ಸಾರಾಂಶ
ರೋಣ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ಸಾರ್ವಜನಿಕ ಸ್ಥಳ, ದೇವಸ್ಥಾನ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಭಾನುವಾರ ಸಂಜೆ ಆಯಾ ಗ್ರಾಮ, ಪಟ್ಟಣಗಳ ಬಾವಿ, ಕೆರೆ, ಹೊಂಡಗಳಲ್ಲಿ ಸಕಲ ವಾದ್ಯ ಮೇಳ, ಮೆರವಣಿಗೆಯೊಂದಿಗೆ ಸಡಗರ, ಸಂಭ್ರಮ ಮತ್ತು ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.
ರೋಣ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ಸಾರ್ವಜನಿಕ ಸ್ಥಳ, ದೇವಸ್ಥಾನ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಭಾನುವಾರ ಸಂಜೆ ಆಯಾ ಗ್ರಾಮ, ಪಟ್ಟಣಗಳ ಬಾವಿ, ಕೆರೆ, ಹೊಂಡಗಳಲ್ಲಿ ಸಕಲ ವಾದ್ಯ ಮೇಳ, ಮೆರವಣಿಗೆಯೊಂದಿಗೆ ಸಡಗರ, ಸಂಭ್ರಮ ಮತ್ತು ಭಕ್ತಿಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.
ಪಟ್ಟಣದ ಸಿದ್ಧಾರೂಢ ನಗರ, ಶಿವಾನಂದ ನಗರ, ಜಗ್ಹಲರ ಓಣಿ, ಕಂಬಿಯವರ ಓಣಿ, ಶ್ರೀನಗರ, ಸಾಯಿ ನಗರ, ಕುರಬಗಲ್ಲ ಓಣಿ, ಶಿವಪೇಟಿ ವಿವಿಧ ಬಡಾವಣೆ, ಹೊರಪೇಟಿ ಬಡಾವಣೆ, ಹಕಾರಿ ಓಣಿ, ಈಶ್ವರ ನಗರ, ಬಡಿಗೇರ ಓಣಿ, ಪೊಲೀಸ್ ಠಾಣೆ, ತಳವಾರ ಓಣಿ, ಗಾಂಧಿ ನಗರ, ಸಾಯಿ ನಗರ, ಶ್ರೀಲಕ್ಷ್ಮೀ ನಗರ, ಅಮರೇಶ್ವರ ಬಡಾವಣೆ, ಕಲ್ಯಾಣ ನಗರ, ಲಿಂಗನಗೌಡ್ರ ಓಣಿ, ಸಂತೋಜಿಯವರ ಓಣಿ, ಗೌಡ್ರ ಓಣಿ ಸೇರಿದಂತೆ ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾದ ಸಾರ್ವಜನಿಕ ಹಾಗೂ ಮನೆಗಳಲ್ಲಿನ ಗಣೇಶ ಮೂರ್ತಿಯನ್ನು ಪೂಜಾ ಕೈಂಕರ್ಯ ಗೈದು ಹಾಗೂ ಅದ್ಧೂರಿಯಾಗಿ ಮೆರವಣಿಗೆ ಮೂಲಕ ವಿಸರ್ಜಿಸಿ, ಗಣೇಶ ಹಬ್ಬವನ್ನು ಸಂಭ್ರಮಿಸಲಾಯಿತು.ಪಟ್ಟಣದ ಮುಲ್ಲನಬಾವಿ ವೃತ್ತದಲ್ಲಿರುವ ಸಾರ್ವಜನಿಕ ಬಾವಿಯಲ್ಲಿಯೇ ಗಣೇಶ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಟ್ರ್ಯಾಕ್ಟರ್, ಟಂಟಂ, ಅಟೋ ರೀಕ್ಷಾ, ಚಕ್ಕಡಿ, ಕಾರು ಸೇರಿದಂತೆ ವಿವಿದ ವಾಹನಗಳ ಮೂಲಕ ಗಣೇಶ ಮೂರ್ತಿಯನ್ನು ಮೆರವಣಿಗೆ ಮಾಡುತ್ತಾ ವಿಸರ್ಜಿಸಿದರು. ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯಾವುದೇ ರೀತಿಯ ಗದ್ದಲ, ಗಲಾಟೆಯಾಗದಂತೆ ಸಿಪಿಐ ಎಸ್.ಎಸ್. ಬಿಳಗಿ, ಪಿ.ಎಸ್.ಐ. ಪ್ರಕಾಶ ಬಣಕಾರ ನೇತೃತ್ವದಲ್ಲಿ ಅಗತ್ಯ ಬಂದೋಬಸ್ತ್ ಏರ್ಪಡಿಸಲಾಗಿತ್ತು.