ಈರುಳ್ಳಿ ಬೆಳೆಗೆ ಬೆಂಬಲಗೆ ಒತ್ತಾಯಿಸಿ ರೈತರಿಂದ ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ!

| Published : Oct 15 2025, 02:07 AM IST

ಈರುಳ್ಳಿ ಬೆಳೆಗೆ ಬೆಂಬಲಗೆ ಒತ್ತಾಯಿಸಿ ರೈತರಿಂದ ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಕರ್ನಾಟಕ ಆಗಿದ್ದು, ಕೂಡಲೇ ಉತ್ತಮ ಬೆಲೆ ನಿಗದಿಪಡಿಸಿ ರೈತರನ್ನು ಉಳಿಸಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಉತ್ತಂಗಿ ಒತ್ತಾಯಿಸಿದ್ದಾರೆ.

ಹೊಸಪೇಟೆ: ಈರುಳ್ಳಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಿ ರೈತರನ್ನು ಉಳಿಸಬೇಕು ಎಂದು ಆಗ್ರಹಿಸಿ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್‌ ಅವರು ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಮನವಿ ಪತ್ರ ಬರೆದಿದ್ದಾರೆ.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಪ್ಪ ಅವರ ಮೂಲಕ ಮಂಗಳವಾರ ಪ್ರಧಾನಮಂತ್ರಿ ಮೋದಿಗೆ ಅವರಿಗೆ ರಕ್ತದಲ್ಲಿ ಬರೆದಿರುವ ಮನವಿ ಪತ್ರವನ್ನು ರವಾನಿಸಿದರು.ಈರುಳ್ಳಿ ಬೆಳೆಗೆ ಸೂಕ್ತ ಬೆಲೆ ನಿಗದಿಸಿ ಪಿಡಿಪಿಎಸ್ ಯೋಜನೆಯ ಮೂಲಕ ಬೆಲೆ ಕೊರತೆ ಪಾವತಿ ಮೊತ್ತ ನೀಡಬೇಕು. ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ತೆರೆಯಬೇಕು. ಈರುಳ್ಳಿ ಬೆಳೆಯ ಬೆಲೆ ಕುಸಿದು ಈರುಳ್ಳಿ ಬೆಳೆದ ರೈತರು ಸಾಲಗಾರರಾಗುತ್ತಿದ್ದಾರೆ. ಬೆಳೆಗೆ ಖರ್ಚು ಮಾಡಿದ ಹಣವೂ ವಾಪಸ್ ಬಾರದೆ ರಾಜ್ಯದಲ್ಲಿ ಈರುಳ್ಳಿ ಬೆಳೆಗಾರರ ಕುಟುಂಬಗಳು ಬೀದಿಗೆ ಬಂದಿವೆ.

ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ ಕರ್ನಾಟಕ ಆಗಿದ್ದು, ಕೂಡಲೇ ಉತ್ತಮ ಬೆಲೆ ನಿಗದಿಪಡಿಸಿ ರೈತರನ್ನು ಉಳಿಸಬೇಕು ಎಂದು ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್.ಎಂ. ಸಿದ್ದೇಶ್ ಉತ್ತಂಗಿ ಒತ್ತಾಯಿಸಿದ್ದಾರೆ.ಈರುಳ್ಳಿ ಬೆಳೆದ ರೈತರ ಕಣ್ಣಿನಲ್ಲಿ ರಕ್ತ ತರಿಸದೆ ಕೂಡಲೇ ಉತ್ತಮ ಬೆಲೆ ನೀಡಿ ರೈತರ ಪ್ರಾಣಿಹಾನಿ ನಿಲ್ಲಿಸಬೇಕು. ಒಂದು ತಿಂಗಳಲ್ಲಿ ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ನವೆಂಬರ್ 9ರಂದು ಕೂಡ್ಲಿಗಿಯಲ್ಲಿ ನಡೆಯಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಾವೇಶದಲ್ಲಿ ಕುಟುಂಬ ಸಮೇತ ಟ್ರ‍್ಯಾಕ್ಟರ್‌ನಲ್ಲಿ ತೆರಳಿ ಹೋರಾಟ ಮಾಡಿ ನಮ್ಮ ಬೇಡಿಕೆಗೆ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ರೈತರಾದ ಮೈನಳ್ಳಿ ಕೊಟ್ರೇಶಪ್ಪ, ಸೋಮಪ್ಪ ಉಲವತ್ತಿ ಇದ್ದರು.