ಸೋಲಾರ್ ಪಂಪ್ ಗಳ ಅಳವಡಿಕೆಯಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿದೆ ಮತ್ತು ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ, ಮಾರಾಟ ಮಾಡುವ ಮೂಲಕ ಅನ್ನದಾತರು ಇಂದು ಉರ್ಜಾದಾತರಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ನವಲಗುಂದ: ಸೋಲಾರ್ ಪಂಪ್ ಗಳ ಅಳವಡಿಕೆಯಿಂದ ಡೀಸೆಲ್ ಮೇಲಿನ ಅವಲಂಬನೆ ಕಡಿಮೆಯಾಗಿದೆ ಮತ್ತು ಹೆಚ್ಚುವರಿ ವಿದ್ಯುತ್ ಉತ್ಪಾದಿಸಿ, ಮಾರಾಟ ಮಾಡುವ ಮೂಲಕ ಅನ್ನದಾತರು ಇಂದು ಉರ್ಜಾದಾತರಾಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‌ನಲ್ಲಿ ಹೇಳಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಭಾನುವಾರ ತಾಲೂಕಿನ ಮೊರಬ ಗ್ರಾಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಿಸಿ ನಂತರ ಮಾತನಾಡಿದರು.

ದೇಶಾದ್ಯಂತ ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಬದಲಾವಣೆಯ ಪರ್ವವನ್ನು ಸೃಷ್ಟಿಸಿದೆ. ಮನೆಗಳು ಮತ್ತು ಸಮುದಾಯಗಳ ಚಾವಣಿ ಸೌರ ವಿದ್ಯುತ್ ಶಕ್ತಿ ಉತ್ಪಾದನಾ ಕೇಂದ್ರಗಳಾಗಿರುವ ಕುರಿತು ಮನ್ ಕಿ ಬಾತ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂದರು.

ದೇಶದಲ್ಲಿ ಸೌರ ಶಕ್ತಿ ಕ್ರಾಂತಿಯ ಇಂತಹ ಅದೆಷ್ಟೋ ಉದಾಹರಣೆಗಳಿವೆ. ನಮ್ಮ ಕ್ಷೇತ್ರದ ಜನರು ಕೂಡ ಗುಡಿ ಕೈಗಾರಿಕೆ, ಮಹಿಳಾ ಸಬಲೀಕರಣ, ಅಂತರ್ ಜಲ ಮಟ್ಟ ಹೆಚ್ಚಿಸಲು ಮಳೆ ನೀರು ಸಂಗ್ರಹ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರೂ ಈ ಕ್ರಾಂತಿಯ ಭಾಗವಾಗಿ ಮತ್ತು ಇತರರನ್ನೂ ಈ ಕ್ರಾಂತಿಯಲ್ಲಿ ಕೈಜೋಡಿಸುವಂತೆ ಮಾಡಿ ರೈತರ ಸಬಲೀಕರಣಗೊಳಿಸಬೇಕು ಅಂದಾಗ ಮಾತ್ರ ಮೋದಿಜಿಯವರ ಭಾರತದ ಕ್ಲೀನ್ ಎನರ್ಜಿ ಕ್ರಾಂತಿಗೆ ಶಕ್ತಿ ತುಂಬುತ್ತಿದೆ‌ ಎಂದರು.

ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ, ಮಾಜಿ ಶಾಸಕಿ ಸೀಮಾ ಮಸೂತಿ, ಬಸವರಾಜ ಕುಂದಗೋಳಮಠ, ಷಣ್ಮುಖ ಗುರಿಕಾರ, ದೇವರಾಜ ದಾಡಿಭಾವಿ, ಜಯತೀರ್ಥ ಕಟ್ಟಿ, ಚಿದಾನಂದ ಮನ್ಸೂರ, ಮಂಜುನಾಥ ಕಾಲವಾಡ, ಸಿದ್ದನಗೌಡ ಪಾಟೀಲ, ಷಣ್ಮುಖ ಇಂಡಿ, ಯೋಗಪ್ಪ ಧಾರವಾಡ, ಕಲ್ಲಪ್ಪ ಹಣಸಿ ಸೇರಿದಂತೆ ಹಲವರಿದ್ದರು.