ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ಮಾಕವಳ್ಳಿ ಶ್ರೀ ಸುಬ್ಬರಾಯಸ್ವಾಮಿ ನೂತನ ದೇವಸ್ಥಾನದ ಕಳಶಾರೋಹಣ ಮತ್ತು ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಸಂಪ್ರೊಕ್ಷಣೆ ಹಾಗೂ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಿತು.ತಾಲೂಕಿನ ಪುಣ್ಯ ಸ್ಥಳ ಹೇಮಗಿರಿ ಹೇಮಾವತಿ ನದಿಯಲ್ಲಿ ಶ್ರೀ ಬಸವೇಶ್ವರ ಉತ್ಸವ ಮೂರ್ತಿಯನ್ನು ಪವಿತ್ರ ಹೇಮಾವತಿ ನದಿಯಲ್ಲಿ ತೊಳೆದು ಅಲಂಕರಿಸಿದ ಪೂಜಿ ಸಲ್ಲಿಸಿ ಮಕ್ಕಳು ತಮ್ಮ ತಲೆಯ ಮೇಲೆ ಕಲಶ ಒತ್ತು ದೇವರ ಗುಡ್ಡರ ಸುಮಧುರ ಜಾನಪದ ಸದ್ದಿಗೆ ಹೆಜ್ಜೆ ಹಾಕುತ್ತಾ ಗ್ರಾಮದ ಪ್ರವೇಶಿಸಿದರು. ನಂದಿ ಅಂಕುರಾರೋಪಣ ಕಲಶಸ್ಥಾಪನೆಗಳು,ಅಗ್ನಿ ಪ್ರತಿಷ್ಠಾಪನೆ, ಪಂಚಬ್ರಹ್ಮನವಗ್ರಹ ಮೃತ್ಯುಂಜಯ ಸಪ್ತ ಸಭಾದೇವತೆ ಏಕಾದಶರುದ್ರ ಹೋಮ ನಡೆಯಿತು. ಜಾತಿ-ಭೇದ ಮರೆತು ಆಚರಿಸುವ ಮೂಲಕ ಭಾವೈಕ್ಯತೆ ಮೆರೆಯುತ್ತ ಹೇಮಾವತಿ ನದಿಯಿಂದ ಉತ್ಸವ ಮೂರ್ತಿಗಳನ್ನು ತೊಳೆದು ಬರಿಗಾಲಿನಲ್ಲಿ ಉತ್ಸವ ಮೂರ್ತಿ ತರಲಾಯಿತು. ಗ್ರಾಮದ ಹಿರಿಯ ಯಜಮಾನರು, ಯುವ ಮುಖಂಡರು, ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸಿ ಶ್ರೀ ಸುಬ್ಬರಾಯಸ್ವಾಮಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮೆರಗು ತುಂಬಿದರು.
ಉತ್ಸವ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ
ತಾಲೂಕಿನ ಮಾಕವಳ್ಳಿ ಶ್ರೀ ಸುಬ್ಬರಾಯಸ್ವಾಮಿ ನೂತನ ದೇವಸ್ಥಾನದ ಕಳಶಾರೋಹಣ ಮತ್ತು ಶ್ರೀ ಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿ ಸಂಪ್ರೊಕ್ಷಣೆ ಹಾಗೂ ಉತ್ಸವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಿತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.