ಇಲ್ಲಿನ ತಳವಾರ ಗಲ್ಲಿಯ ಮೂಲದೇವಸ್ಥಾನದಿಂದ ಶೃಂಗರಿಸಿದ ರಥದಲ್ಲಿ ನಗರದ ಗ್ರಾಮದೇವತೆ ಶ್ರೀ ಗಂಗಾಜಲ ಚೌಡೇಶ್ವರಿದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಪ್ರಾರಂಭಗೊಂಡಿತು. ಶಾಸಕ ಪ್ರಕಾಶ ಕೋಳಿವಾಡ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ರಾಣಿಬೆನ್ನೂರು: ಇಲ್ಲಿನ ತಳವಾರ ಗಲ್ಲಿಯ ಮೂಲದೇವಸ್ಥಾನದಿಂದ ಶೃಂಗರಿಸಿದ ರಥದಲ್ಲಿ ನಗರದ ಗ್ರಾಮದೇವತೆ ಶ್ರೀ ಗಂಗಾಜಲ ಚೌಡೇಶ್ವರಿದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸೋಮವಾರ ರಾತ್ರಿ ಪ್ರಾರಂಭಗೊಂಡಿತು. ಶಾಸಕ ಪ್ರಕಾಶ ಕೋಳಿವಾಡ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಮೆರವಣಿಗೆಯು ದೊಡ್ಡಪೇಟೆ, ಕುಂಬಾರ ಓಣಿ, ಗವಾರದವರ ಓಣಿ, ಗವಳಿ ಓಣಿ, ಕುರುಬಗೇರಿ, ಎಂ.ಜಿ.ರಸ್ತೆ, ಸಂಗಮ ಸರ್ಕಲ್, ಅಶೋಕ ಸರ್ಕಲ್, ಮೇಡ್ಲೇರಿ ರಸ್ತೆ ಮಾರ್ಗವಾಗಿ ಮಂಗಳವಾರ ಬೆಳಗ್ಗೆ ಮೆಡ್ಲೇರಿ ರಸ್ತೆಯಲ್ಲಿರುವ ಗಂಗಾಜಲ ಚೌಡೇಶ್ವರ ದೇವಸ್ಥಾನಕ್ಕೆ ತಲುಪಿತು. ಬಾಜಾ ಭಜಂತ್ರಿ, ನಿಶಾನೆಗಳು, ಬಿರುದಾವಳಿಗಳನ್ನು ಹೊತ್ತ ಭಕ್ತರು, ಡೊಳ್ಳುವಾದ್ಯ, ಜಾಂಜ್‌ಮೇಳ, ವೀರಗಾಸೆ, ವಿವಿಧ ರೀತಿಯ ಗೊಂಬೆಗಳ ಮುಖವಾಡ ಧರಿಸಿದವರು ಮೆರವಣಿಗೆಯ ಆಕರ್ಷಣೆಯಾಗಿದ್ದರು. ಮೆರವಣಿಗೆ ಸಾಗಿಬರುವ ದಾರಿಯುದ್ದಕ್ಕೂ ಮಹಿಳೆಯರು ರಸ್ತೆಗೆ ನೀರು ಹಾಕಿ, ಮನೆಗಳ ಮುಂದೆ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಂಭ್ರಮದಿಂದ ಸ್ವಾಗತಿಸಿದರು. ಜನರು ಎತ್ತರದ ಕಟ್ಟಡಗಳನ್ನು ಏರಿ ದೇವಿಯ ಉತ್ಸವ ಮೂರ್ತಿಯನ್ನು ಕಣ್ತುಂಬಿಕೊಂಡರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಶೇರುಖಾನ್ ಕಾಬೂಲಿ, ಚೋಳಪ್ಪ ಕಸವಾಳ, ಭಾರತಿ ಜಂಬಗಿ, ಬಸವರಾಜ ಹುಚಗೊಂಡರ, ಸಿದ್ದು ಚಿಕ್ಕಬಿದರಿ, ಅನಿಲ ಸಿದ್ದಾಳಿ, ಶಶಿಧರ ಬಸೇನಾಯ್ಕ, ನಾಗರಾಜ ಪವಾರ, ಪ್ರಕಾಶ ಪೂಜಾರ, ಡಾ.ನಾರಾಯಣ ಪವಾರ, ಕೆ.ಶಿವಲಿಂಗಪ್ಪ, ಮಂಜುನಾಥ ಕಾಟಿ, ಮಂಗಳಗೌರಿ ಪೂಜಾರ, ಯಲ್ಲಪ್ಪರೆಡ್ಡಿ ರೆಡ್ಡೇರ, ರೂಪಾ ಚಿನ್ನಿಕಟ್ಟಿ, ರಾಜಶೇಖರ ಸುರಳಿಕೇರಿಮಠ, ಇರ್ಪಾನ್ ದಿಡಗೂರ, ಕೃಷ್ಣಪ್ಲ ಕಂಬಳಿ, ರಾಮಣ್ಣ ನಾಯಕ, ಡಿವೈಎಸ್ ಪಿ ಲೋಕೇಶ್, ಸಿಪಿಐ ವೆಂಕಟರೆಡ್ಡಿ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.