ಸಾರಾಂಶ
ಕನ್ನಡಪ್ರಭ ವಾರ್ತೆ, ಕಡೂರು
ಭ್ರೂಣ ಹತ್ಯೆಯಂತಹ ಕ್ರೂರತೆಯಿಂದಾಗಿ ಹೆಣ್ಣು ಮತ್ತು ಗಂಡಸರ ಸಂಖ್ಯೆಯಲ್ಲಿ ಅಸಮಾನತೆ ಆಗುತ್ತಿರುವುದು ಆತಂಕದ ಸಂಗತಿ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಹನುಮಂತಪ್ಪ ಆತಂಕ ವ್ಯಕ್ತಪಡಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ವಿಕಸನ ಸಂಸ್ಥೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಹಕ್ಕುಗಳು ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 1909 ರಲ್ಲಿ ಮಹಿಳೆಯರ ಹೋರಾಟ, ತ್ಯಾಗ, ಬಲಿದಾನದಿಂದ ವಿಶ್ವದಾದ್ಯಂತ ಇಂದು ಈ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತದಲ್ಲಿ ಮಹಿಳೆಗೆ ವಿಶೇಷ ಸ್ಥಾನ ಸಿಗಲು ಮನೆ ಕೆಲಸದಿಂದ ಹಿಡಿದು ಪುರುಷರಿಗಿಂತ ಯಾವುದಕ್ಕೂ ಕಡಿಮೆ ಇಲ್ಲದಂತೆ ನಿಂತಿದ್ದಾಳೆ. ಕಾನೂನಿನಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ಕಲ್ಪಿಸಿದೆ ಆದರೆ ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿರುವುದು ವಿಪರ್ಯಾಸ. ಕುಟುಂಬದಂತೆ ಎಲ್ಲ ಕ್ಷೇತ್ರಗಳಲ್ಲೂ ಜವಾಬ್ದಾರಿ ನಿರ್ವಹಿಸುತ್ತಾಳೆ. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾಮಣಿಗಳ ಮೇಲಿನ ದಬ್ಬಾಳಿಕೆ ನಿಂತಿಲ್ಲ. ಕಾನೂನು ಮಹಿಳೆಯರಿಗೆ ಆದ್ಯತೆ ನೀಡಿದ್ದರೂ ಅದನ್ನು ಪಾಲಿಸದಿರುವವರು ಇದ್ದಾರೆ ಎಂದರು.
ಸಮಾಜದಲ್ಲಿ ಭ್ರೂಣ ಹತ್ಯೆಯಿಂದ ಮಹಿಳೆಯರ ಸಂಖ್ಯೆ ಕಡಿಮೆಯಾಗಿದೆ. ಕಾನೂನುಗಳು ಮಹಿಳೆಯರ ಶೋಷಣೆ ತಪ್ಪಿಸಲು ಇದ್ದರೂ ಪುರುಷ ಮತ್ತು ಮಹಿಳೆಯರ ನಡುವೆ ಸಮಾನತೆ ಕಡಿಮೆಯಾಗಿದೆ. ಮಹಿಳೆಯರ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಮನಸ್ಸು ಬದಲಿಸುವ ಸಮಾನತೆ ಮಾಡುವ ಮೂಲಕ ಕಾಪಾಡಬೇಕಾಗಿದೆ. ಈ ನಿಟ್ಟಲ್ಲಿ ವಿಕಸನ ಸಂಸ್ಥೆ ಜವಾಬ್ದಾರಿ ಮೂಡಿಸು ವಲ್ಲಿ ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಸ್ವತಹ ರಚಿಸಿದ ಗೀತೆ ಹಾಡಿ ರಂಜಿಸಿದರು.ಹೆಚ್ಚುವರಿ ನ್ಯಾಯಾಧೀಶರಾದ ಸವಿತಾರಾಣಿ ಮಾತನಾಡಿ, ನಾನು ಮಹಿಳೆ ಎಂಬ ಹೆಮ್ಮೆ ನಮ್ಮ ಪ್ರತಿಯೊಬ್ಬ ಮಹಿಳೆ ಯರಲ್ಲೂ ಇರಬೇಕು. ಏಕೆಂದರೆ ಕುಟುಂಬ ನಿಭಾಯಸುವಂತೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲು ಇಡುವ ಮೂಲಕ ದಾಖಲೆ ಮಾಡುತ್ತಿರುವುದು ಮಹಿಳೆಯರು ಹೆಮ್ಮೆ ಪಡಬೇಕು. ನಮ್ಮಂತವರು ಕೂಡ ಇಂತಹ ವೇದಿಕೆಯಲ್ಲಿರಲು ತಾಯಿ, ಅಕ್ಕ, ಹೆಂಡತಿ, ತಂಗಿ ಗೆಳತಿಯಾಗಿ ಅವಳ ಈ ಪಾತ್ರಗಳು ಕಾರಣ. ಹಾಗಾಗಿ ಮಹಿಳೆಯರನ್ನು ಸಂರಕ್ಷಿಸಲು ಕಠಿಣ ಕಾನೂನು ಗಳನ್ನು ಮಾಡಿದ್ದು ಭ್ರೂಣ ಹತ್ಯೆನಿಯಂತ್ರಿಸಲು ಕ್ರಮಗಳು ಮತ್ತು ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹಾಂತೇಶ ಭಜಂತ್ರಿ ಮಾತನಾಡಿ, ಪ್ರತಿಯೊಂದು ಕ್ಷೇತ್ರ ದಲ್ಲೂ ಮಹಿಳೆಯರ ಪಾತ್ರ ಹೆಚ್ಚಿದೆ. ನದಿಗಳು, ಗೋವು ಮತ್ತಿತರಕ್ಕೆ ಮಹಿಳೆಯರ ಹೆಸರನ್ನು ಇಡುವ ಮೂವಕ ಮಹಿಳೆ ಯರನ್ನು ಗೌರವಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು.ವಿಕಸನ ಸಂಸ್ಥೆ ಅಧ್ಯಕ್ಷ ವರ್ಗಿಸ್ ಕ್ಲೀಟಸ್, ಸಿಡಿಪಿಒ ಶಿವಪ್ರಕಾಶ್, ಮುತ್ತೂಟ್ ನ ಪ್ರಸಾದ್ ಕುಮಾರ್, ಶ್ರೀನಿವಾಸ್, ಮುಕುಂದ್, ಲಕ್ಷ್ಮಣ್, ಮನೋಜ್, ವಸಂತಕುಮಾರಿ, ಕುಮಾರಿ ಶಿಬಾ ವರ್ಗೀಸ್, ಜಿಸಿ.ಮಮತಾ, ಲತಾ, ಪುಷ್ಪ, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಂಘ-ಸಂಸ್ಥೆಗಳ ಮಹಿಳೆಯರು ಉಪಸ್ಥಿತರಿದ್ದರು.
13ಕೆಕೆಡಿಯು1. ಕಡೂರು ಪಟ್ಟಣದ ಬಿ ಆರ್ ಅಂಬೇಡ್ಕರ್ ಭವನದಲ್ಲಿ ವಿಕಸನ ಸಂಸ್ಥೆ, ಮುತ್ತೂಟ್ ಹಾಗು ನಡೆದ ವಿಶ್ವ ಮಹಿಳಾ ದಿನಾಚರಣೆಯನ್ನು ಜಿಲ್ಲಾ ನ್ಯಾಯಾಧೀಶ ಹನುಮಂತಪ್ಪ ಉದ್ಘಾಟಿಸಿದರು.