ಎಚ್ಚರಿಕೆಯಿಂದ ಹೆಜ್ಜೆ ಇಟ್ಟಾಗ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಸಾಧ್ಯ

| Published : Sep 20 2025, 01:02 AM IST

ಎಚ್ಚರಿಕೆಯಿಂದ ಹೆಜ್ಜೆ ಇಟ್ಟಾಗ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘಗಳನ್ನು ಸ್ಥಾಪಿಸಿ ಅದನ್ನು ಬೆಳೆಸುವುದು ಸುಲಭದ ಮಾತಲ್ಲ.

ಶಿರಸಿ: ಸಹಕಾರಿ ಸಂಘಗಳ ವಿರುದ್ಧ ಅಪಪ್ರಚಾರ ಸಾಮಾನ್ಯ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟಾಗ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಹಕಾರಿ ಎಸ್‌.ಪಿ. ಶೆಟ್ಟಿ ಹೇಳಿದರು.

ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ನಿಯಮಿತದ 2024-25ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳನ್ನು ಸ್ಥಾಪಿಸಿ ಅದನ್ನು ಬೆಳೆಸುವುದು ಸುಲಭದ ಮಾತಲ್ಲ. ವಿರೋಧ, ಅಪಪ್ರಚಾರ ಇವುಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ ಭೂತೇಶ್ವರ ಸಹಕಾರಿಯು ಪ್ರತಿಕೂಲ ಪರಿಸ್ಥಿತಿ ಎದುರಿಸಿ ಶೇ. 40ರಷ್ಟು ಸ್ವಂತ ನಿಧಿ ಹೊಂದಿದೆ. ಸಹಕಾರ ಚಳಿವಳಿ ಪ್ರಾರಂಭವಾಗಿ 125 ವರ್ಷವಾಗಿದ್ದು, ಭೂತೇಶ್ವರ ಸಹಕಾರಿ ಪತ್ತಿನ ಸಂಘ ಸ್ಥಾಪನೆಗೊಂಡು 24 ವರ್ಷ ಪೂರೈಸಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಕಾರಿಯ ಅಧ್ಯಕ್ಷ ಶ್ರೀಧರ ಮೊಗೇರ ಮಾತನಾಡಿ, ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ ₹51.61 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಹಕಾರಿ ಧುರೀಣರಾದ ವಸಂತ ಶೆಟ್ಟಿ ಅವರಿಂದ ಸ್ಥಾಪಿತವಾದ ಈ ಸಂಸ್ಥೆ, ತನ್ನ ಸದಸ್ಯರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸೇವೆಗಳನ್ನು ಒದಗಿಸುತ್ತಿದೆ. ಶೇ. 9ರ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ, ಶೇ. 11ರ ಬಡ್ಡಿದರದಲ್ಲಿ ವಾಹನ ಸಾಲ ಹಾಗೂ ಹೊಸದಾಗಿ ಶೇ. 12ರ ಬಡ್ಡಿದರದಲ್ಲಿ ಅಡಮಾನ ಸಾಲಗಳನ್ನು ನೀಡಲಾಗುತ್ತಿದೆ. ಮಾ. 31, 2025ರ ಅಂತ್ಯಕ್ಕೆ ಸಂಘವು 4,492 ಸದಸ್ಯರನ್ನು ಹೊಂದಿದ್ದು, ವಿವಿಧ ಠೇವಣಿಗಳಿಂದ ಒಟ್ಟು ₹12.08 ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಿದೆ ಎಂದರು.

ಹಿರಿಯ ಸಹಕಾರಿ ಎಸ್.ಪಿ. ಶೆಟ್ಟಿ ಹಾಗೂ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಗಿಡಮಾವಿನಕಟ್ಟಾ, ನಿರ್ದೇಶಕರಾದ ವಸಂತ ಶೆಟ್ಟಿ, ಕೇಶವ ಶೆಟ್ಟಿ, ಅಮಿತ ಹೆಗಡೆ, ರಾಘವೇಂದ್ರ ಭಟ್, ಉಮಾಕಾಂತ ಶೆಟ್ಟಿ, ರವಿ ಶೆಟ್ಟಿ, ಫೀಟರ್ ಫರ್ನಾಂಡಿಸ್, ತುಕಾರಾಮ ನೆತ್ರೇಕರ, ಮಂಗಲಾ ಮಳಗಿ, ಸಾವಿತ್ರಿ ನಾಯ್ಕ, ಆಂತರಿಕ ಸಲಹೆಗಾರ ಪ್ರಕಾಶ ಮದ್ಗುಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ವಸಂತ ಶೆಟ್ಟಿ ಮತ್ತಿತರು ಇದ್ದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ದೀಪ್ತಿ ಜೋಗಳೇಕರ, ಪ್ರತೀಕ್ಷಾ ಶೆಟ್ಟಿ, ಸ್ಫೂರ್ತಿ ಶೆಟ್ಟಿ, ಸೋನಿಕಾ ಶೆಟ್ಟಿ, ಮಾನ್ಯಾ ಶೆಟ್ಟಿ, ಸಿಂಚನಾ ಶೆಟ್ಟಿ, ಧರಣಿ ಶೆಟ್ಟಿ, ಧನ್ಯಾ ಮಡಿವಾಳ, ದೀಕ್ಷಾ ಶೆಟ್ಟಿ, ವಿಕಾಸ ಭಜಂತ್ರಿ ಅವರನ್ನು ಪುರಸ್ಕರಿಸಲಾಯಿತು. ಸಹಕಾರಿಯ ಪ್ರಥಮ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಹಾಗೂ ತಾಲೂಕಾಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಅವರನ್ನು ಸನ್ಮಾನಿಸಲಾಯಿತು. ಸಿಂಚನಾ ಶೆಟ್ಟಿ ಪ್ರಾರ್ಥಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.