ಸಾರಾಂಶ
ಪ್ರತಿಯೊಬ್ಬ ರೈತರು ಹಂತ ಹಂತವಾಗಿ ನೈಸರ್ಗಿಕ ಕೃಷಿಗೆ ಒಂದುಕೊಳ್ಳುವ ಮೂಲಕ ಸ್ವತ ತಾವೇ ಕಡಿಮೆ ಖರ್ಚಿನಲ್ಲಿ ಜೀವಾಂಮೃತ ಹಾಗೂ ಬೀಜಾಮೃತ ದಂತಹ ಸಾವಯವ ಗೊಬ್ಬರಗಳನ್ನು ತಯಾರಿಸಿಕೊಂಡು ನೈಸರ್ಗಿಕವಾಗಿ ಭೂಮಿ ಫಲವತ್ತತೆಯನ್ನ ಹೆಚ್ಚಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರೈತರು ನೈಸರ್ಗಿಕ ಕೃಷಿಗೆ ಒತ್ತು ನೀಡುವ ಮೂಲಕ ಹಂತ ಹಂತವಾಗಿ ರಾಸಾಯನಿಕ ಕೃಷಿಯನ್ನು ಮುಕ್ತಗೊಳಿಸಲು ಮುಂದಾಗಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಹೇಳಿದರು.ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಕಾವೇರಿ ನದಿ ತೀರದ ರೈತರ ಜಮೀನಿನಲ್ಲಿ ಸಂಜೀವಿನ ಗ್ರಾಪಂ ಮಟ್ಟದ ಮಹಿಳಾ ಒಕ್ಕೂಟ ಹಾಗೂ ರೈತ ಸಂಪರ್ಕ ಕೇಂದ್ರ ಅರಕೆರೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಲ್ಲಿ ಮಾಹಿತಿ ನೀಡಿದರು.
ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ಯತ್ತೇಚ್ಚವಾಗಿ ಬಳಸುವ ರಾಸಾಯಿನಿಕ ವಸ್ತುಗಳಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಭೂಮಿ ಸತ್ವ ಕಡಿಮೆಯಾಗುವ ಜೊತೆಗೆ ಆಹಾರ ಕಲಬೆರೆಕೆಯಾಗುತ್ತಿದೆ ಎಂದರು.ಪ್ರತಿಯೊಬ್ಬ ರೈತರು ಹಂತ ಹಂತವಾಗಿ ನೈಸರ್ಗಿಕ ಕೃಷಿಗೆ ಒಂದುಕೊಳ್ಳುವ ಮೂಲಕ ಸ್ವತ ತಾವೇ ಕಡಿಮೆ ಖರ್ಚಿನಲ್ಲಿ ಜೀವಾಂಮೃತ ಹಾಗೂ ಬೀಜಾಮೃತ ದಂತಹ ಸಾವಯವ ಗೊಬ್ಬರಗಳನ್ನು ತಯಾರಿಸಿಕೊಂಡು ನೈಸರ್ಗಿಕವಾಗಿ ಭೂಮಿ ಫಲವತ್ತತೆಯನ್ನ ಹೆಚ್ಚಿಸಿಕೊಳ್ಳಬೇಕು ಎಂದರು.
ನರೇಗಾ ಯೋಜನೆಯಡಿ ಗ್ರಾಪಂನಿಂದ ಬದು ನಿರ್ಮಾಣ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುದಾನ ಸಹ ಸಿಗಲಿದೆ ಅವುಗಳ ಬಳಕೆ ಮಾಡಿಕೊಳ್ಳಬೇಕು. ತಮ್ಮ ತೋಟಗಳಲ್ಲಿ ಸಿಗುವ ತ್ಯಾಜ್ಯಗಳನ್ನು ಗಿಡ ಹಾಗೂ ಮರಗಳ ಪಕ್ಕದಲ್ಲಿ ಬದುಗಳನ್ನ ನಿರ್ಮಿಸಿಕೊಂಡು ಹಾಕುವ ಮೂಲಕ ನೈಸರ್ಗಿಕವಾಗಿ ಗೊಬ್ಬರವಾಗಿ ಮಾರ್ಪಟ್ಟು, ಫಲವತ್ತತೆಗೆ ಸಹಕಾರಿಯಾಗಲಿದೆ ಎಂದರು.ಇದೇ ವೇಳೆ ರೈತರೇ ಜೀವಾಮೃತ ತಯಾರಿಸಿಕೊಳ್ಳುವ ಬಗ್ಗೆ ಸ್ಥಳದಲ್ಲಿ ಪ್ರಾತ್ಯಕ್ಷತೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಒಕ್ಕೂಟದ ಶೃತಿ, ಗ್ರಾಮ ಸಂಪನ್ಮೂಲ ವ್ಯಕ್ತಿ ಉಷಾ, ಭಾಗ್ಯ, ಕೃಷಿ ಸಖಿಯರಾದ ರೂಪ, ಸುಮತಿ, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜು, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗರಾಜು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ರೈತರು ಪಾಲ್ಗೊಂಡಿದ್ದರು.