ಬಸ್ ಹತ್ತಿ ಕಳ್ಳತನದ ಜಾಗೃತಿ ಮೂಡಿಸಿದ ಮಹಿಳಾ ಪಿಎಸ್‌ಐ

| Published : Oct 07 2024, 01:40 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಜನದಟ್ಟಣೆಯ ಲಾಭ ಪಡೆದು ಕಳ್ಳರು ಕೈಚಳಕ ತೋರಿಸುವ ಹಾಗೂ ಪ್ರಸಾದ ಎಂದು ಸಿಹಿ ತಿನಿಸು ಕೊಟ್ಟು ಪ್ರಜ್ಞೆ ತಪ್ಪಿಸಿ ವಂಚನೆ ಎಸಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಕಾಗವಾಡ ಠಾಣೆ ಪಿಎಸ್‌ಐ ಜಿ.ಜಿ.ಬಿರಾದಾರ ಬಸ್ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಕಳ್ಳತನ ಕುರಿತಂತೆ ಕರಪತ್ರ ಹಂಚಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಗಮನ ಸೆಳೆಯುತ್ತಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಜನದಟ್ಟಣೆಯ ಲಾಭ ಪಡೆದು ಕಳ್ಳರು ಕೈಚಳಕ ತೋರಿಸುವ ಹಾಗೂ ಪ್ರಸಾದ ಎಂದು ಸಿಹಿ ತಿನಿಸು ಕೊಟ್ಟು ಪ್ರಜ್ಞೆ ತಪ್ಪಿಸಿ ವಂಚನೆ ಎಸಗುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಕಾಗವಾಡ ಠಾಣೆ ಪಿಎಸ್‌ಐ ಜಿ.ಜಿ.ಬಿರಾದಾರ ಬಸ್ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಕಳ್ಳತನ ಕುರಿತಂತೆ ಕರಪತ್ರ ಹಂಚಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಗಮನ ಸೆಳೆಯುತ್ತಿದೆ.

ಶನಿವಾರ ಪಟ್ಟಣದ ಬಸ್ ನಿಲ್ದಾಣದ ಮುಖಾಂತರ ಹಾದು ಹೋಗುವ ಎಲ್ಲ ಸರ್ಕಾರಿ ಬಸ್‌ಗಳಿಗೆ ಜಾಗೃತಿ ಕರಪತ್ರ ಅಂಟಿಸಿ, ಪ್ರಯಾಣದ ಸಮಯದಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ನಡೆಯುವ ವಂಚನೆ ಹಾಗೂ ಕಳ್ಳತನದ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ನೀಡಿದರು.

ಬಸ್‌ಗಳಲ್ಲಿ ಪ್ರಯಾಣ ಮಾಡುವಾಗ ಅಪರಿಚಿತ ಪ್ರಯಾಣಿಕ ವ್ಯಕ್ತಿಗಳ ಬಗ್ಗೆ ಜಾಗರೂಕತೆ ವಹಿಸಬೇಕು. ಖದೀಮರು ನಿಮಗೆ ಸಹಾಯ ಮಾಡುವ ನೆಪದಲ್ಲಿ ನಿಮ್ಮ ಗಮನ ಬೇರೆಡೆ ಸೆಳೆದು, ಕಳ್ಳತನ ಮಾಡುವ ಸಂಭವ ಇದ್ದು, ಬಸ್ ಹತ್ತುವಾಗ ಮತ್ತು ಇಳಿಯುವಾಗ ನಿಮ್ಮ ಬ್ಯಾಗ್ ಹಾಗೂ ಮಕ್ಕಳನ್ನು ಯಾರ ಬಳಿಯೂ ನೀಡಬೇಡಿ.

ಬಸ್ ಪ್ರಯಾಣದ ಸಮಯದಲ್ಲಿ ಅನಾವಶ್ಯಕವಾಗಿ ಚಿನ್ನಾಭರಣ ಹಾಗೂ ಹಣ ಇಟ್ಟುಕೊಂಡು, ಪ್ರಯಾಣ ಮಾಡಬೇಡಿ. ಮಹಿಳಾ ಪ್ರಯಾಣಿಕರು ಬೆಲೆ ಬಾಳುವ ಆಭರಣ ಹಾಕಿಕೊಂಡು ಪ್ರಯಾಣಿಸಬೇಡಿ. ಅಪರಿಚಿತ ವ್ಯಕ್ತಿಗಳು ಏನಾದರೂ ತಿನ್ನಲು ಕೊಟ್ಟರೆ ತಿನ್ನಬೇಡಿ. ಅಂತಹ ಸಮಸ್ಯೆ ಕಂಡು ಬಂದಿಲ್ಲ 112 ಪೋಲಿಸ ಸಹಾಯವಾಣಿ ಕರೆ ಮಾಡಿ ಅಥವಾ ಬಸ್ ಡ್ರೈವರ್ ಮತ್ತು ಕಂಡಕ್ಟರ್‌ ಗಮನಕ್ಕೆ ತನ್ನಿ. ನೀವು ಇರುವ ಸ್ಥಳದಲ್ಲಿಯೇ ನಿಮ್ಮ ಸಮಸ್ಯೆಗೆ ಪೊಲೀಸ್‌ ಸಿಬ್ಬಂದಿ ಸ್ಪಂದಿಸುತ್ತಾರೆ ಎಂದು ತಿಳಿಸಿದರು. ಈ ವೇಳೆ ಪೊಲೀಸ್‌ ಸಿಬ್ಬಂದಿಗಳಾದ ಸುರೇಶ ನಂದಿವಾಲೆ, ಸುಭಾಸ ದೇವಋಷಿ ಸೇರಿದಂತೆ ಅನೇಕರುಸಿದ್ದರು.