ಕುಡಿವ ನೀರಿನ ಕೆರೆ ಭರ್ತಿ ಮಾಡಿ, ಸಮರ್ಪಕ ನೀರು ಪೂರೈಸಿ: ಶಾಸಕ ಆರ್.ಬಸನಗೌಡ ತುರ್ವಿಹಾಳ

| Published : Jun 17 2024, 01:44 AM IST

ಕುಡಿವ ನೀರಿನ ಕೆರೆ ಭರ್ತಿ ಮಾಡಿ, ಸಮರ್ಪಕ ನೀರು ಪೂರೈಸಿ: ಶಾಸಕ ಆರ್.ಬಸನಗೌಡ ತುರ್ವಿಹಾಳ
Share this Article
  • FB
  • TW
  • Linkdin
  • Email

ಸಾರಾಂಶ

ಮಸ್ಕಿ ಕುಡಿಯುವ ನೀರಿನ ಕೆರೆ ತುಂಬಿಸಲು ಪೂರ್ವ ಸಿದ್ಧತೆಗಳನ್ನು ಶಾಸಕ ಆರ್.ಬಸನಗೌಡ ತುರ್ವಿಹಾಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಕುಡಿಯುವ ನೀರನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಡಲಾಗಿದ್ದು ಅಧಿಕಾರಿಗಳು ಕುಡಿಯುವ ನೀರಿನ ಕೆರೆಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ನಿಮಗದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿರುವ ಕುಡಿಯುವ ನೀರಿನ ಕೆರೆ ತುಂಬಿಸಲು ಕೈಗೊಂಡಿರುವ ಸಿದ್ಧತೆ ಪರಿಶೀಲಿಸಿ, ನಂತರ ಅಧಿಕಾರಿಗಳ ಸಭೆ ನಡೆಸಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಕುಡಿಯುವ ನೀರಿನ ಕೆರೆಗಳು ಖಾಲಿಯಾಗಿದ್ದು. ಆದ್ದರಿಂದ ಸರ್ಕಾರ ಕುಡಿಯುವ ನೀರಿಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬೀಡಲು ಸೂಚನೆ ನೀಡಿದ ಹಿನ್ನೆಲೆ ಕಾಲುವೆಯಿಂದ ಮಸ್ಕಿ ಕೆರೆ ತುಂಬಿಸಲಾಗುತ್ತಿದೆ. ಆದ್ದರಿಂದ ತಾಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ಕೆರೆ ಭರ್ತಿ ಮಾಡಿಸಬೇಕು. ಗ್ರಾಮ ಪಂಚಾಯತಿ ನರೇಗಾದಡಿ ಸಾಧ್ಯವಾದರೆ ಹೊಸ ಪೈಪ್ಲೈನ್, ಮೋಟರ್ ಅಳವಡಿಸಿ ನೀರು ತುಂಬಿಸುವಂತೆ ಪಿಡಿಒಗಳಿಗೆ ಸೂಚಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕೆರೆಗಳ ಪರಿಶೀಲನೆ ಮಾಡಿ ವರದಿ ನೀಡಬೇಕು ಎಂದರು.ಈ ವೇಳೆ ತಹಸೀಲ್ದಾರ್ ಅರಮನೆ ಸುಧಾ, ಪುರಸಭೆ ಮುಖ್ಯಾಧಿಕಾರಿನರಸರೆಡ್ಡಿ,ತಾಪಂ ಇಒ ಉಮೇಶ, ನೀರಾವರಿ ನಿಗಮದಎಇಇ ದಾವುದ್ ಸೇರಿದಂತೆ ಹಿರಿಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.