ರಾಜ್ಯ ಸರ್ಕಾರದ ವಿರುದ್ಧ ಒಣಗಿದ ಕಬ್ಬು, ಎತ್ತಿನಗಾಡಿಯೊಂದಿಗೆ ರೈತರ ಪ್ರತಿಭಟನೆ

| Published : Mar 30 2024, 12:45 AM IST

ರಾಜ್ಯ ಸರ್ಕಾರದ ವಿರುದ್ಧ ಒಣಗಿದ ಕಬ್ಬು, ಎತ್ತಿನಗಾಡಿಯೊಂದಿಗೆ ರೈತರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ನೀರು ಕೊಡದೆ ಚುನವಣೆಗೆ ಬರುವಂತ ದುರಾಂಕರದ ವರ್ತನೆಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ತೋರುತ್ತಿದ್ದರೆ. ಈಗಾಗಲೇ ಶೇ.70 ರಷ್ಟು ಭಾಗದ ಬೆಳೆಗಳು ಒಣಗಿಹೋಗಿದೆ. ಅಳಿದುಳಿದಿರುವಂತ ಶೇ.30 ರಷ್ಟು ಬೆಳೆಗಳನ್ನು ಉಳಿಸಿಕೊಳ್ಳಲು ಜೊತೆಗೆ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಅಂತರ್ಜಲ ಹೆಚ್ಚಿಸಿಕೊಳ್ಳಲು ಕನಿಷ್ಠ ಒಂದು ವಾರಗಳ ಕಾಲ ಕಾಲುವೆಗಳ ಮೂಲಕ ನೀರು ಹರಿಸುವಂತೆ ಒತ್ತಾಯ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕದ್ದುಮುಚ್ಚಿ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರು ಹರಿಸಿ, ಕೆಆರ್ ಎಸ್ ಅಣೆಕಟ್ಟೆ ವ್ಯಾಪ್ತಿಯ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿ ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರು ಒಣಗಿದ ಕಬ್ಬು, ಎತ್ತಿನಗಾಡಿಯೊಂದಿಗೆ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬೆಂಗಳೂರು - ಮೈಸೂರು ಹೆದ್ದಾರಿ ಬಳಿ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ, ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ನೂರಾರು ರೈತರು ಸೇರಿ ರಾಜ್ಯ ಸರ್ಕಾರ, ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಜಿಲ್ಲಾ ಶಾಸಕರುಗಳ ವಿರುದ್ಧ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿ ವರೆವಿಗೂ ಒಣಗಿರುವ ಕಬ್ಬಿನ ಜೊಲ್ಲೆ ಹಿಡಿದು, ಎತ್ತಿನಗಾಡಿ, ರಾಸುಗಳೊಂದಿಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಂತರ ಕೆ.ಎಸ್ ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ಕದ್ದುಮುಚ್ಚಿ ಪ್ರತಿನಿತ್ಯ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ಸ್ಥಳೀಯ ರೈತರ ಬದುಕಿನ ಜೊತೆ ಚಲ್ಲಾಟವಾಡಿ ವಿಷಕೊಡಲು ಮುಂದಾಗಿದೆ ಎಂದು ಕಿಡಿಕಾರಿದರು.

ರೈತರಿಗೆ ನೀರು ಕೊಡದೆ ಚುನವಣೆಗೆ ಬರುವಂತ ದುರಾಂಕರದ ವರ್ತನೆಯನ್ನ ರಾಜ್ಯ ಕಾಂಗ್ರೆಸ್ ಸರ್ಕಾರ ತೋರುತ್ತಿದ್ದರೆ. ಈಗಾಗಲೇ ಶೇ.70 ರಷ್ಟು ಭಾಗದ ಬೆಳೆಗಳು ಒಣಗಿಹೋಗಿದೆ. ಅಳಿದುಳಿದಿರುವಂತ ಶೇ.30 ರಷ್ಟು ಬೆಳೆಗಳನ್ನು ಉಳಿಸಿಕೊಳ್ಳಲು ಜೊತೆಗೆ ಜನ-ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ಅಂತರ್ಜಲ ಹೆಚ್ಚಿಸಿಕೊಳ್ಳಲು ಕನಿಷ್ಠ ಒಂದು ವಾರಗಳ ಕಾಲ ಕಾಲುವೆಗಳ ಮೂಲಕ ನೀರು ಹರಿಸುವಂತೆ ಒತ್ತಾಯಿಸಿದರು.

ನೀರಿನ ವಿಷಯವಾಗಿ ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಈಗಾಗಲೇ ಬಹುತೇಕ ಬೆಳೆಗಳ ಒಣಗಿ ಭೂಮಿಯಲ್ಲಿ ಬೆಳೆಗಳಿಲ್ಲದಂತಾಗಿದೆ. ಹಾಗಾಗಿ ರೈತರಿಗೆ ಸೂಕ್ತ ಪರಿಹಾರ ಘೋಷಣೆ ಮಾಡಿ ಚುನಾವಣೆಗೆ ಬನ್ನಿ. ಕೇವಲ ಮತಕ್ಕಾಗಿ ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ನಿಮಗೆ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕುಡಿಯುವ ನೀರಿನ ಸಲುವಾಗಿ ಸುಮಾರು 120 ರಿಂದ 150 ಕಿ.ಮೀ ದೂರದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋತ್ತಿದ್ದಾರೆ. ಇಲ್ಲೇ 10 ಕಿ.ಮೀ ದೂರದ ವ್ಯಾಪ್ತಿಯಲ್ಲಿರುವ ನಮಗೇಕೆ ಕುಡಿಯಲು ನೀರು ಹರಿಸುತ್ತಿಲ್ಲ. ಉಪಮುಖ್ಯಮಂತ್ರಿಗಳ ಈ ದೋರಣೆ ಸರಿಯಲ್ಲ, ನಮಗೂ ಸಹ ಜನ-ಜನುವಾರುಗಳು ಕುಡಿಯಲು ನೀರು ಹರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ಕೃಷ್ಣ, ಖಜಾಂಚಿ ಮಹದೇವು, ಉಪಾಧ್ಯಕ್ಷ ನಾಗರಾಜು, ಜಯರಾಮೇಗೌಡ, ಜಗದೀಶ್, ಮಹಾಲಿಂಗು, ಕಡತನಾಳು ಶ್ರೀಧರ, ಮಹದೇವು, ಸುರೇಶ, ಶಿವಣ್ಣ, ರಾಮಚಂದ್ರು, ಡಿ.ಎಂ ಮಹೇಶ್, ಚಾಮರಾಜು, ಕೆ.ಆರ್ ಲೋಕೇಶ್, ಶಿವರಾಜು ದೇವರಾಜು ಸೇರಿದಂತೆ ಇತರರು ಇದ್ದರು.