ಶ್ರೀ ಅಂತರಗಟ್ಟೆಗೆ ಎತ್ತಿನ ಗಾಡಿಯಲ್ಲಿ ತೆರಳಿ ಹರಕೆ ತೀರಿಸುವ ರೈತರು: ಡಾ.ಟಿ.ಎಂ.ದೇವರಾಜ್

| Published : Feb 06 2025, 11:46 PM IST

ಶ್ರೀ ಅಂತರಗಟ್ಟೆಗೆ ಎತ್ತಿನ ಗಾಡಿಯಲ್ಲಿ ತೆರಳಿ ಹರಕೆ ತೀರಿಸುವ ರೈತರು: ಡಾ.ಟಿ.ಎಂ.ದೇವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪುಣ್ಯಕ್ಷೇತ್ರವಾದ ಶ್ರೀ ಅಂತರಗಟ್ಟೆಮ್ಮ ದೇವಿ ದೇಗುಲಕ್ಕೆ ರೈತಾಪಿ ವರ್ಗ ಹಾಗೂ ಭಕ್ತರು ತಮ್ಮ ಹರಕೆ ತೀರಿಸಲು ಎತ್ತಿನ ಗಾಡಿಯಲ್ಲಿ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿಸುವುದು ವಾಡಿಕೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್ ಹೇಳಿದ್ದಾರೆ

