ಸಾರಾಂಶ
ವಡಗೇರಾ: ಸ್ವಾತಂತ್ರ ಹೋರಾಟಗಾರರ ತ್ಯಾಗ, ಬಲಿದಾನ ಹೋರಾಟದ ಫಲವಾಗಿ ನಮ್ಮ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರಕಿದೆ. ಅವರ ಸ್ಮರಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್ ಹೇಳಿದರು. ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕವು ಸಂತ, ಶರಣ, ಕವಿ, ಜ್ಞಾನಿಗಳ ಬಿಡು. ಸಂಪತ್ಭರಿತ ನಾಡು ಎಂದರು. ವಿದ್ಯಾರ್ಥಿಗಳು 371(ಜೆ) ಕಲಂ ಪ್ರಮಾಣ ಪತ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಲ್ಯಾಣ ಕರ್ನಾಟಕಕ್ಕೆ ಸರ್ದಾರ್ ವಲ್ಲಭಬಾಯ್ ಪಟೇಲರ ಕೊಡುಗೆ ಅಪಾರ ಎಂದು ಹೇಳಿದರು.ಗ್ರೇಡ್-2 ತಹಸೀಲ್ದಾರ್ ಪ್ರಕಾಶ್ ಹೊಸಮನಿ, ಸಂಗಮೇಶ್ ದೇಸಾಯಿ, ಶ್ರೀರಾಮುಲು, ತಿಪ್ಪೇಸ್ವಾಮಿ, ಆರ್.ಐ. ಸಂಜೀವ್ ಕಾವಲಿ, ವಿ.ಎ. ಸಿದ್ದಣ್ಣಗೌಡ ಗುರುಸ್ವಾಮಿ, ರಾಜಶೇಖರ ಸ್ವಾಮಿ, ಸಿದ್ದಮ್ಮ, ಮುಖಂಡರಾದ ಅಶೋಕ್ ಸಾಹುಕಾರ್ ಕರಣಿ, ರಂಗಮ್ಮ ಹುಲಿ, ಹಣಮಂತರಾಯ ಜಡಿ, ಬಾಷುಮಿಯಾ ನಾಯ್ಕೋಡಿ, ಶರಣು ಇಟಗಿ, ಡಾ. ಮರಿಯಪ್ಪ ನಾಟೇಕಾರ, ಅಬ್ದುಲ್ ಚಿಗನೂರ, ಶಿವರಾಜ್ ಬಾಗುರ, ಯಂಕಣ್ಣ ಬಸಂತಪುರ, ದ್ಯಾವಣ್ಣ ಚೆನ್ನೂರ, ಭೀಮಣ್ಣ ಚಿನ್ನಿ, ಮಲ್ಲಪ್ಪ ಮಾಗನೂರ, ಶಿವಪ್ಪ ಡುರೆ, ಮಹ್ಮದ್ ಖುರೇಶಿ , ಫಕೀರ ಅಹ್ಮದ್ , ಸತೀಶ್ ಪೂಜಾರಿ ಇದ್ದರು.
----18ವೈಡಿಆರ್12: ವಡಗೇರಾ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
---000---