ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ನೆಲಮಂಗಲ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಯೂರಿಯಾಗೆ ಭಾರಿ ಬೇಡಿಕೆ ಬಂದಿದೆ. ಏಕಕಾಲಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಯುರಿಯಾದ ಅಭಾವ ಹೆಚ್ಚಾಗಿದೆ. ರೈತರು ಸಹಕಾರ ಸಂಘಗಳು, ಗೊಬ್ಬರ ಅಂಗಡಿಗಳ ಮುಂದೆ ಕಿ.ಮೀಗಟ್ಟಲೇ ಸಾಲು ನಿಂತು, ಜಗಳವಾಡಿ ಗೊಬ್ಬರ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.ಪ್ರಸ್ತುತ ಮಾರುಕಟ್ಟೆಯಲ್ಲಿ ಯೂರಿಯಾ ಒಂದು ಮೂಟೆಗೆ 300 ರು.ಗಳಿಗೆ ಮಾರಾಟ ಮಾಡುತ್ತಿದ್ದು, ಹಲವು ಕಡೆ ಹಣ ಬೆಲೆ ನೀಡಿದರೂ ಯೂರಿಯಾ ಸಿಗುತ್ತಿಲ್ಲ. ಇದರಿಂದ ರೈತರು ಪರದಾಡುತ್ತಿದ್ದಾರೆ. ತಾಲೂಕಿನಲ್ಲಿ ರಾಗಿ, ಜೋಳ ಮುಂತಾದ ಬೆಳೆಗಳನ್ನು ಬೆಳೆದಿರುವ ರೈತರು ಖರೀದಿಗೆ ಮುಂದಾದ ಹಿನ್ನೆಲೆಯಲ್ಲಿ ಯೂರಿಯಾಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.ನೂಕುನುಗ್ಗಲು : ತಾಲೂಕಿನ ಎಲ್ಲಾ ಸಹಕಾರ ಸಂಘಗಳಲ್ಲಿ, ಅಂಗಡಿಗಳಲ್ಲಿ ಮಾರಾಟ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಾರಾಟ ಮಾಡುವ ಗೊಬ್ಬರ ಅಂಗಡಿಗಳು ಹಾಗೂ ಸಹಕಾರ ಸಂಘಗಳ ಮುಂದೆ ಬೆಳಗ್ಗೆ 6 ಗಂಟೆಯಿಂದಲೇ ರೈತರು ಗೊಬ್ಬರಕ್ಕಾಗಿ ಕಿ.ಮೀಗಟ್ಟಲೇ ಸಾಲಾಗಿ ನಿಂತುಕೊಂಡು ಬಿಸಿಲು ಎನ್ನದೇ ಕೂರಲು ಜಾಗವಿಲ್ಲದೆ ಪಡೆಯುವ ಪರಿಸ್ಥಿತಿಯಿದೆ.2 ಮೂಟೆ ನೀಡುವಂತೆ ಆಗ್ರಹ : ತಾಲೂಕಿನಲ್ಲಿ ಟಿಎಪಿಸಿಎಂಎಸ್ ಸೇರಿದಂತೆ ನಾಲ್ಕು ವಿಎಸ್‍ಎಸ್‍ಎನ್ ಸಂಘಗಳು ಸೇರಿದಂತೆ ಐದು ಗೊಬ್ಬರ ಮಾರಾಟದ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡುತ್ತಿದ್ದು, ಪ್ರಸ್ತುತ ಇಲ್ಲಿ ಪ್ರತಿ ರೈತರಿಗೆ ಒಂದು ಮೂಟೆ ಯೂರಿಯಾ ವಿತರಿಸಿ ಪರಿಸ್ಥಿತಿ ನಿಯಂತ್ರಿಸಲಾಗುತ್ತಿದ್ದು, ಕನಿಷ್ಟ ಎರಡು ಮೂಟೆಗಳನ್ನಾದರೂ ನೀಡಬೇಕೆಂದು ರೈತರು ಆಗ್ರಹವಾಗಿದೆ..2800 ಟನ್ ಪೂರೈಕೆ : ತಾಲೂಕಿಗೆ 2750 ಟನ್ ಯೂರಿಯಾ ಪೂರೈಕೆಯಾಗಬೇಕಿತ್ತು ಆದರೆ 2800 ಟನ್ ಪೂರೈಕೆ ಆಗಿದ್ದು ಹೆಚ್ಚುವರಿಯಾಗಿ 50 ಟನ್ ಪೂರೈಕೆಯಾಗಿದೆ. ಒಂದು ಮೂಟೆಗೆ 1500ರೂಗಳಿದ್ದು ಸರ್ಕಾರ 1200 ರೂಗಳ ಸಬ್ಸಿಡಿ ನೀಡಿದ್ದು, ರೈತರು 300ರೂಗಳು ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಕೋಟ್ 1ತಾಲೂಕಿನಲ್ಲಿ ಯೂರಿಯಾದ ಅಭಾವ ಇರುವುದಿಲ್ಲ. ರೈತರು ಏಕಕಾಲದಲ್ಲಿ ಯೂರಿಯಾ ಬೇಡಿಕೆ ಬಂದಿರುವುದರಿಂದ ಸ್ಪಲ್ಪ ಸಮಸ್ಯೆಯಾಗಿದೆ. ಈ ವರ್ಷ ಮಳೆ ಹೆಚ್ಚು ಆಗಿರುವುದಿಂದ ರೈತರು ಹೆಚ್ಚು ಬಳಕೆ ಮಾಡಿದ್ದಾರೆ. ಇನ್ನೂ 300 ರಿಂದ 400 ಟನ್ ಯೂರಿಯಾ ಅವಶ್ಯಕತೆಯಿದೆ ಮೂರ್ನಾಲ್ಕು ದಿನಗಳಲ್ಲಿ ಯೂರಿಯಾ ಪೂರೈಕೆಯಾಗಲಿದೆ. ಸಿದ್ದಲಿಂಗಯ್ಯ, ಕೃಷಿ ಸಹಾಯಕ ಅಧಿಕಾರಿ, ನೆಲಮಂಗಲಕೋಟ್ 2ಮಳೆ ಬೀಳುತ್ತಿರುವುದರಿಂದ ಬೆಳೆಗಳಿಗೆ ಯೂರಿಯಾದ ಅವಶ್ಯಕತೆ ಹೆಚ್ಚಾಗಿದೆ. ಆದರೆ ತಾಲೂಕಿನಲ್ಲಿ ರಸಗೊಬ್ಬರದ ಕೊರತೆಯಿದ್ದು, ಮುಂಜಾನೆಯಿಂದಲೂ ಅಂಗಡಿಗಳ ಮುಂದೆ ನಿಂತರೂ ಯೂರಿಯಾ ಸಿಗುತ್ತಿಲ್ಲ. ಅಧಿಕಾರಿಗಳು ಸಮರ್ಪಕವಾಗಿ ಯೂರಿಯಾ ಪೂರೈಕೆ ಮಾಡಬೇಕು.ಮಂಜಣ್ಣ, ರೈತ, ಐಸಾಮಿಪಾಳ್ಯಪೋಟೋ 13 * 14 : ಕಂಬಾಳು ವಿಎಸ್ ಎಸ್ ಎನ್ ಸಹಕಾರ ಸಂಘದ ಮುಂದೆ ಯೂರಿಯಾಗಾಗಿ ರೈತರು ಸಾಲಾಗಿ ನಿಂತಿರುವುದು