ಸಾರಾಂಶ
ನರಸಿಂಹರಾಜಪುರಅಡಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಸಾಂಬಾರು ಬೆಳೆಗಳನ್ನು ಬೆಳೆಯುವುದರಿಂದ ರೈತರು ಹೆಚ್ಚು ಲಾಭಗಳಿಸಬಹುದು ಎಂದು ಸಾಂಬಾರು ಮಂಡಳಿ ಅಧಿಕಾರಿ ದೀಪಕ್ ಸಲಹೆ ನೀಡಿದರು.
- ಸೋಷಿಯಲ್ ವೆಲ್ ಫೇರ್ ಸೊಸೈಟಿಯಲ್ಲಿ ಆಧುನಿಕ ಕೃಷಿ ಪದ್ಧತಿ, ಸಾಂಬಾರು ಬೆಳೆ ಬಗ್ಗೆ ಮಾಹಿತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅಡಕೆ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಸಾಂಬಾರು ಬೆಳೆಗಳನ್ನು ಬೆಳೆಯುವುದರಿಂದ ರೈತರು ಹೆಚ್ಚು ಲಾಭಗಳಿಸಬಹುದು ಎಂದು ಸಾಂಬಾರು ಮಂಡಳಿ ಅಧಿಕಾರಿ ದೀಪಕ್ ಸಲಹೆ ನೀಡಿದರು.
ಶನಿವಾರ ಸಿಂಸೆಯ ಸೋಷಿಯಲ್ ವೆಲ್‌ಫೇರ್ ಸೊಸೈಟಿಯಲ್ಲಿ ನಡೆದ ಆಧುನಿಕ ಕೃ಼ಷಿ ಪದ್ಧತಿ ಮತ್ತು ಸಾಂಬಾರ ಬೆಳೆಯ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಅಡಕೆ ಬೆಳೆ ಮಾತ್ರ ನಂಬಿಕೊಂಡು ಕೂರಬಾರದು. ಅಡಕೆ ಗಳಿಗೆ ರೋಗ ಜಾಸ್ತಿಯಾಗುತ್ತಿದೆ. ಧಾರಣೆಯಲ್ಲೂ ಏರಿತವಾಗುತ್ತಿದೆ. ಆದ್ದರಿಂದ ರೈತರು ಒಂದೇ ಬೆಳೆಯನ್ನೇ ಬೆಳೆಯದೆ ಅಡಕೆ ಜೊತೆಗೆ ಸಾಂಬಾರು ಬೆಳೆಗಳಾದ ಏಲಕ್ಕಿ, ಶುಂಠಿ, ಲವಂಗ, ಜಾಯಿಕಾಯಿ, ಚಕ್ಕೆ, ಕಾಳುಮೆಣಸು ಇತ್ಯಾದಿ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.ವೆಲ್‌ಫೇರ್ ಸೊಸೈಟಿ ನಿರ್ದೇಶಕ ರೆ.ಫಾ.ಜೋಬಿಶ್ ಉದ್ಘಾಟಿಸಿ ಮಾತನಾಡಿ, ಎನ್.ಆರ್.ಪುರದ ರೈತ ಕುಟುಂಬದ ಮನೆಗಳಲ್ಲಿರುವ ಸಮಸ್ಯೆಗಳನ್ನು ಅರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾಲ ಬದಲಾದಂತೆ ಕೃಷಿಯಲ್ಲೂ ಹೊಸ ಅವಿಷ್ಕರಣೆ ಆಗುತ್ತಿದೆ. ಕೃಷಿಯಲ್ಲಿ ಹೊಸ, ಹೊಸ ಯಂತ್ರಗಳು ಬರುತ್ತಿದೆ. ಪ್ರತಿಯೊಬ್ಬ ರೈತರೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಮಾತ್ರ ಆರ್ಥಿಕ ಬೆಳವಣಿಗೆ ಸಾದ್ಯ ಎಂದರು.ಸೋಷಿಯಲ್ ವೆಲ್‌ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ಸೋಷಿಯಲ್ ವೆಲ್‌ಫೇರ್ ಸೊಸೈಟಿ ಸುಮಾರು 35 ವರ್ಷಗಳಿಂದ ಗ್ರಾಮೀಣ ಭಾಗದ ರೈತರಿಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಸರ್ವತೋ ಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಜೊತೆಗೆ ಈ ದಿನ ರೈತರಿಗೆ ಸೋಲಾರ್ ಅಳವಡಿಕೆ ನೂತನ ಕಾರ್ಯಕ್ರಮದ ಮಾಹಿತಿ ನೀಡುತ್ತಿದ್ದೇವೆ ಎಂದರು.ನೆದರ್‌ಲ್ಯಾಂಡ್ ದೇಶದ ರೋಬರ್ಟ್ ಮಾಹಿತಿ ನೀಡಿ, ಕೃಷಿ ಮಾಡುವ ರೈತರು ತಮ್ಮ ತೋಟಗಳಿಗೆ ಸೋಲಾರ್ ಬೇಲಿ ಆಳವಡಿಕೆ ಮಾಡಿದರೆ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬಹುದು. ಸೋಲಾರ್ ಪಂಪ್ ಮೂಲಕ ಸ್ಪಿಂಕ್ಲರ್, ಹನಿ ನೀರಾವರಿ ಪದ್ಧತಿ ಮಾಡಿಕೊಳ್ಳಬಹುದು. ಸಾವಯವ ಗೊಬ್ಬರ ಬಳಸಿದರೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ವೈಜ್ಞಾನಿಕ ಪದ್ಧತಿಯಿಂದ ತರಕಾರಿ ಬೆಳೆದರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಕಾರ್ಯಕ್ರಮದಲ್ಲಿ ಸೋಷಿಯಲ್ ಪೆಲ್ ಫೇರ್ ಸೊಸೈಟಿ ಸಿಬ್ಬಂದಿ ಪ್ರಿನ್ಸಿ, ಸಿನಿ ಜೋರ್ಜ್, ಅಶ್ವಿನಿ, ಉಷಾ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))