ಲಕ್ಷ್ಮೇಶ್ವರ: ಇತಿಹಾಸ ಪ್ರಸಿದ್ಧ ಪುಲಿಗೆರೆಯ ಸೋಮನಾಥನ ರಥೋತ್ಸವವು ಸಾವಿರಾರು ಭಕ್ತರ ಹರ ಹರ ಮಹಾದೇವ ಎನ್ನುವ ಘೋಷಣೆ ಮೊಳಗಿಸುವ ಮೂಲಕ ಭಾನುವಾರ ಅದ್ಧೂರಿಯಾಗಿ ಜರುಗಿತು.

ಪಟ್ಟಣದ ಸೋಮೇಶ್ವರ ಉತ್ತರ ದ್ವಾರದ ಮೂಲಕ ಸಾಗಿದ ರಥವನ್ನು ಎಳೆದ ಭಕ್ತರು ಸಂಭ್ರಮಿಸಿದರು. ತೇರಿಗೆ ಉತ್ತತ್ತಿ, ಬಾಳೆಹಣ್ಣು, ಮಾವಿನ ಹಣ್ಣು ಸೇರಿದಂತೆ ವಿವಿಧ ಪದಾರ್ಥಗಳನ್ನು ಎಸೆದು ಪುನೀತರಾದರು.

ಸೋಮನಾಥನ ತೇರಿಗೆ ರುದ್ರಾಕ್ಷಿ ಮಾಲೆ, ಸೇವಂತಿ ಮಾಲೆ, ಬಾಳೆದಿಂಡು ಕಟ್ಟಿ ಅಲಂಕಾರ ಮಾಡಲಾಗಿತ್ತು. ಸರಿಯಾಗಿ 6 ಗಂಟೆಗೆ ಪಲ್ಲಕ್ಕಿಯಲ್ಲಿ ಸೋಮನಾಥನ ಉತ್ಸವ ಮೂರ್ತಿ ಹೊತ್ತು ತಂದ ಭಕ್ತರು ತೇರಿನ ಒಳಗಡೆ ಸೋಮನಾಥನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ತೇರನ್ನು ಎಳೆಯಲಾಯಿತು.

ಬೇಸಿಗೆ ಬಿಸಿಲಿಗೆ ಬಳಲಿದ್ದ ಜನತೆಗೆ ಮಧ್ಯಾಹ್ನ ಸುರಿದ ಅಲ್ಪ ಮಳೆಯು ತಂಪೆರೆಯುವ ಮೂಲಕ ತೇರು ಎಳೆಯಲು ಆಗಮಿಸಿದ್ದ ಸಹಸ್ರಾರು ಭಕ್ತರ ಉತ್ಸಾಹ ಹೆಚ್ಚುವಂತೆ ಮಾಡಿತು. ರಕ್ತದಾನದಿಂದ ಉತ್ತಮ ಆರೋಗ್ಯ

ಗದಗ: ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್, ವೈಆರ್‌ಸಿ ಘಟಕಗಳ ಸಹಯೋಗದೊಂದಿಗೆ ಐಎಂಎ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತದಾನ ಶಿಬಿರ ನಡೆಯಿತು.


ಈ ವೇಳೆ ಪ್ರಾ. ಡಾ. ಎ.ಕೆ. ಮಠ ಮಾತನಾಡಿ, ರಕ್ತದಾನ ಉತ್ತಮ. ರಕ್ತದಾನ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ರಕ್ತದಾನದಿಂದ ಹಲವು ಜೀವಗಳು ಉಳಿಯುತ್ತವೆ ಎಂದರು.

ಶಿಬಿರದಲ್ಲಿ ಒಟ್ಟು 25 ರಕ್ತದ ಯುನಿಟ್‌ಗಳನ್ನು ಸಂಗ್ರಹಿಸಲಾಯಿತು. ಡಾ. ಆರ್‌.ಟಿ. ಪವಾಡಶೆಟ್ಟರ, ಪ್ರೊ. ವಾಗೀಶ ಗು. ರೇಶ್ಮಿ, ಪ್ರೊ. ವೀರಣ್ಣ ಬಡಿಗೇರ, ಪ್ರೊ. ರಾಜು ಯಲಬರ‍್ಗಿ, ಅನೀಲ ಭಜಂತ್ರಿ, ಇಸ್ಮಾಯಿಲ್ ಚಿಲಕವಾಡ, ಕಿರಣ ಬೊರಕರ, ಅಕ್ಷತಾ ಅಣ್ಣಿಗೇರಿ, ರಾಘವೇಂದ್ರ ಹೊಸಳ್ಳಿ ಸೇರಿದಂತೆ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.