ರೈತರು ಭೂಮಿ ಉಳಿಸಿಕೊಂಡು ಆರ್ಥಿಕವಾಗಿ ಸಬಲರಾಗಿ

| Published : Aug 10 2025, 01:30 AM IST

ಸಾರಾಂಶ

ರೈತರು ಭೂಮಿ ಉಳಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಂಘಟನೆ ಮುಖ್ಯವಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರೈತರು ಭೂಮಿ ಉಳಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸಂಘಟನೆ ಮುಖ್ಯವಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್‌ ತಿಳಿಸಿದರು.

ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾನೂನುಗಳನ್ನು ಮಾಡುತ್ತಾ ರೈತರೇ ಭೂಮಿಯನ್ನು ಮಾರುವ ದುಸ್ಧಿತಿಗೆ ತರುತ್ತಿದ್ದಾರೆ. ನಾವು ಭೂಮಿಯನ್ನು ಉಳಿಸಿಕೊಳ್ಳಬೇಕಾದರೆ ಸಂಘಟನೆ ಬಹುಮುಖ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇವೆ ಮಾಡುವ ಬದಲು ದೌರ್ಜನ್ಯ ಮಾಡುವ ಮೂಲಕ ನಮ್ಮನ್ನಾಳುತ್ತಿದ್ದಾರೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೇ ನಾವೇ ಸೇವೆ ಮಾಡುತ್ತಿದ್ದೇವೆ. ಇನ್ನು ಮುಂದೆ ಸಂಘಟಿತರಾಗಿ ಕೆಲಸ ಮಾಡದ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಬಾರೋಕೋಲು ಹಾಗೂ ಪೂರಕೆಯನ್ನು ತೆಗೆದುಕೊಂಡು ಕೆಲಸ ಮಾಡಿಸಬೇಕಾಗಿದೆ. ಈ ಕೆಲಸವನ್ನು ಮಾಡಬೇಕಾದರೆ ನಾವು ಮೊದಲು ಪ್ರಾಮಾಣಿಕರಾಗಬೇಕು. ಹಾಗಾಗಿ ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುವ ಮೂಲಕ ಗಾಂಧಿ ಕಂಡಂತೆ ಗ್ರಾಮ ಪಂಚಾಯಿತಿಯನ್ನು ತರೋಣ ಹಾಗೂ ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ನಮ್ದು ಕಂಪನಿಯ ಮೂಲಕ ನಮ್ಮದೇ ಆದ ರೈತ ಸಂತೆಗಳನ್ನು ಕಟ್ಟಿ ರೈತ ಉತ್ಪಾದಕಹಾಗೂ ಮಾರಾಟಗಾರರು ಆಗಿ ಪ್ರೊಫೆಸರ್ ಎಂ. ಡಿ .ನಂಜುಂಡಸ್ವಾಮಿ ಕಂಡಂತಹ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸೋಣ ಎಂದು ತಿಳಿಸಿದರು.

75 ಹೆಚ್ಚು ರೈತರು ಹಾಕಿಶಾಲು ತೊಟ್ಟು ದೀಕ್ಷೆ ಪಡೆದರು. ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯ ಅಂಬಳೆ ಶಿವಕುಮಾರ್, ಮಾಡ್ರಳ್ಳಿ ಪಾಪಣ್ಣ, ಚಾಮರಾಜನಗರ ತಾಲೂಕು ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಬೆಟ್ಟದಪುರ ಬಸವಣ್ಣ, ಮಾದೇವಸ್ವಾಮಿ, ಗುಂಡ್ಲುಪೇಟೆ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ಲೋಕೇಶ ಮತ್ತು ಬೆಟ್ಟದ ಮಾದಳ್ಳಿ ಷಣ್ಮುಖ ಸ್ವಾಮಿ ಮತ್ತು ತೆರಕನಾಂಬಿ ಉಮೇಶ್, ಕೊತ್ತೂರ್ ಗಣೇಶ, ಮಾದಪ್ಪ, ರಾಜು, ಉಪಾಧ್ಯಕ್ಷರಾದ ಹಸಗೂಲಿ ಮಹೇಶ್, ಹೊನ್ನೂರ್ ಮಹದೇವಸ್ವಾಮಿ, ಬೆಟ್ಟದ ಮಾದಳ್ಳಿ ಶ್ರೀನಿವಾಸ್, ಮಾದಲವಾಡಿ ಮಾದಪ್ಪ, ಪ್ರಸಾದ್ ಇದ್ದರು.