ರೈತರು ಸಂಘಟನೆ ಮೂಲಕ ಸ್ವಾಭಿಮಾನದ ಜೀವನ ನಡೆಸಲಿ

| Published : Dec 31 2024, 01:02 AM IST

ರೈತರು ಸಂಘಟನೆ ಮೂಲಕ ಸ್ವಾಭಿಮಾನದ ಜೀವನ ನಡೆಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಸಂಘಟಿನಾತ್ಮಕವಾಗಿ ಒಗ್ಗೂಡಬೇಕು.

ಕೂಡ್ಲಿಗಿ: ರೈತರು ಸಂಘಟಿನಾತ್ಮಕವಾಗಿ ಒಗ್ಗೂಡಬೇಕು. ಗ್ರಾಮೀಣದ ರೈತರ ಹಿತಕಾಯಲು ಮತ್ತು ಆರ್ಥಿಕವಾಗಿ ಶಕ್ತಿ ತುಂಬುವ ನಿಟ್ಟಿನಲ್ಲಿ ರೈತರು ಸಂಘಟಿತರಾಗಿ ಒಗ್ಗೂಡಬೇಕೆಂದು ರಾಜ್ಯ ರೈತ ಪಾರ್ಟಿಯ ರಾಜ್ಯಾಧ್ಯಕ್ಷೆ ಯಶೋದಾ ತಿಳಿಸಿದರು.ಅವರು ತಾಲೂಕಿನ ಹಿರೇಕುಂಬಳಗುಂಟೆಯಲ್ಲಿ ರಾಜ್ಯ ರೈತ ಸಂಘ ಗ್ರಾಮ ಘಟಕದ ಉದ್ಘಾಟಿಸಿ ನಂತರ ಮಾತನಾಡಿದರು.

ಕೂಡ್ಲಿಗಿ ತಾಲೂಕಿನಲ್ಲಿರುವ ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ಎಲ್ಲ ರಾಜಕೀಯ ಪಕ್ಷಗಳು ವಿಫಲರಾಗಿದ್ದಾರೆ. ಹೀಗಾಗಿ ರೈತ ಸಂಘಟನೆಯ ಮೂಲಕ ರಾಜಕೀಯ ಪಕ್ಷವಾಗಿ ಕೆಲಸ ಮಾಡಬೇಕೆಂಬ ಮೂಲ ಆಶಯದೊಂದಿಗೆ ಪ್ರತಿ ಗ್ರಾಮದಲ್ಲಿ ರಾಜ್ಯ ರೈತ ಸಂಘದ ಪಾರ್ಟಿಯು ಸಂಘಟನೆ ಮಾಡುತ್ತಿದೆ. ಈ ಉದ್ದೇಶದಿಂದ ಗ್ರಾಮ ಘಟಕಗಳನ್ನು ತೆರೆಯಲಾಗುವುದು ಎಂದರು.

ರೈತ ಹೋರಾಟಗಾರ ಜಿ.ಎಂ. ನಾಗರಾಜಗೌಡ ಮಾತನಾಡಿ, ರಾಜ್ಯ ರೈತ ಸಂಘದ ರೂವಾರಿ ಪ್ರೊ.ಎಂ.ನಂಜುಂಡಸ್ವಾಮಿಯವರು ಡಾ.ಮರುಳಸಿದ್ದಪ್ಪನವರ ಒಡನಾಟದಲ್ಲಿ ಈ ಗ್ರಾಮಕ್ಕೆ ಅಗಮಿಸಿದ್ದನ್ನು ಸ್ಮರಸಿದರು. ಹೀಗಾಗಿ ಗ್ರಾಮದಲ್ಲಿ ಬಹುತೇಕ ರೈತರು ಸಂಘಟನಾತ್ಮಕವಾಗುವ ಕೆಲಸ ಮಾಡುವ ಉತ್ಸುಕರಾಗಿದ್ದಾರೆಂದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಎಚ್.ವಿ. ಸಜ್ಜನ್, ಜಿಲ್ಲಾ ಪದಾಧಿಕಾರಿಗಳಾದ ಕಕ್ಕುಪ್ಪಿ ಎಂ.ಬಸವರಾಜ್, ಗುಂಡುಮುಣುಗು ಗುರುಲಿಂಗಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗ್ಯ.ಎ.ಕೃಷ್ಣ , ಶಾಂತಯ್ಯಸ್ವಾಮಿ, ನಾಗರಾಜ್, ಜಂಬನಗೌಡ, ಶಿವಕುಮಾರ್, ಸಿದ್ದೇಶಿ,ಕಲ್ಲಪ್ಪ ಸೇರಿ ಹಲವು ರೈತ ಮುಖಂಡರು ಇದ್ದರು.

ರಾಜ್ಯ ರೈತ ಪಾರ್ಟಿಯ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕವೂ ನಡೆಯಿತು. ಅಧ್ಯಕ್ಷರಾಗಿ ಎಚ್.ಜಿ.ಮೂಗನಗೌಡ,ಉಪಾಧ್ಯಕ್ಷರಾಗಿ ಟಿ.ಬಸವರಾಜ್, ಕಾರ್ಯದರ್ಶಿಯಾಗಿ ಕೊಟ್ರೇಶ್ ಹಾಗೂ ಸಂಚಾಲಕರನ್ನಾಗಿ ಡಿ.ಪ್ರಕಾಶ್, ಕಮ್ಮಾರ್ ಪ್ರಕಾಶ್, ತಿಪ್ಪೇಸ್ವಾಮಿ ಆಯ್ಕೆ ಮಾಡಲಾಯಿತು.

ಕೂಡ್ಲಿಗಿ ತಾಲೂಕು ಹಿರೇಕುಂಬಳಗುಂಟೆಯಲ್ಲಿ ರಾಜ್ಯ ರೈತ ಸಂಘ ಗ್ರಾಮ ಘಟಕವನ್ನು ರಾಜ್ಯಾಧ್ಯಕ್ಷೆ ಯಶೋದಾ ಉದ್ಘಾಟಿಸಿದರು.