ಸಿಎಂ ವಿರುದ್ಧ ಘೋಷಣೆ ಕೂಗಿದ ರೈತರು

| Published : Aug 06 2024, 12:43 AM IST

ಸಾರಾಂಶ

ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರೈತರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಸೋಮವಾರ ನೇಗಿಲ ಯೋಗಿ ಸುರಕ್ಷಾ ರೈತ ಸಂಘ, ಜೈ ಜವಾನ್ ಕರ್ನಾಟಕ ರಾಜ್ಯ ಘಟಕ ಮುಖ್ಯಮಂತ್ರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕ ಹಾಗೂ ದರದಲ್ಲಿ ಮೋಸ ಮಾಡಿ ಹಾಗೂ ಸಮಯಕ್ಕೆ ಸರಿಯಾಗಿ ಹಣ ಪಾವತಿಸದೇ ಶೋಷಣೆ ಮಾಡುತ್ತಿದ್ದಾರೆ. ಲಾಭ ದ್ವಿಗುಣಗೊಳಿಸುವ ಏಕೈಕ ಉದ್ದೇಶದಿಂದ ಖಾಸಗಿ ಮಾರುಕಟ್ಟೆಯನ್ನು ಸ್ಥಾಪನೆ ಮಾಡಿದ್ದಾರೆ ಎಂದು ರೈತರು ಸಿಎಂ ಬಳಿ ಅಳಲು ತೋಡಿಕೊಂಡರು.

ತರಕಾರಿ ಮಾಫಿಯಾ ಕಫಿ ಮುಷ್ಠಿಯಿಂದ ಬಿಡಿಸಲು ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಮೇಲೆ ಸರ್ಕಾರದ ನಿಯಂತ್ರಣ, ಮೇಲ್ವಿಚಾರಣೆ ಮತ್ತು ವ್ಯವಹಾರಗಳ ಪರಿವೀಕ್ಷಣೆ ಇಲ್ಲದೇ ಇರುವುದರಿಂದ ರೈತರಿಗೆ ಭಾರೀ ವಂಚನೆ ಮಾಡಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರೂ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸದೇ, ಯಾವ ಭರವಸೆ ನೀಡದೇ ತೆರಳಿದ ಹಿನ್ನೆಲೆಯಲ್ಲಿ ರೈತರು ಸಿಎಂ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಧರ್ಮರಾಜ ಗೌಡರ ಮತ್ತಿತರರು ಉಪಸ್ಥಿತರಿದ್ದರು.