ಸಾರಾಂಶ
ಪಟ್ಟದ ಬೊಂಬೆಗಳು, ಅರಮನೆಯ ಜಂಬೂಸವಾರಿ, ರಾಧಾಕೃಷ್ಣ, ವಿವಿಧ ಭಂಗಿಯ ನಾಟ್ಯ ಗಣಪತಿ, ಮೋಹಿನಿ ಅಲಂಕಾರ, ತಾಯಿ ಶಾರದೆ, ಸಂಗೀತ ವಾದ್ಯಗಳು, ಈಶ್ವರ , ರಾಜರಾಜೇಶ್ವರಿ, ಬಾಲ ಮುರುಗ, ಸಾಲಂಕೃತ ಗೌರಿ , ಮೀರಾಬಾಯಿ, ನರ್ತಕಿಯರ ನೃತ್ಯ ಭಂಗಿಗಳ ಚಿತ್ರಗಳು ಆಕರ್ಷಕ ಉದ್ಯಾನವನ, ಇತ್ಯಾದಿ ಬೊಂಬೆಗಳು ಮನಸೆಳೆಯುತ್ತಿವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಶರನ್ನವರಾತ್ರಿಯ ಅಂಗವಾಗಿ ಗಾಂಧಿ ನಗರದ ತಾಂಡವೇಶ್ವರ ಸಂಗೀತ ಶಾಲೆಯಲ್ಲಿ ದಸರಾ ಅಕರ್ಷಕ ಬೊಂಬೆ ಪ್ರದರ್ಶನ ನಡೆಯಿತು.ಸಂಗೀತ ಶಿಕ್ಷಕಿ ಎಚ್.ಟಿ.ವಿಜಯಕುಮಾರಿ ಮಾತನಾಡಿ, ಬೊಂಬೆ ಪ್ರದರ್ಶನದ ವೇಳೆ ಗಂಗಾ ಸಮಾರಾಧನೆ ಪೂಜಾ, ಅಭಿಷೇಕ ಹಾಗೂ ನವ ಮಕ್ಕಳಿಗೆ (ನವ ದುರ್ಗೆಯರಿಗೆ ) ಫಲ ತಾಂಬೂಲ ನೀಡಿ ಗೌರವಿಸುವ ಸಂಪ್ರದಾಯವನ್ನು ಕಳೆದ 25 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಪಟ್ಟದ ಬೊಂಬೆಗಳು, ಅರಮನೆಯ ಜಂಬೂಸವಾರಿ, ರಾಧಾಕೃಷ್ಣ, ವಿವಿಧ ಭಂಗಿಯ ನಾಟ್ಯ ಗಣಪತಿ, ಮೋಹಿನಿ ಅಲಂಕಾರ, ತಾಯಿ ಶಾರದೆ, ಸಂಗೀತ ವಾದ್ಯಗಳು, ಈಶ್ವರ , ರಾಜರಾಜೇಶ್ವರಿ, ಬಾಲ ಮುರುಗ, ಸಾಲಂಕೃತ ಗೌರಿ , ಮೀರಾಬಾಯಿ, ನರ್ತಕಿಯರ ನೃತ್ಯ ಭಂಗಿಗಳ ಚಿತ್ರಗಳು ಆಕರ್ಷಕ ಉದ್ಯಾನವನ, ಇತ್ಯಾದಿ ಬೊಂಬೆಗಳು ಮನಸೆಳೆಯುತ್ತಿವೆ.ಜನಮನಸೂರೆಗೊಂಡ ಕಿಕ್ಕೇರಿ ಗೀತಗಾಯನ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣವಿಶ್ವ ವಿಖ್ಯಾತ ದಸರಾ ಸಂದರ್ಭದಲ್ಲಿ ಕೃಷ್ಣ ರಾಜಸಾಗರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಮತ್ತು ಸಂಗೀತ ನಿರ್ದೇಶಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ತಂಡದ ಕನ್ನಡ ಡಿಂಡಿಮ ಕಾರ್ಯಕ್ರಮ ಜನ ಮನಸೂರೆಗೊಂಡಿತು. ಉಳುವಾ ಯೋಗಿಯ ನೋಡಲ್ಲಿ ಗೀತೆಯೊಂದಿಗೆ ಪ್ರಾರಂಭ ಮಾಡಿ ಇಡೀ ಕಾರ್ಯಕ್ರಮವನ್ನು ರೈತರಿಗೇ ಅರ್ಪಿಸಲಾಯಿತು. ಕಿಕ್ಕೇರಿ ಕೃಷ್ಣಮೂರ್ತಿ ಅವರ ಸಿರಿಕಂಠದಲ್ಲಿ ರಾಷ್ಟ್ರಕವಿ ಕುವೆಂಪುರವರ ಆನಂದಮಯ ಈ ಜಗಹೃದಯ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಭಾರತಾಂಬೆಯೇ ನಮಗಿಂದು ಪೂಜಿಸುವ ಬಾರಾ ಹಾಗೂ ಮಂಗಳಾರವಿ ಅವರ ಧ್ವನಿಯಲ್ಲಿ ಬೇಂದ್ರೆಯವರ ಗಮ ಗಮಾಡಿಸ್ತಾವ ಮಲ್ಲಿಗಿ, ಮಿಗಿಲಮಾರಿಗೆ ರಾಗರತಿಯ, ಮಧು ಮನೋಹರ್ ಅವರು ಹಾಡಿದ ಬಾ ಒಲವೇ ಹಾಗೂ ಈ ಬಾನು ಈ ಚುಕ್ಕಿ ಮತ್ತು ಪ್ರವೀಣ್ ಪ್ರದೀಪ್ ಅವರು ಹಾಡಿದ ಪುತಿನ ಅವರ ಹೆಸರೆ ಇಲ್ಲದವರು ಹಾಗೂ ಕೆಎಸ್ ನರಸಿಂಹಸ್ವಾಮಿಯವರ ನಾವು ಭಾರತೀಯರು ಮುಂತಾದ ಗೀತೆಗಳು ದಾಸರ ಪದಗಳು ವಚನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.ವಾದ್ಯ ಸಹಕಾರದಲ್ಲಿ ಇಂದುಶೇಖರ್, ರಾಘವೇಂದ್ರ ಪ್ರಸಾದ್, ಕಾರ್ತಿಕ್ ಪಾಂಡವಪುರ, ವಿಲ್ಸನ್, ಭರತ್, ಕೃಷ್ಣ ಮುಂತಾದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಸಹಕರಿಸಿ ಮೆರಗುನೀಡಿದರು.