ಸಾರಾಂಶ
ಸಾವಯವ ಕೃಷಿಯನ್ನು ಕೃಷಿಗೆ ಆಧಾರವಾಗಿಸಲು ನಾವೆಲ್ಲರೂ ಯೋಚಿಸಿ ಪುನರಾವಲೋಕನ ಮಾಡಬೇಕಾದ ಸಮಯ ಇದು. ಪೋಷಕರು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಮಕ್ಕಳು, ಪಾಲಕರು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಪಡುವಂತೆ ಮಾಡಬೇಕು. ಪ್ರತಿಯೊಬ್ಬ ಮಹಿಳೆಗೂ ಕೃಷಿ ಉದ್ಯಮಿಯಾಗಿ ಬೆಳೆಯಲು ಸಾಕಷ್ಟು ಸಾಮರ್ಥ್ಯವಿದೆ.
ಹುಬ್ಬಳ್ಳಿ: ರೈತರೂ ಸಹ ಉದ್ಯೋಗಿಗಳಂತೆ ಪ್ರತಿ ತಿಂಗಳೂ ಸಂಬಳ ಪಡೆಯುವ ವ್ಯಕ್ತಿಗಳಂತೆ ಮಾಸಿಕ ಆದಾಯ ಗಳಿಸಲು ಅವಕಾಶವಿದೆ ಎಂದು ಕೃಷಿಕ ಮಹಿಳೆ ಕವಿತಾ ಮಿಶ್ರಾ ಹೇಳಿದರು.
ಇಲ್ಲಿಯ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್ ಮತ್ತು ಹುಬ್ಬಳ್ಳಿಯ ಗ್ರೇಟರ್ ಹುಬ್ಬಳ್ಳಿ ಧಾರವಾಡ ಇಂಡಸ್ಟ್ರಿ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ಕೃಷಿ ಶೃಂಗಸಭೆ -2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಾವಯವ ಕೃಷಿಯನ್ನು ಕೃಷಿಗೆ ಆಧಾರವಾಗಿಸಲು ನಾವೆಲ್ಲರೂ ಯೋಚಿಸಿ ಪುನರಾವಲೋಕನ ಮಾಡಬೇಕಾದ ಸಮಯ ಇದು. ಪೋಷಕರು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಮಕ್ಕಳು, ಪಾಲಕರು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಪಡುವಂತೆ ಮಾಡಬೇಕು. ಪ್ರತಿಯೊಬ್ಬ ಮಹಿಳೆಗೂ ಕೃಷಿ ಉದ್ಯಮಿಯಾಗಿ ಬೆಳೆಯಲು ಸಾಕಷ್ಟು ಸಾಮರ್ಥ್ಯವಿದೆ ಎಂದರು.
ವಾಲ್ಮೀ ಸಂಸ್ಥೆಯ ಡಾ. ಬಸವರಾಜ್ ಬಂಡಿವಡ್ಡರ ಮಾತನಾಡಿ, ವಾಲ್ಮೀ ಸಂಸ್ಥೆಯಲ್ಲಿ ರಚಿಸಲಾದ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಚಟುವಟಿಕೆ, ಕಾಲೋಚಿತ ಬೆಳೆಗಳಿಗೆ ಅಳವಡಿಸಿಕೊಳ್ಳಬೇಕಾದ ನೀರಾವರಿ ವ್ಯವಸ್ಥೆ ಬಗ್ಗೆ ತಿಳಿಸಿದರು.ಗ್ರೇಟರ್ ಹು-ಧಾ ಕೈಗಾರಿಕಾ ಸಂಘದ ಅಧ್ಯಕ್ಷ ವಿಜಯ ಭಾರತಿ ಮಾತನಾಡಿ, ದೇಶದ ಬೆಳವಣಿಗೆ ಎರಡು ಘಟಕಗಳನ್ನು ಅವಲಂಭಿಸಿದೆ ಎಂದರು.
ಕೆಇಎಸ್ ಮತ್ತು ಐಇಎಂಎಸ್ ಅಧ್ಯಕ್ಷ ಸಿಎ ಡಾ. ಎನ್.ಎ. ಚರಂತಿಮಠ, ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ವಿಠ್ಠಲ್ ಐ. ಬೆಣಗಿ, ಡಾ. ಅಶ್ವಿನಿ ಬಳ್ಳಾರಿ ಮಾತನಾಡಿದರು.