ಉತ್ತರ ಮಳೆಗೆ ತತ್ತರಿಸಿದ ರೈತರು

| Published : Sep 29 2025, 03:02 AM IST

ಸಾರಾಂಶ

ಸೆ. ೨೬, ೨೭ರಂದು ಬಂದ ಮಳೆಯಿಂದ ಫಸಲ ಬಂದಿರುವುದನ್ನು ತೆಗೆದುಕೊಳ್ಳದೆ ಆಗದೆ ರೈತರಿಗೆ ಮತ್ತೆ ಲಕ್ಷಾಂತರ ಆರ್ಥಿಕ ಹೊಡೆತ ಬಿದ್ದಿದೆ.

ಕನಕಗಿರಿ: ಸೆ. ೨೬ ಹಾಗೂ ೨೭ರಂದು ಸುರಿದ ಮಳೆಗೆ ತಾಲೂಕು ವ್ಯಾಪ್ತಿಯಲ್ಲಿ ಭಿತ್ತನೆ ಮಾಡಲಾಗಿದ್ದ ಹತ್ತಿ, ಮೆಕ್ಕಜೋಳ, ತೊಗರಿ ಮತ್ತು ಸಜ್ಜೆ ಬೆಳೆ ಹಾಳಾಗಿದ್ದು, ರೈತರು ತತ್ತರಿಸಿ ಹೋಗಿದ್ದಾರೆ.

ಹೌದು, ತಾಲೂಕಿನಲ್ಲಿ ಯಥೇಚ್ಛವಾಗಿ ಹತ್ತಿ ಮತ್ತು ತೊಗರಿ ಬಿತ್ತನೆ ಮಾಡಲಾಗಿದೆ. ಇದೀಗ ಬಂದಿರುವ ಹತ್ತಿ ಫಸಲು ಕೈಗೆ ಸಿಗದಂತಾಗಿದೆ. ಸೆ. ೨೬, ೨೭ರಂದು ಬಂದ ಮಳೆಯಿಂದ ಫಸಲ ಬಂದಿರುವುದನ್ನು ತೆಗೆದುಕೊಳ್ಳದೆ ಆಗದೆ ರೈತರಿಗೆ ಮತ್ತೆ ಲಕ್ಷಾಂತರ ಆರ್ಥಿಕ ಹೊಡೆತ ಬಿದ್ದಿದೆ.

ಧಾರಾಕಾರ ಮಳೆ ಸರಿದು ತೇವಾಂಶ ಹೆಚ್ಚಾಗಿದ್ದರಿಂದ ಕೈಗೆ ಬಂದಿದ್ದ ಫಸಲು ಬಾಯಿಗೆ ಬಾರದಂತಾಗಿದೆ. ಹತ್ತಿಯಲ್ಲಿ ನೀರು ಸೇರಿಕೊಂಡು ಮೊಳಕೆ ಹೊಡೆಯುತ್ತಿರುವುದು, ಸಜ್ಜೆ ಬೆಳೆಗೆ ಬೂದು ರೋಗ ತುಗಲಿರುವುದು, ತೊಗರಿ ಹಾಗೂ ಮೆಕ್ಕೆಜೋಳದಲ್ಲಿ ನೀರು ನಿಂತು ಕೊಂಡಿದ್ದರಿಂದ ತೇವಾಂಶವೂ ಹೆಚ್ಚಾಗಿದೆ. ಇದರಿಂದ ರೈತ ಲಕ್ಷಾಂತರ ನಷ್ಟ ಅನುಭವಿಸುವಂತಾಗಿದೆ. ಮುಂಗಾರು ಹಂಗಾಮಿನಲ್ಲಿಯೂ ರೈತರಿಗೆ ಹೊಡೆತ ಕೊಟ್ಟಂತೆ ಹಿಂಗಾರು ಹಂಗಾಮಿನಲ್ಲಿಯೂ ಮಳೆಯಿಂದ ತೀವ್ರ ಪ್ರಮಾಣದಲ್ಲಿ ಹಾನಿಯಾಗಿರುವುದು ಕಂಡು ಬಂದಿದೆ.

ಹತ್ತಿ,ಸಜ್ಜೆ, ಮೆಕ್ಕಜೋಳ ಹಾಗೂ ತೊಗರಿ ಬೆಳೆ ತೇವಾಂಶ ಹೆಚ್ಚಾಗಿ ರೈತರಿಗೆ ಲಕ್ಷಾಂತರ ನಷ್ಟವಾಗಿದೆ. ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಹನುಮಂತಪ್ಪ ಬಂಡ್ರಾಳ್ ತಿಳಿಸಿದ್ದಾರೆ.