ಕನ್ನಡಪ್ರಭ ವಾರ್ತೆ ತರೀಕೆರೆ

ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಮಳೆ ವಾಡಿಕೆಗಿಂತ ಅತಿ ಕಡಿಮೆ ಆಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತವಾಗಿದೆ ಎಂದು ತರೀಕೆರೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ಮಾಹಿತಿ ನೀಡಿದ್ದಾರೆ.

ಜೂನ್ 1 ರಿಂದ ಜುಲೈ 17 ರವರೆಗೆ ತಾಲೂಕಿನ ವಾಡಿಕೆ ಮಳೆ 337.0 ಮಿ. ಮೀ. ಇದ್ದು ಕೇವಲ 249.7 ಮಿ. ಮೀ ಮಳೆಯಾಗಿದೆ. ಶೇ. 26 ರಷ್ಟು ಕೊರತೆಯಾಗಿದೆ. ಅತೀ ಹೆಚ್ಚಿನ ಕೊರತೆ ಅಮೃತಾಪುರ ಹೋಬಳಿಯಲ್ಲಿ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ. 478 ) ತಾಲೂಕಿನ ಕೃಷಿ ಬೆಳೆ ಕ್ಷೇತ್ರದಲ್ಲಿ ಇಲ್ಲಿವರೆಗೆ ಸುಮಾರು 1200 ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಕೃಷಿ ಬೆಳೆಗಳ ಆವರಿಸಿದೆ. ಆದರೆ ಈ ವರ್ಷ ಕೇವಲ 310 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಜ್ಜಂಪುರ ತಾಲೂಕಿನಲ್ಲಿ (ಜೂ. 1 ರಿಂದ ಜು. 17 ರವರೆಗೆ) ವಾಡಿಕೆ ಮಳೆ 260.9 ಮಿ.ಮೀ ಇದ್ದರು ಕೇವಲ 137. ಮಿ.ಮೀ ಮೆಳೆ ಬಿದ್ದಿದೆ. ಶೇ. 40 ರಷ್ಟು ಕೊರತೆ ಆದ್ದರಿಂದ ಕಳೆದ ವರ್ಷ ಈ ದವರೆಗೂ ಸುಮಾರು 2900 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಬಿತ್ತನೆಯಾಗಿದೆ. ಆದರೆ ಈ ವರ್ಷ ಕೇವಲ 1600 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ತರೀಕೆರೆ ತಾಲೂಕಿನಲ್ಲಿ 7500 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಗುರಿ ಹೊಂದಿದ್ದು, ಉಳಿದ 7200 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬೆಳೆಯಲು ರೈತರು ಆಸಕ್ತಿ ಹೊಂದಿದ್ದಾರೆ. ಪುಷ್ಯ- ಮೇಘ ಮಳೆಗಳ ಮೇಲೆ ಅವಲಂಬಿತರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅನುಷ್ಟಾನಗೊಳಿಸಲು ಎಸ್. ಬಿ. ಐ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಸೂಪರ್ ಎಲ್ ನಿನೋ ಪ್ರವಾವ ಇರುವು ದರಿಂದ ಮಳೆಗಳಲ್ಲಿ ತುಂಬಾ ಏರು ಪೇರುಗಳಾಗುತ್ತಿದೆ. ಈಗಾಗಲೇ ಮುಸುಕಿನ ಜೋಳ, ಶೇಂಗಾ ಮತ್ತು ರಾಗಿ ಬೆಳೆಗಳು ಬಿತ್ತನೆ ಮಾಡಿದೆ. ಮುಂದೆ ಬಿತ್ತನೆ ಬೆಳಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಲು ಸಾಮಾನ್ಯ ಸೇವಾ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿ ರೈತರು ತಪ್ಪದೇ ನೋಂದಣಿ ಮಾಡಲು ಮನವಿ ಮಾಡಿದ್ದು ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ತಿಳಿಸಿದ್ದಾರೆ.


ಸಣ್ಣ ಬೆಳೆಗಳಿಗೆ ಎಡೆ ಹೊಡೆದು ದಿಂಡ್ಡು ಏರಿಸಬೇಕು. 20-25 ದಿನಗಳ ಅಂತರದ ಬೆಳೆಗಳಿಗೆ ಮಣ್ಣಿನ ತೇವಾಂಶಕ್ಕೆ ತಕ್ಕಂತೆ ಪೋಷಕಾಂಶ ಮಿಶ್ರಣ (19 : 19 : 19 ) & ಲಘು ಪೋಷಕಾಂಶ ದ್ರಾವಣ) 5 ಮಿ. ಮೀ ಪ್ರತಿ ಲೀ. ನೀರಿಗೆ. 30-35 ದಿನ ದಾಟಿದ ಬೆಳೆಗಳಿಗೆ ಪೋಷಕಾಂಶ ಸಿಂಪಡಿಸುವುದು, ಮತ್ತು ಅಗತ್ಯ ಇದ್ದಲ್ಲಿ ವಾತವರಣಕ್ಕೆ ಅನುಗುಣವಾಗಿ ನೀರಿನ ನಿರ್ವಹಣೆ ಮಾಡಬೇಕು.ಅಗತ್ಯಕ್ಕೆನುಸಾರ ಪೀಡೆನಾಶಕ ಸಿಂಪರಣೆ ಮಾಡಬೇಕು, ಅಲ್ಪಾವದಿ ಬೆಳೆಗಳಾದ ಕಡಿಮೆ ಅವಧಿಗೆ ಬರುವ ತಳಿಗಳಾದ ರಾಗಿ, ಬಟಾಣಿ ಮತ್ತು ಅವರೆ ಬೆಳೆಯಲು ತಿಳಿಸಿದರು.

ಅಜ್ಜಂಪುರ ತಾಲೂಕಿನಲ್ಲಿ ಬರಕ್ಕೆ ತುತ್ತಾದ ವಿವಿಧ ತಾಕುಗಳಿಗೆ ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಮತ್ತು

ಉಪ ನಿರ್ದೇಶಕ ಚಂದ್ರಶೇಖರ್, ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.-

21ಕೆಟಿಆರ್.ಕೆ.1ಃ

ಅಜ್ಜಂಪುರ ತಾಲೂಕಿನಲ್ಲಿ ಬರಕ್ಕೆ ತುತ್ತಾದ ವಿವಿಧ ತಾಕುಗಳಿಗೆ ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಮತ್ತು

ಉಪ ನಿರ್ದೇಶಕ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದರು.