ರೈತರು ದಲ್ಲಾಳಿಗಳಿಗೆ ಮಾರಾಟ ಮಾಡಿ ಮೋಸ ಹೋಗದಿರಿ: ಪಾಟೀಲ್

| Published : Feb 19 2025, 12:48 AM IST

ಸಾರಾಂಶ

Farmers should not be cheated by selling to brokers: Patil

-ತೊಗರಿ ಖರೀದಿ ಕೇಂದ್ರ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ರೆಹಮಾನ್‌ ಪಟೇಲ

----

ಕನ್ನಡಪ್ರಭ ವಾರ್ತೆ ಸುರಪುರ

ತಾಲೂಕಿನ ಕೆಂಭಾವಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪಿಎಸಿಎಸ್ ಕೆಂಭಾವಿ-2 ಸಹಕಾರ ಸಂಘದ ವತಿಯಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಯೋಜನೆ ಅಡಿಯಲ್ಲಿ ತೊಗರಿ ಖರೀದಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್, ರಾಜ್ಯ ಸಹಕಾರಿ ಮಾರಾಟ ಮಹಾಮಂಡಳಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನದೊಂದಿಗೆ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರು ದಲ್ಲಾಳಿಗಳಿಗೆ ಮಾರಾಟ ಮಾಡಿ ಮೋಸ ಹೋಗದಂತೆ ರೈತರಿಗೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಯೋಜನೆಯಡಿ ರೈತರ ತೊಗರಿ ಖರೀದಿಸುತ್ತಿದ್ದು. ತೊಗರಿ ಬೆಳೆದ ರೈತರು ಮುಂಚಿತವಾಗಿ ಬಂದು ನೋಂದಣಿ ಮಾಡಿಸಿಕೊಂಡು ಸರ್ಕಾರ ತೊಗರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವಂತೆ ತಿಳಿಸಿದರು.

ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಡಿ. ಯಾಳಗಿ ಮಾತನಾಡಿ, ರೈತರು ತಮ್ಮ ಹತ್ತಿರದ ಪಿಎಸಿಎಸ್, ಎಫ್‌ಪಿಒ, ಟಿಎಪಿಸಿಎಂಎಸ್ ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಂಡು ಪ್ರತಿ ಎಕರೆಗೆ 4 ಕ್ವಿಂಟಲ್ ನಂತೆ ಗರಿಷ್ಠ 40 ಕ್ವಿಂಟಾಲ್ ವರೆಗೆ ಪ್ರತಿ ರೈತರಿಂದ ನೇರವಾಗಿ ಖರೀದಿಸಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ 7,550 ರು.ಗಳ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 450 ರು. ಪ್ರತಿ ಕ್ವಿಂಟಲ್ ಗೆ ಸೇರಿ ಒಟ್ಟು 8000 ರು. ಪ್ರತಿ ಕ್ವಿಂಟಲ್ ಲೆಕ್ಕದಲ್ಲಿ ತೊಗರಿ ಖರೀದಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತೊಗರಿ ಕೇಂದ್ರವನ್ನು ಪುರಸಭೆ ಅಧ್ಯಕ್ಷ ರೆಹಮಾನ್‌ ಪಟೇಲ ಯಲಗೋಡ ಉದ್ಘಾಟಿಸಿದರು. ಬಾಪುಗೌಡ ಪೊಲೀಸ್ ಪಾಟೀಲ್, ಖಾಜಾ ಪಟೇಲ್‌ ಕಾಚೂರ, ಸೋಮಲಿಂಗಪ್ಪ ದೊಡ್ಡಮನಿ, ದೇವಪ್ಪ ಮ್ಯಾಗೇರಿ, ಶಿವಶಂಕರ ಖಾನಾಪುರ, ರಾಮನಗೌಡ ಗೂಗಲ್, ರಾಘವೇಂದ್ರ ಡಿಗ್ಗಾವಿ, ಚನ್ನಯ್ಯ ಸ್ವಾಮಿ ಹಿರೇಮಠ, ಅರ್ಚಕ ಪ್ರಶಾಂತ್ ಹಿರೇಮಠ, ಹಣಮಂತರಾಯ ಯಲಗೋಡ, ಕುಮಾರ ಆರ್. ಭೋವಿ, ಸಂಘದ ಕಾರ್ಯದರ್ಶಿ ರಂಗಪ್ಪ ವಡ್ಡರ, ಶರಣು ಅರಕೇರಾ, ಮಾರುತಿ ಆರ್. ಭೋವಿ ಸೇರಿದಂತೆ ಇತರರಿದ್ದರು.

----

18ವೈಡಿಆರ್18: ಸುರಪುರ ತಾಲೂಕಿನ ಕೆಂಭಾವಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆದ ಪಿಎಸಿಎಸ್ ಕೆಂಭಾವಿ-2ರ ಸಹಕಾರ ಸಂಘದ ವತಿಯಿಂದ ತೊಗರಿ ಖರೀದಿ ಕೇಂದ್ರವನ್ನು ಪುರಸಭೆ ಅಧ್ಯಕ್ಷ ರೆಹಮಾನ್‌ ಪಟೇಲ ಯಲಗೋಡ ಉದ್ಘಾಟಿಸಿದರು.