ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ ಭೋವಿ ಮಾತನಾಡಿ, ರೈತರ ವಿದ್ಯುತ್ ಪಂಪ್‌ಸೆಟ್ ಗಳಿಗೆ ಸರ್ಕಾರ ವಿದ್ಯುತ್ ಮೀಟರ್ ಅಳವಡಿಸಲು ಮುಂದಾಗಿರುವ ಕ್ರಮ ಕೈಬಿಡಬೇಕು. ಕನಕಗಿರಿ, ಲಾಯದುಣಸಿ, ಗೌರಿಪುರ, ಹಿರೇಖೇಡ, ಕೆ.ಕಾಟಾಪೂರ, ರಾಂಪುರ ಸೇರಿದಂತೆ ನಾನಾ ಗ್ರಾಮಗಳಲ್ಲಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಆಗುತ್ತಿಲ್ಲ. ತುಂಗಭದ್ರಾ ಜಲಾಶಯದಿಂದ 30 ಟಿಎಂಸಿ ನೀರು ನದಿಯ ಮೂಲಕ ಹರಿದು ಹೋಗಿದೆ. ಆದರೆ ಈ ನೀರು ಕೆರೆಗಳಿಗೆ ನೀರು ತುಂಬಿಸಿದ್ದರೆ ಒಣಭೂಮಿ ಪ್ರದೇಶದಲ್ಲಿನ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಪ್ರತಿ ವರ್ಷವೂ ಜಲಾಶಯದ ನೀರು ಪೋಲಾಗುತ್ತಿದೆ. ವಿನಃ ಕೆರೆಗಳಿಗೆ ತುಂಬಿಸುವ ಪ್ರಯತ್ನವಾಗಿಲ್ಲ. ಪ್ರಸ್ತುತ ಸರ್ಕಾರದಲ್ಲಿ ಬಾಕಿ ಉಳಿದಿರುವ ಕೆರೆಗಳಿಗೂ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಿಲ್ಲ. ಅದಕ್ಕಾಗಿ ಕ್ಷೇತ್ರದ ಶಾಸಕರು ಸಚಿವರಾಗಿದ್ದು, ಕೆರೆಗೆ ನೀರು ತುಂಬಿಸುವ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.ಮಳೆಗಾಲದಲ್ಲಿಯೂ ಕೆಲ ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಿದೆ. ಇದರಿಂದ ಜಾನುವಾರುಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ಸಚಿವರು ರೈತರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿ ಪ್ರತ್ಯೇಕ ಸಭೆ ಆಯೋಜಿಸಿ, ನ್ಯಾಯ ದೊರಕಿಸಿ ಕೊಡಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಹನುಮಂತಪ್ಪ ಹೊಳೆಯಾಚೆ ಎಚ್ಚರಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ, ಕನಕಗಿರಿ ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ, ರೈತ ಮುಖಂಡರಾದ ಶಿವಕುಮಾರ ಬಡಿಗೇರ, ಮರಿಸ್ವಾಮಿ, ಬಾಲಪ್ಪ ನಾಡಿಗೇರ, ವೆಂಕಟೇಶ್ ಮಲ್ಲಿಗೆವಾಡ, ಜಡಿಯಪ್ಪ ನಾಯಕ, ನರಸಪ್ಪ ಮಡಿವಾಳ, ನಿಂಗಪ್ಪ ಜಾಲಿಹುಡಾ, ಸಣ್ಣ ಶೇಖರಪ್ಪ ಗದ್ದಿ, ಹನುಮಂತಪ್ಪ ಬಂಡ್ರಾಳ, ಹನುಮೇಶ ಪೂಜಾರಿ ಸೇರಿದಂತೆ ಇತರರು ಇದ್ದರು.