ಕುಂಬಳೂರಿನ ಬಸವ ಗುರುಕುಲದಲ್ಲಿ ಫಸಲ್ ಬಿಮಾ ಯೋಜನೆ ಜಾಗೃತಿ ಜಾಥಾ

| Published : Jul 08 2024, 12:40 AM IST

ಕುಂಬಳೂರಿನ ಬಸವ ಗುರುಕುಲದಲ್ಲಿ ಫಸಲ್ ಬಿಮಾ ಯೋಜನೆ ಜಾಗೃತಿ ಜಾಥಾ
Share this Article
  • FB
  • TW
  • Linkdin
  • Email

ಸಾರಾಂಶ

ಮಲೇಬೆನ್ನೂರು ಸಮೀಪದ ಕುಂಬಳೂರಿನ ಬಸವ ಗುರುಕುಲದಲ್ಲಿ ಶನಿವಾರ ತೋಟಗಾರಿಕಾ ಇಲಾಖೆ ಮತ್ತು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ವಿಮಾ ಕಂಪನಿ ಸಹಯೋಗದಲ್ಲಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಕುರಿತ ಜಾಗೃತಿ ಕಾರ್ಯಕ್ರಮ ಜರುಗಿತು.

ಮಲೇಬೆನ್ನೂರು: ಇಲ್ಲಿಗೆ ಸಮೀಪದ ಕುಂಬಳೂರಿನ ಬಸವ ಗುರುಕುಲದಲ್ಲಿ ಶನಿವಾರ ತೋಟಗಾರಿಕಾ ಇಲಾಖೆ ಮತ್ತು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ವಿಮಾ ಕಂಪನಿ ಸಹಯೋಗದಲ್ಲಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಕುರಿತ ಜಾಗೃತಿ ಕಾರ್ಯಕ್ರಮ ಜರುಗಿತು.

ಕಂಪನಿ ಜಿಲ್ಲಾ ನಿರ್ವಹಣಾಧಿಕಾರಿ ಶಶಿಕಿರಣ್, ಮಾತನಾಡಿ ಜುಲೈ ಮಾಹೆಯಲ್ಲಿ ಭಾರತದಾದ್ಯಂತ ಜು.1ರಿಂದ 7ರವರೆಗೆ ಬೆಳೆ ವಿಮಾ ಸಪ್ತಾಹ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ರೈತರಿಗೆ ವಿಮೆ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ಈ ಸಪ್ತಾಹ ಹಮ್ಮಿಕೊಂಡಿದ್ದೇವೆ. 1 ಎಕರೆ ಅಡಕೆ ಬೆಳೆಗೆ ₹2560 ಮತ್ತು ಹೆಕ್ಟೆರ್‌ಗೆ ₹6400 ವಿಮಾ ಹಣವನ್ನು ವಿಮಾ ಕಚೇರಿ, ಸಿಎಸ್‌ಸಿ ಕೇಂದ್ರ ಅಥವಾ ಸಮೀಪದ ಬ್ಯಾಂಕ್‌ಗಳ ಮೂಲಕ ಜಮಾ ಮಾಡಬಹುದು. ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ವೀಳ್ಯದೆಲೆ, ಕಾಳುಮೆಣಸು, ದಾಳಿಂಬೆ ಮತ್ತು ಮಾವು ಬೆಳೆಗಳಿಗೆ ಮಾತ್ರ ಬೆಳೆ ವಿಮೆ ಅನ್ವಯವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೂರಾರು ಮಕ್ಕಳಿಗೆ ಬೆಳೆ ಮತ್ತು ವಿಮೆ ಬಗ್ಗೆ ಪ್ರಬಂಧ, ರಸಪ್ರಶ್ನೆ, ರಂಗೋಲಿ, ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ, ಬಹುಮಾನ ವಿತರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕರಪತ್ರ ಹಿಡಿದು ಮೆರವವಣಿಗೆ ನಡೆಸಲಾಯಿತು.

ಕಂಪನಿಯ ಜಿಲ್ಲಾ ವ್ಯವಸ್ಥಾಪಕ ರಾಜೇಶ್, ಸಾಮಾನ್ಯ ಸೇವಾ ಕೇಂದ್ರದ ಜಗದೀಶ್, ರೈತರಾದ ಡಿ. ಆನಂದ್, ಹನುಮಂತಪ್ಪ, ಕುಮಾರ್, ಬೋಧಕ ವರ್ಗ, ವಿದ್ಯಾರ್ಥಿಗಳು, ಹಾಗೂ ರೈತರು ಭಾಗವಹಿಸಿದ್ದರು.

- - - -ಫೋಟೋ:

ತೋಟಗಾರಿಕಾ ಇಲಾಖೆ ಮತ್ತು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ವಿಮಾ ಕಂಪನಿ ಸಹಯೋಗವು ರೈತರು ಹಾಗೂ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಕುರಿತು ಜಾಗೃತಿ ಜಾಥಾ ನಡೆಸಿತು.