ಶ್ರೀ ಅಂತರಗಟ್ಟೆಮ್ಮ ದೇಗುಲಕ್ಕೆ ತೆರಳಿದ ಶೃಂಗರಿಸಿದ ಎತ್ತಿನ ಗಾಡಿಗೆ ಟಿ.ಎಸ್.ಧರ್ಮರಾಜ್ ಚಾಲನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಪುಣ್ಯಕ್ಷೇತ್ರವಾದ ಶ್ರೀ ಅಂತರಗಟ್ಟೆಮ್ಮ ದೇವಿ ದೇಗುಲಕ್ಕೆ ರೈತಾಪಿ ವರ್ಗ ಹಾಗೂ ಭಕ್ತರು ತಮ್ಮ ಹರಕೆ ತೀರಿಸಲು ಎತ್ತಿನ ಗಾಡಿಯಲ್ಲಿ ತೆರಳಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿಸುವುದು ವಾಡಿಕೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್ ಹೇಳಿದ್ದಾರೆ.ಗುರುವಾರ ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಧರ್ಮರಾಜ್ ಶ್ರೀ ಅಂತರಗಟ್ಟೆಮ್ಮ ದೇವಿ ದೇಗುಲಕ್ಕೆ ತೆರಳುವ ಶೃಂಗರಿಸಿದ ಎತ್ತಿನ ಗಾಡಿಗೆ ಶುಭಾಶಯ ಕೋರುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಈ ಹಬ್ಬವನ್ನು ನಮ್ಮ ಮುತ್ತಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವುದನ್ನು ನಾನು ಕೇಳಿದ್ದೇನೆ. ಚಿಕ್ಕವ ಯಸ್ಸಿನಿಂದ ಈ ಹಬ್ಬದ ಸಂಭ್ರಮ ಸಡಗರವನ್ನು ನೋಡುತ್ತಲೇ ಬಂದಿದ್ದೇನೆ. ರೈತಾಪಿ ಜನತೆ ಒಂದು ವಾರದ ಮುಂಚೆಯಿಂದಲೇ ಗಾಡಿಗೆ ಬಣ್ಣ ಹೊಡೆಯುವುದನ್ನು, ಹೊಸದಾಗಿ ಎತ್ತುಗಳನ್ನು ತಂದು ಆರೈಕೆ ಮಾಡುವು ದನ್ನುಕುತೂಹಲದಿಂದ ನೋಡುತ್ತಿದ್ದೆ. ಎತ್ತು, ಗಾಡಿ ಎರಡೂ ಸಿದ್ಧವಾದಾಗ ಅವಾಗಲೇ ಫೋಟೋ ತೆಗಿಸುವುದನ್ನು ಕೂಡ ನೋಡಿದೇನೆ. ನಮ್ಮ ಮನೆಗಳಲ್ಲಿ ಅಂತಹ ಹಳೆ ಫೋಟೋ ಈಗಲೂ ಇವೆ ಎಂದು ಹಳೆಯ ನೆನಪನ್ನು ಮೆಲುಕುಹಾಕಿದರು. ರೈತಾಪಿವರ್ಗ ತಮ್ಮ ಎತ್ತು, ಹಸುಗಳಿಗೆ ಯಾವುದೇ ರೀತಿ ತೊಂದರೆ ಬರದಂತೆ ತಾಯಿಯನ್ನು ಬೇಡುತ್ತಾ ಪ್ರತಿವರ್ಷ ಎತ್ತಿನಗಾಡಿಯಲ್ಲಿ ಕುಟುಂಬ ಸಮೇತರಾಗಿ ಅಂತರಗಟ್ಟಿಗೆ ತೆರಳಿ ನಾಲ್ಕೈದು ದಿವಸ ಅಲ್ಲೇ ಉಳಿದುಕೊಂಡು ತೇರನ್ನು ಎಳೆದ ನಂತರ ಎಲ್ಲರೂ ಸೇರಿ ಹಣ್ಣಿನ ಫಲಾರ ಮಾಡಿ ಹಂಚಿಕೊಂಡು ಸೇವಿಸಿ ಪ್ರಸಾದ ರೂಪದಲ್ಲಿ ಮನೆಗೆ ತರುತ್ತಿದ್ದರು. ಸುತ್ತಮುತ್ತಲಿನ 3-4 ತಾಲೂಕುಗಳಲ್ಲಿ ತಾಯಿ ಹಬ್ಬ ಅಮ್ಮನ ಹಬ್ಬವೆಂದೇ ಪ್ರಸಿದ್ಧಿಯಾಗಿದ್ದು ರೈತರ ಜೀವನದ ಒಂದು ಸಂಭ್ರಮಾಚರಣೆಯ ಸುಗ್ಗಿ ಹಬ್ಬ ಎಂದು ಹೇಳಿದರು. ಎಲ್ಲಾ ನೆಂಟರಿಷ್ಟರನ್ನು ಕರೆದು ಊಟ ಮಾಡಿ ತಾಯಿ ಪೂಜೆ ಮಾಡುವುದು ಸಂಪ್ರದಾಯ. ಎತ್ತಿನ ಗಾಡಿಯಲ್ಲಿ ತಮ್ಮ ಹರಕೆ ತೀರಿಸಲು ತಾಯಿಯ ಪುಣ್ಯಕ್ಷೇತ್ರ ಶ್ರೀ ಅಂತರಗಟ್ಟೆಗೆ ತೆರಳಿ ಪೂಜೆ ಮಾಡುತ್ತಾರೆ. ನಮ್ಮ ಹಿರಿಯರು ರೂಢಿಸಿಕೊಂಡು ಬಂದ ಸಂಪ್ರದಾಯವನ್ನು ಭಕ್ತಿಯಿಂದ ಆಚರಿಸಿ ಯಾವುದೇ ಎತ್ತುಗಳಿಗೆ ಗಾಯವಾಗದೆ ತಾಯಿಯ ದರ್ಶನ ಮಾಡಿ ಸುಖವಾಗಿ ಹಿಂದಿರುಗಲೆಂದು ಹಾರೈಸಿದರು.ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್, ಪೈಲ್ವಾನ್ ಗಂಗಾಧರ್, ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ಸಮಾಜ ಸೇವಕ ಟಿ.ಜಿ.ಮಂಜುನಾಥ್ ಮತ್ತಿತರರು ಶೃಂಗರಿಸಿದ ಎತ್ತು ಗಾಡಿಗೆ ಶುಭ ಕೋರಿದರು.

6ಕೆಟಿಆರ್.ಕೆ.8ಃ

ತರೀಕೆರೆಯಿಂದ ಅಂತರಗಟ್ಟೆ ಶ್ರೀ ಅಂತರಗಟ್ಟೆಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಧರ್ಮರಾಜ್ ಅವರು ಶೃಂಗರಿಸಿದ ಎತ್ತಿನ ಗಾಡಿಗೆ ಶುಭ ಕೋರಿದ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್, ಪೈಲ್ವಾನ್ ಗಂಗಾಧರ್, ಪುರಸಭೆ ಸದಸ್ಯ ಟಿ.ಜಿ.ಲೋಕೇಶ್, ಸಮಾಜ ಸೇವಕ ಟಿ.ಜಿ.ಮಂಜುನಾಥ್ ಇದ್ದರು.