ನರೇಗಾ ಮಾಹಿತಿಗೆ ಬಿಎಫ್‌ಟಿಗಳಿಂದ ಕ್ಷೇತ್ರ ಭೇಟಿ

| Published : May 20 2024, 01:39 AM IST

ನರೇಗಾ ಮಾಹಿತಿಗೆ ಬಿಎಫ್‌ಟಿಗಳಿಂದ ಕ್ಷೇತ್ರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಖಾನಾಪುರ: ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್ ಕೇಂದ್ರ, ಬೆಳಗಾವಿ ಜಿಲ್ಲಾ ಪಂಚಾಯತಿ ಹಾಗೂ ಎಸ್ಐಆರ್‌ಡಿ ಮೈಸೂರು ವತಿಯಿಂದ ಬಿಎಫ್‌ಟಿ ತರಬೇತಿ ಪಡೆಯುತ್ತಿರುವ ಉಡುಪಿ ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ 20ಕ್ಕೂ ಹೆಚ್ಚು ಶಿಬಿರಾರ್ಥಿಗಳು ಗುರುವಾರ ತಾಲೂಕಿನ ನಂದಗಡ ಗ್ರಾಮ ಪಂಚಾಯತಿಗೆ ಕ್ಷೇತ್ರ ಭೇಟಿ ನೀಡಿದರು.

ಬಿಎಫ್‌ಟಿ ಶಿಬಿರಾರ್ಥಿಗಳಿಗೆ ದಕ್ಷಿಣ ಕನ್ನಡ ಸಹಾಯಕ ಜಿಲ್ಲಾ ಕಾರ್ಯಕ್ರಮಗಳ ಸಮನ್ವಯಾಧಿಕಾರಿ ಕಿಶನರಾವ್.ಬಿ.ಎಸ್ ಹಾಗೂ ಸವದತ್ತಿ ತಾಲೂಕಾ ವಿಕೇಂದ್ರೀಕೃತ ತರಬೇತಿ ಸಂಯೋಜಕ ಮಲ್ಲಿಕಾರ್ಜುನ ಚಚಡಿ, ನಂದಗಡ ಗ್ರಾಪಂ ಪಿಡಿಒ ಸಾಗರಕುಮಾರ ಬಿರಾದಾರ, ಡಿಇಒ ಸಂತೋಷ ಕೊಪ್ಪದಮಠ ಹಾಗೂ ಇತರರು ನಂದಗಡ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಅನುಷ್ಠಾನ, ಕಾಮಗಾರಿಗಳು, ಕೂಲಿಕಾರರ ಬಗ್ಗೆ ಮಾಹಿತಿ ನೀಡಿದರು.ಬಳಿಕ ಶಿಬಿರಾರ್ಥಿಗಳು ಗ್ರಾಪಂ ವ್ಯಾಪ್ತಿಯಲ್ಲಿ ಮನೆ-ಮನೆ ಭೇಟಿ ನಡೆಸಿ, ನರೇಗಾ ಕೂಲಿಕಾರರು ಹಾಗೂ ಗ್ರಾಮಸ್ಥರಿಂದ ನರೇಗಾ ಯೋಜನೆಯ ವಿವಿಧ ಮಾಹಿತಿ ಪಡೆದರು. ನಂತರ ಗ್ರಾಪಂ ಆವರಣದಲ್ಲಿ ರಂಗೋಲಿ ಮೂಲಕ ಗ್ರಾಮದ ಸಾಮಾಜಿಕ ಹಾಗೂ ಸಂಪನ್ಮೂಲ ನಕ್ಷೆ ಬಿಡಿಸಿ, ಗ್ರಾಮದ ಸಂಪೂರ್ಣ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ನರೇಗಾ ಯೋಜನೆಯ ತಾಪಂ ತಾಂತ್ರಿಕ ಸಂಯೋಜಕ ಮುರಗೇಶ ಯಕ್ಕಂಚಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ, ಗ್ರಾಪಂ ಕಾರ್ಯದರ್ಶಿ ವಿಠ್ಠಲ ಹೋಳಿ, ಸಿಬ್ಬಂದಿ ಶ್ರೀಧರ ನಂದಗಡಕರ, ಸಂತೋಷ ಸಾತನ್ನವರ ಹಾಗೂ ಇತರರು ಇದ್ದರು.