ಹೊಸಕೋಟೆಯ ಯಾದವ ಭವನಕ್ಕೆ ೫೦ ಲಕ್ಷ ರು.: ಶಾಸಕ ಶರತ್

| Published : Aug 27 2024, 01:32 AM IST

ಹೊಸಕೋಟೆಯ ಯಾದವ ಭವನಕ್ಕೆ ೫೦ ಲಕ್ಷ ರು.: ಶಾಸಕ ಶರತ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ಮನುಷ್ಯನು ತಮ್ಮ ತಮ್ಮ ಜೀವನದಲ್ಲಿ ಆದ್ಯಾತ್ಮಿಕ ಹಾಗೂ ಪವಿತ್ರ ಗ್ರಂಥವಾದ ಭಗವದ್ಗೀತೆಯ ಸಾರವನ್ನು ಜೀವನದಲ್ಲಿ ಅಳಡಿಸಿಕೊಂಡರೆ ಬದುಕು ಸಾರ್ಥಕತೆ ಕಾಣುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು. ಹೊಸಕೋಟೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸಕೋಟೆ ಪ್ರತಿಯೊಬ್ಬ ಮನುಷ್ಯನು ತಮ್ಮ ತಮ್ಮ ಜೀವನದಲ್ಲಿ ಆದ್ಯಾತ್ಮಿಕ ಹಾಗೂ ಪವಿತ್ರ ಗ್ರಂಥವಾದ ಭಗವದ್ಗೀತೆಯ ಸಾರವನ್ನು ಜೀವನದಲ್ಲಿ ಅಳಡಿಸಿಕೊಂಡರೆ ಬದುಕು ಸಾರ್ಥಕತೆ ಕಾಣುತ್ತದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಗರದ ತಾಲುಕು ಆಡಳಿತ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಯಾದವ ಸಮುದಾಯ ಭವನಕ್ಕೆ ನನ್ನ ವೈಯಕ್ತಿಕವಾಗಿ ಸಹ ಅನುದಾನ ನೀಡುವ ಭರವಸೆ ನೀಡಿದ್ದೆ. ಅದರ ಭಾಗವಾಗಿ ಒಂದು ಕಂತಿನಲ್ಲಿ ಒಂದಿಷ್ಟು ಅನುದಾನ ನೀಡಿದ್ದು ನೀವು ಹೇಳಿಕದ ದಿನದಂದೆ ಉಳಿದ ಅನುದಾನ ನೀಡುತ್ತೇನೆ. ಹಾಗೂ ಸರ್ಕಾರದಿಂದ ಸಹ 50 ಲಕ್ಷ ಅನದಾನ ಒದಗಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದರು.

ತಾಲೂಕು ಯಾದವ ಸಂಘದ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ ತಾಲೂಕು ಕೇಂದ್ರದಲ್ಲಿ ಸುಮಾರು 20 ಗುಂಟೆ ಜಾಗದಲ್ಲಿ ಯಾದವ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗುತ್ತಿದ್ದು ಆ ಜಾಗವನ್ನು ಖಾಯಂ ಮಂಜೂರಾತಿ ಮಾಡಿಸಲು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿ ಒತ್ತಡ ಹಾಕಿ ಮಂಜೂರಾತಿ ಮಾಡಿಸಬೇಕು. ಹಾಗೂ ಸರ್ಕಾರದಿಂದ ೫೦ ಲಕ್ಷ ಅನುದಾನವನ್ನು ಸಹ ಮಂಜೂರಾತಿಗೆ ಮನವಿ ಸಲ್ಲಿಸಲಾಗಿದ್ದು ತ್ವರಿತವಾಗಿ ಅನುದಾನವನ್ನು ಮಂಜೂರು ಮಾಡಿಸಿಕೊಡಬೇಕು. ಸಮುದಾಯ ಭವನ ಕಾಮಗಾರಿ ಸಾಕಷ್ಟು ಪೂರ್ಣಗೊಂಡಿದ್ದು ಉದ್ಘಾಟನೆ ಬಳಿಕ ಸಮುದಾಯ ಭವನದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತರಗತಿಗಳನ್ನು ಪ್ರಾರಂಭ ಮಾಡುವುದಾಗಿ ತಿಳಿಸಿದರು. ತಹಸೀಲ್ದಾರ್ ನರೇಂದ್ರಬಾಬು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ, ಉದ್ಯಮಿ ಬಿ.ವಿ.ಭೈರೇಗೌಡ, ತಾಪಂ ಮಾಜಿ ಅಧ್ಯಕ್ಷ ರಾಮೇಗೌಡ, ಹಿರಿಯ ಮುಖಂಡರುಗಳಾದ ರ‍್ರೇಗೌಡ, ಮುತ್ಸಂದ್ರ ಆನಂದಪ್ಪ, ಎಸಿ ಆನಂದ್ ಕುಮಾರ್, ಡಾ.ವೆಂಕಟರೆಡ್ಡಿ, ವೆಂಕಟೇಗೌಡ, ಚಿಕ್ಕರಾಜಪ್ಪ, ಮುನಿಶಾಮಣ್ಣ, ರಾಜ್ ಗೋಪಾಲ್, ಸೀನಪ್ಪ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.