ಕಡೂರು: ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಗ್ರಾಪಂ ಮಟ್ಟದಲ್ಲಿಯೇ ಪರಿಹಾರ ಕಲ್ಪಿಸಲು ಸಾಧ್ಯವಿರುವ ಕೆಲಸಗಳನ್ನು ಕೂಡಲೇ ಮಾಡಬೇಕು. ವಿನಾಕಾರಣ ಕಚೇರಿಗಳಿಗೆ ರೈತರ ಅಲೆದಾಟ ಸಹಿಸಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕಡೂರು: ರೈತರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಗ್ರಾಪಂ ಮಟ್ಟದಲ್ಲಿಯೇ ಪರಿಹಾರ ಕಲ್ಪಿಸಲು ಸಾಧ್ಯವಿರುವ ಕೆಲಸಗಳನ್ನು ಕೂಡಲೇ ಮಾಡಬೇಕು. ವಿನಾಕಾರಣ ಕಚೇರಿಗಳಿಗೆ ರೈತರ ಅಲೆದಾಟ ಸಹಿಸಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಯಗಟಿ ಹೋಬಳಿ ಹೋಚಿಹಳ್ಳಿಯಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರು ಸಲ್ಲಿಸಿದ ಮನವಿಗಳಲ್ಲಿ ಪ್ರಮುಖವಾಗಿ ರೈತರ ಸಾಗುವಳಿ ಸಮಸ್ಯೆ, ಇ-ಸ್ವತ್ತು, ಭೂಮಿ ದುರಸ್ತಿ ಹಾಗೂ ಸಾಗುವಳಿ ಮಂಜೂರಾತಿ ವಿಚಾರ ಪ್ರಸ್ತಾಪಗೊಂಡವು. ಸರ್ವೆ ನಂ.53ರಲ್ಲಿ ರೈತರು ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಮಂಜೂರಾತಿ ದೊರೆತಿಲ್ಲ. 24 ಎಕರೆ ಭೂಮಿಯಲ್ಲಿ 13 ಮಂದಿ ಸಾಗುವಳಿ ಮಾಡುತ್ತಿದ್ದರೂ ಭೂಮಿ ದುರಸ್ತಿ ಮಾಡಿ ಕೊಟ್ಟಿಲ್ಲ. ಸರ್ವೆ ನಂ.60ರ ರೈತರಿಗೆ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ತಹಸೀಲ್ದಾರ್ ಪೂರ್ಣಿಮಾ, ಗೋಮಾಳ ಹೊರತುಪಡಿಸಿ ಇತರೆ ಜಮೀನುಗಳಿಗೆ ನಿಯಮಾ ನುಸಾರ ಸಾಗುವಳಿ ಮಂಜೂರಿಗೆ ಅವಕಾಶವಿದೆ. ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಸಂಜೆ ನಂತರ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಮನವಿಗೆ ಸ್ಪಂದಿಸಿದ ಶಾಸಕ, ಸಾರಿಗೆ ಸಚಿವ ಭೈರತಿ ಸುರೇಶ್ ಅವರಿಗೆ ತಾಲೂಕಿಗೆ 20 ಹೆಚ್ಚುವರಿ ಬಸ್ಗಳನ್ನು ಒದಗಿಸು ವಂತೆ ಮನವಿ ಮಾಡಲಾಗಿದೆ. ಗ್ರಾಮೀಣ ಭಾಗದ ಅಗತ್ಯವಿರುವ ಪ್ರದೇಶಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಹೋಚಿಹಳ್ಳಿ ಸಾರ್ವಜನಿಕ ಆಸ್ಪತ್ರೆ ಐದು ಎಕರೆ ಜಾಗ ಒತ್ತುವರಿಯಾಗದಂತೆ ವಿಬಿಜಿ ರಾಮ್ಜಿ ಯೋಜನೆಯಡಿ ಅನುದಾನ ಮೀಸಲಿಟ್ಟು ಕಾಂಪೌಂಡ್ ನಿರ್ಮಿಸಲು ಸೂಚಿಸಲಾಗಿದೆ. ನಿವೇಶನರಹಿತರಿಗೆ ವಸತಿ ಕಲ್ಪಿಸಲು ಫಲಾನುಭವಿಗಳ ಪಟ್ಟಿ ಸಿದ್ಧ ಪಡಿಸಲಾಗುತ್ತಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಮೆಸ್ಕಾಂ ಅಕ್ರಮ-ಸಕ್ರಮ ಯೋಜನೆ ಸಮಸ್ಯೆ ಸಿಎಲ್ಪಿ ಸಭೆಗಳಲ್ಲಿಯೂ ಪ್ರಸ್ತಾಪಿಸಲಾಗಿದೆ. ಟೆಂಡರ್ ಅನು ಮೋದನೆ ವಿಳಂಬದಿಂದ ಸಮಸ್ಯೆಯಾಗಿದ್ದು, ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು ಎಂದರು. ಎ.ಕೆ. ಕಾಲೋನಿಗೆ ಹೈಮಾಸ್ಟ್ ದೀಪ ಅಳವಡಿಕೆ, 15 ನಿವೇಶನರಹಿತರಿಗೆ ನಿವೇಶನ ವಿತರಣೆ ಸಮಸ್ಯೆಗಳು ಸಭೆಯಲ್ಲಿ ಪ್ರಸ್ತಾಪಗೊಂಡವು.ಪಂಚಾಯಿತಿ ಆಡಳಿತಾಧಿಕಾರಿ ಲೋಕೇಶಪ್ಪ, ಸಿಡಿಪಿಒ ದೇವರಾಜ್, ಭೋಗಪ್ಪ, ಸಮಾಜ ಕಲ್ಯಾಣಾಧಿಕಾರಿ ಕೆ.ನಟರಾಜ್, ಆಹಾರ ನಿರೀಕ್ಷಕ ಶ್ರೀನಿವಾಸ್, ಎಪಿಎಂಸಿ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
