಲ್
-ಫೋಟೋ
ಚಿಕ್ಕಮಗಳೂರಿನ ಎಪಿಎಂಸಿ ಆವರಣದ ರಾಗಿ ಖರೀದಿ ಕೇಂದ್ರದ ಒಳಾಂಗಣ ರಾಗಿ ಚೀಲದಿಂದ ತುಂಬಿಕೊಂಡಿರುವುದು.-ಚಿಕ್ಕಮಗಳೂರು ಎಪಿಎಂಸಿ ಆವರಣದಲ್ಲಿ ಬುಧವಾರ ಮಳೆಯಿಂದ ರಾಗಿ ಚೀಲ ರಕ್ಷಣೆಗೆ ರೈತರು ಹೊದಿಕೆ ಹಾಕಿರುವುದು.