ಫಾತಿಮಾ ಸ್ಟ್ರೈಕರ್ಸ್ ಚಾಂಪಿಯನ್‌, ಕೆ ಕೆ ಬ್ರದರ್ಸ್ ರನ್ನರ್ಸ್

| Published : Apr 30 2025, 12:34 AM IST

ಫಾತಿಮಾ ಸ್ಟ್ರೈಕರ್ಸ್ ಚಾಂಪಿಯನ್‌, ಕೆ ಕೆ ಬ್ರದರ್ಸ್ ರನ್ನರ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ನಾಪೋಕ್ಲು ಕ್ರಿಕೆಟ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಫಾತಿಮಾ ಸ್ಟ್ರೈಕರ್ಸ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಡೆಕ್ಕನ್ ಯೂಥ್ ಕ್ಲಬ್ ವತಿಯಿಂದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಆಟದ ಮೈದಾನದಲ್ಲಿ ನಡೆದ ನಾಪೋಕ್ಲು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಫಾತಿಮಾ ಸ್ಟ್ರೈಕರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಅಂತಿಮ ಪಂದ್ಯದಲ್ಲಿ ಕೆ.ಕೆ ಬ್ರದರ್ಸ್ ವಿರುದ್ಧ ಫಾತಿಮಾ ಸ್ಟ್ರೈಕರ್ಸ್ ತಂಡ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಕೆ.ಕೆ ಬ್ರದರ್ಸ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮ್ಯಾನ್ ಆಫ್ ದಿ ಮ್ಯಾಚ್ ಆಗಿ ನಾಸಿರ್ ಹೊರಹೊಮ್ಮಿದರು

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಬ್ದುಲ್ ರೆಹಮಾನ್ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಾ ಮನೋಭಾವನೆ ಮುಖ್ಯ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು .

ಸಮಾರಂಭದಲ್ಲಿ ಅತಿಥಿಗಳಾಗಿ ಕೆ.ಎ ಇಸ್ಮಾಯಿಲ್, ಎಂ ಎ ಮನ್ಸೂರ್ ಆಲಿ, ಅಬ್ದುಲ್ ಅಜೀಜ್, ರಶೀದ್ ಪಿ. ಎಂ, ಅಬೂಬಕ್ಕರ್ ಎಂ ಎಂ, ಮಹಮ್ಮದ್ ಅಲಿ ಎಂ ಎಸ್, ಅಹ್ಮದ್ ಸಿ ಎಚ್, ಅರಫತ್ ಪಿ.ಎಂ , ಆಸಿಫ್ ಆಲಿ ಎಂ.ಎ, ಸಂಶು ಕಾರೆಕ್ಕಾಡು ಇನ್ನಿತರರು ಪಾಲ್ಗೊಂಡಿದ್ದರು. ಸಾನಿದ್ ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿದ್ದ ಗಣ್ಯರು ವಿಜೇತ ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.