ಸಾರಾಂಶ
ಅಥಣಿ ತಾಲೂಕಿನ ಪ್ರತಿ ಸಹಕಾರಿ ಸಂಘಗಳಿಗೆ ರಿನಿವಲ್ ಸಮಯದಲ್ಲಿ ಹಣಕಾಸಿನ ಸಹಾಯ ಮಾಡುವ ಮೂಲಕ ಮತದಾರರ ಋಣ ತೀರಿಸುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಅಥಣಿ ತಾಲೂಕಿನ ಪ್ರತಿ ಸಹಕಾರಿ ಸಂಘಗಳಿಗೆ ರಿನಿವಲ್ ಸಮಯದಲ್ಲಿ ಹಣಕಾಸಿನ ಸಹಾಯ ಮಾಡುವ ಮೂಲಕ ಮತದಾರರ ಋಣ ತೀರಿಸುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭೆಯ ಮೆಟ್ಟಿಲು ಏರಲು ನನಗೆ ಅವಕಾಶ ಕಲ್ಪಿಸಿದ್ದೇ ಸಂಬರಗಿ ಮತ್ತು ಸುತ್ತಮುತ್ತಲಿನ 30 ಗ್ರಾಮಗಳ ಮತದಾರರು. ಇಂತಹ ಮತದಾರರ ಉಪಕಾರ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.
ಅಧಿಕಾರ, ಅಂತಸ್ತು, ಸಂಪತ್ತು ಶಾಶ್ವತ ಅಲ್ಲ. ಇದ್ದಾಗ ಜನರಿಗೆ ಅನಕೂಲವಾಗುವ ಕೆಲಸ ಕಾರ್ಯ ಮಾಡಿದಲ್ಲಿ ಮಾತ್ರ ನಾವು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಹೇಳಿದ ಅವರು, ಸಹಕಾರ ಕ್ಷೇತ್ರ ಇರದೇ ಹೋದಲ್ಲಿ ಗ್ರಾಮೀಣ ಜನರ ಬದುಕು ದುಸ್ತರವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.ಸಹಕಾರ ಸಂಘದ ಉಪಾಧ್ಯಕ್ಷ ಅಣ್ಣಾಸಾಹೇಬ ಮಿಸಾಳ ಮಾತನಾಡಿ, ಶಾಸಕ ಲಕ್ಷ್ಮಣ ಸವದಿಯವರು ನಮ್ಮ ಸಹಕಾರಿ ಸಂಘಕ್ಕೆ ಬೆನ್ನೆಲುಬಾಗಿ ನಿಂತಿರುವುದರಿಂದಲೇ ಪ್ರಸಕ್ತ ಸಾಲಿನಲ್ಲಿ ₹4.95ಕೋಟಿ ಪತ್ತು ಜಮಾ ಆಗಿದೆ. ಸಂಘದ ಬೆಳವಣಿಗೆ ಈ ಭಾಗದ ರೈತರಿಗೆ ಸಾಕಷ್ಟು ಅನಕೂಲವಾಗಿದೆ ಎಂದರು.
ನಾಗನೂರ ಪಿ.ಕೆ. ಗ್ರಾಮದ ಶಿವಸಿದ್ಧ ಬೀರಲಿಂಗೇಶ್ವರ ಮಹಾರಾಜರು ಸಾನ್ನಿಧ್ಯ, ವಿಲಾಸ ಟೋಣೆ ಅಧ್ಯಕ್ಷತೆ ವಹಿಸಿದ್ದರು. ಸಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ದಳವಾಯಿ, ಧುರೀಣರಾದ ವಿನಾಯಕ ಬಾಗಡಿ, ಉತ್ತಮ ಪಾಟೀಲ, ಬಾಳು ಹಜಾರೆ, ಯಶವಂತ ಪಾಟೀಲ, ಘೂಳಪ್ಪ ಜತ್ತಿ, ಶಿವಾನಂದ ಗೊಲಭಾವಿ, ಸಿದರಾಯ ತೇಲಿ, ಅಬ್ದುಲ್ ಮುಲ್ಲಾ, ರಾಜು ಪಾಸಲೆ, ಬೀರಪ್ಪ ಉಗಾರೆ, ಬಿಡಿಸಿಸಿ ಬ್ಯಾಂಕಿನ ಶಂಕರ ನಂದೇಶ್ವರ, ಆಡಳಿತ ಮಂಡಳಿ ಸದಸ್ಯರಾದ ಧರ್ಮು ನರೋಟಿ, ತುಕಾರಾಮ ಶೇಳಕೆ, ಟೋಪಾಜಿ ಅವಳೇಕರ, ದೀಪಕ ಮಾನೆ, ಪರಶುರಾಮ ನಾಟೇಕರ, ಅರುಣ ಟೋಣೆ, ಗೌರಕ್ಕ ಗಸ್ತಿ, ಸುಷ್ಮಾ ದೇವಮಾನೆ, ಸಾವಿತ್ರಿ ಅವಳೇಕರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಂಡಿಬಾ ಮಿಸಾಳ ಉಪಸ್ಥಿತರಿದ್ದರು.ಅಥಣಿ ತಾಲೂಕಿನ ಉತ್ತರ ಭಾಗದ ಪ್ರದೇಶ ಒಳ್ಳೆಯ ಫಲವತ್ತಾದ ಭೂಮಿ ಹೊಂದಿದ್ದರೂ ಕೂಡ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ಇರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಕುರಿತು ಅನೇಕ ಬಾರಿ ಅಧಿವೇಶನಗಳಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಅಗತ್ಯವಾಗಿ ಬೇಕಾದ ಅನುದಾನ ಮಂಜೂರು ಮಾಡಲು ಆಗ್ರಹಿಸಿದ್ದೇನೆ.-ರಾಜು ಕಾಗೆ ಕಾಗವಾಡ ಶಾಸಕ